ADVERTISEMENT

ಕೊಯ್ನಾದಿಂದ ಇನ್ನೂ 2 ಟಿಎಂಸಿ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:29 IST
Last Updated 19 ಏಪ್ರಿಲ್ 2017, 5:29 IST

ಬೆಂಗಳೂರು: ಕೊಯ್ನಾ ಜಲಾಶಯ ದಿಂದ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ 2 ಟಿ.ಎಂ.ಸಿ ಅಡಿ ನೀರು ಬಿಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ  ದೇವೇಂದ್ರ ಫಡಣವೀಸ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಪತ್ರ  ಬರೆದಿದ್ದಾರೆ.‘ಮಾರ್ಚ್‌ನಲ್ಲಿ  ರಾಜ್ಯ ಸರ್ಕಾರ ಮಾಡಿದ ಮನವಿಗೆ ಮಹಾರಾಷ್ಟ್ರವು ಸ್ಪಂದಿಸಿ,  ಏಪ್ರಿಲ್‌ 10 ರಿಂದ ಕೊಯ್ನಾ ಜಲಾಶಯದಿಂದ 2.365 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲು ಆರಂಭಿ ಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಅವರ ಸಜ್ಜನಿಕೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದ ರಿಂದ ಹಿಪ್ಪರಗಿ ಬ್ಯಾರೇಜ್‌ವರೆಗೆ ಮತ್ತು ಬೆಳಗಾವಿ ಜಿಲ್ಲೆಗೆ ಕುಡಿವ ನೀರು  ಸಿಕ್ಕಂತಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ 175 ತಾಲ್ಲೂಕುಗಳ ಪೈಕಿ 160 ತಾಲ್ಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಕುಡಿಯವ ನೀರಿನ ಕೊರತೆ ಅಧಿಕವಾಗಿದೆ. ಆದ್ದ ರಿಂದ ಕೊಯ್ನಾ ಜಲಾಶಯದಿಂದ ಹೆಚ್ಚು ವರಿಯಾಗಿ 2 ಟಿ.ಎಂ.ಸಿ ಅಡಿ ನೀರು ಬಿಡುಗಡೆ ಮಾಡಬೇಕು. ಈಗಾಗಲೇ ಬಿಡುಗಡೆ ಆಗುತ್ತಿರುವ ನೀರಿನ ಜತೆಗೆ 2 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿ ದರೆ ಕೊರ್ತಿ ಮತ್ತು ಕೊಲ್ಹಾರ ಬ್ಯಾರೇಜ್‌ಗೆ ಅತಿ ಬೇಗನೆ ನೀರು ತಲುಪು ತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಗೋವಾ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ:  ಗೋವಾದಲ್ಲಿ ನೆಲೆಸಿರುವ ಕರ್ನಾ ಟಕ ಮೂಲದ ಲಂಬಾಣಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಗೋವಾದ ಸಂಸ್ಕೃತಿಗೆ ಲಂಬಾಣಿ ಗಳು ಸರಿಹೊಂದುವುದಿಲ್ಲ ಎಂದು ನಿಮ್ಮ ಸರ್ಕಾರದ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಇದು ತಪ್ಪು ಸಂದೇಶ ರವಾನಿಸುತ್ತದೆ. ವೈವಿಧ್ಯತೆಯಲ್ಲಿಯೂ ಏಕತೆಯಿಂದ ಬದುಕುವುದು ಭಾರ ತೀಯ ಸಂಸ್ಕೃತಿ ಎಂಬುದನ್ನು ನೀವೂ ಒಪ್ಪುತ್ತೀರಿ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

‘ಕರ್ನಾಟಕದ ಬೇರೆ ಬೇರೆ ಭಾಗ ಗಳಿಂದ ಬಂದು ಗೋವಾದಲ್ಲಿ ನೆಲೆ ಸಿರುವ ಲಂಬಾಣಿಗಳು ಗೌರವ ಮತ್ತು ಹೆಮ್ಮೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ, ಗೋವಾದ ಸಂಸ್ಕೃತಿ, ಭಾಷೆ ಜೊತೆಗೆ ರಾಜ್ಯದ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.ನಿಮ್ಮ ಸಚಿವರಿಗೆ ಸಂಯಮದಿಂದ ಹೇಳಿಕೆ ನೀಡುವಂತೆ ಸೂಚನೆ ನೀಡಬೇಕೆಂದು ಮನವಿ ಮಾಡುತ್ತೇನೆ. ಈ ಸಂಬಂಧ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಅವರು ತಮ್ಮನ್ನು ಭೇಟಿ ಮಾಡಲಿದ್ದಾರೆ’ ಎಂದೂ ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.