ADVERTISEMENT

ಕುಡಿವ ನೀರು: ರಾಜಕೀಯ ಬೇಡ

ಮಾಜಿ ಸಚಿವ ಬೆಳ್ಳುಬ್ಬಿ ಟೀಕೆಗೆ ಶಾಸಕ ಶಿವಾನಂದ ಪಾಟೀಲ ತಿರುಗೇಟು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:15 IST
Last Updated 15 ಏಪ್ರಿಲ್ 2017, 5:15 IST

ಬಸವನಬಾಗೇವಾಡಿ: ನೀರಿನ ವಿಷಯ ದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅವರು ಬಿಜೆಪಿ ಸರ್ಕಾರ ಇರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರದ ಮನವೊಲಿಸಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ  ನೀರು ಹರಿಸುವಂತಹ ಪ್ರಯತ್ನ ಮಾಡಲಿ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ಧಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೃಷ್ಣಾ ನದಿಯಲ್ಲಿ 507.84 ಮೀ. ವರೆಗೆ ನೀರಿತ್ತು. ಈ ಬಾರಿ ನೀರು ಕಡಿಮೆ ಯಾಗಲು ಕಾರಣ ಯಾರು ಎಂಬುದನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ಶಾಸಕರ ನಿರ್ಲಕ್ಷ್ಯ ಕಾರಣ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಹೇಳಿದರು. 

ಈ ವರ್ಷ ನದಿಯಲ್ಲಿ ನೀರು ಕಡಿಮೆ ಯಾಗಲು ಯಾರು ಕಾರಣ ಎಂಬುದನ್ನು ನೀರಾವರಿ ಸಚಿವರು ಸ್ಪಷ್ಟಪಡಿಸಬೇಕು. ತನಿಖೆ ನಡೆಸಿ ನದಿಯಲ್ಲಿ ನೀರು ಕಡಿಮೆ ಯಾಗಲು  ಕಾರಣರಾದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಲಮಟ್ಟಿ ಜಲಾಶಯದ ಡೆಡ್‌ ಸ್ಟೋರೆಜ್‌ನಿಂದ ನೀರು ಬಿಡುಗಡೆ ಮಾಡಿರುವ ಕಾರಣ ಕುಡಿಯುವ ನೀರು ಸರಬರಾಜಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಮಾ.27 ರಂದು ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯುವ ಮೂಲಕ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಡೆಡ್‌ ಸ್ಟೋರೇಜನಿಂದ ನೀರು ಬಿಡುಗಡೆ ಯಾಗುತ್ತಿರುವುದರಿಂದ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದರಿಂದಾಗಿ ವಿಜಯಪುರ, ಬಾಗಲಕೋಟ ಸೇರಿದಂತೆ ಹುನಗುಂದ, ಇಲಕಲ್‌, ಗುಳೇದಗುಡ್ಡ, ಕಮತಗಿ, ಬಸವನಬಾಗೇವಾಡಿ ಪಟ್ಟಣ ಗಳಿಗೆ ನೀರು ಸರಬರಾಜಿಗೆ ತೊಂದರೆ ಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸಕ್ತ  ಬೇಸಿಗೆ ಕಳೆಯಲು    ಇನ್ನೂ 100 ದಿನಗಳಿದ್ದು, ಇದೇ ರೀತಿ ಜಲಾಶಯದಲ್ಲಿರುವ ನೀರನ್ನು ಬಿಡುಗಡೆ ಮಾಡುವುದು ಮುಂದುರೆದರೆ ಎರಡು ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಪಟ್ಟಣದ ನೀರು ಸರಬರಾಜು ಸ್ಥಗಿತ ಗೊಂಡು ಹಾಹಾಕರ ಉಂಟಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಸುಮಾರು 3 ಟಿ.ಎಂ.ಸಿ ನೀರು ಬಿಡುಗಡೆ ಗೊಳಿಸುವ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು.

ಜನರಿಗೆ ಕುಡಿಯಲು ನೀರು, ಜಲಚರ ಸೇರಿದಂತೆ ಪ್ರಾಣಿಗಳಿಗೆ  ನೀರು ಬೇಕು. ಪರಿಸ್ಥಿತಿಯನ್ನು ನೋಡಿ ಮುಂದಾಲೋಚನೆ ಮಾಡದೇ  ನೀರು ಬಿಡುವುದು ಅಪರಾಧ ಎಂದರು.

‘ಕೃಷಿ ಹೊಂಡ, ಕೊಳವೆಬಾವಿ, ತೆರೆದಬಾವಿ ಹೊಂದಿದ ರೈತರ ಪಂಪ್‌ ಸೆಟ್‌ ಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವುದು ಅಪರಾಧ. ಅಧಿಕಾರಿಗಳ ಇಂತಹ ಧೋರಣೆಯಿಂದಾಗಿ ರೈತರು ಮತ್ತಷ್ಟು ತೊಂದರೆ ಅನುಭವಿಸು ವಂತಾಗಿದೆ. ಅಧಿಕಾರಿಗಳು ತೋಟ ಗಳಲ್ಲಿನ ವಿದ್ಯುತ್‌ ಕಡಿತ ಗೊಳಿಸುವ ವಿಷಯ ನನ್ನ ಗಮನಕ್ಕೂ ತಂದಿಲ್ಲ. ಮೊದಲೆ ರೈತರ ಬರಗಾಲ ದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದರಲ್ಲಿ ಸಕಾರಣ ಇಲ್ಲದೇ ವಿದ್ಯುತ್‌ ಕಡಿತಗೊಳಿ ಸುವುದು ಸರಿಯಲ್ಲ’ ಎಂದರು.

*
ಜಿಲ್ಲೆಯಲ್ಲಿ ಭಗೀರಥರು ಎಂದೇ ಎನಿಸಿಕೊಂಡವರು ಬೇಸಿಗೆಯ ಈ ದಿನಗಳಲ್ಲಾದರೂ ಜನರ ಮುಂದೆ ಪ್ರತ್ಯಕ್ಷರಾಗಿ ನೀರು ಹರಿಸಲು ಮುಂದಾಗಲಿ.
-ಶಿವಾನಂದ ಪಾಟೀಲ,
ಶಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.