ADVERTISEMENT

ತಿಕೋಟಾ ಗ್ರಾಮಕ್ಕೆ ಐಟಿಐ ಕಾಲೇಜು ಮಂಜೂರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 6:17 IST
Last Updated 6 ಜುಲೈ 2017, 6:17 IST

ಬಿಜ್ಜರಗಿ (ವಿಜಯಪುರ): ‘₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸರ್ಕಾರಿ ಐಟಿಐ ಕಾಲೇಜನ್ನು ತಿಕೋಟಾದಲ್ಲಿ ನಿರ್ಮಿಸ ಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜ್ಜರಗಿಯಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ನಡೆಸಿದ ಸಚಿವರು, ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸುಸಜ್ಜಿತ ಕಾಲೇಜು ಆರಂಭಿಸಲಾಗುವುದು ಎಂದರು.

‘ತಿಕೋಟಾ ಭಾಗದ ಜನರ ಅನು ಕೂಲಕ್ಕಾಗಿಯೇ ₹ 3600 ಕೋಟಿ ವೆಚ್ಚ ದಲ್ಲಿ 1.33 ಲಕ್ಷ ಎಕರೆ ಭೂಮಿ ನೀರಾ ವರಿಗೊಳಪಡಿಸುವ ಯೋಜನೆ ಕೈಗೆತ್ತಿ ಕೊಳ್ಳಲಾಗಿದೆ. ಈ ಭಾಗಕ್ಕೆ 6.2 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಇದ ರೊಂದಿಗೆ 23 ಹಳ್ಳಿಗಳಿಗೆ ಶಾಶ್ವತ ಬಹು ಹಳ್ಳಿ ಕುಡಿವ ನೀರಿನ ಯೋಜನೆ ಅನು ಷ್ಠಾನಗೊಳಿಸಲಾಗುತ್ತಿದೆ’ ಎಂದರು.

ಘೊಣಸಗಿ ಗ್ರಾಮಸ್ಥರು ಕೆರೆ ತುಂಬುವ ಯೋಜನೆಯ ಪೈಪ್‌ಲೈನ್ ಅಳವಡಿಸಬೇಕು. ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಿಸಬೇಕು. ಸಮರ್ಪಕ ಬಸ್ ವ್ಯವಸ್ಥೆ, ಎರಡು ನೂತನ ಶಾಲಾ ಕಟ್ಟಡ, ಜನ–-ಜಾನುವಾರುಗಳಿಗೆ ಸಮರ್ಪಕ ಕುಡಿ ಯುವ ನೀರು, ನೀರಿನ ಘಟಕ ದುರಸ್ತಿ ಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ADVERTISEMENT

ಬಾಬಾನಗರ ಗ್ರಾಮಸ್ಥರು ಓವರ್‌ ಹೆಡ್‌ ಟ್ಯಾಂಕ್, ಬಾಬಾನಗರ–-ಹೊನವಾಡ ರಸ್ತೆ ನಿರ್ಮಿಸುವ ಜತೆ ಟಿಸಿ ಸುಟ್ಟು 20 ದಿನ ಕಳೆದರೂ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇಲ್ಲಿನ ಶಾಖಾಧಿಕಾರಿ ವರ್ಗಾಯಿಸಿ ಎಂದು ಸಚಿವರಿಗೆ ಆಗ್ರಹಿಸಿದರು.

ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವ, ಶಾಖಾಧಿಕಾರಿ ತರಾಟೆಗೆ ತೆಗೆದು ಕೊಂಡರು. ಬಳಿಕ ಬಾಬಾನಗರದ ಹಿರೇ ಕುರುಬ ವಸ್ತಿಗೆ ಅತ್ಯುತ್ತಮ ಸೌಲಭ್ಯವುಳ್ಳ, ಕಂಪ್ಯೂಟರ್, ಡಿಜಿಟಲ್ ಬೋರ್ಡ್‌ ಹೊಂದಿರುವ ಸ್ಮಾರ್ಟ್‌ ಕ್ಲಾಸ್ ಮಂಜೂ ರಾತಿ ಮಾಡಲಾಗುವುದು ಎಂದು ತಿಳಿಸಿದರು.

ಕೆ.ಸಿದ್ದಾಪುರ ಪಂಚಾಯ್ತಿ ವ್ಯಾಪ್ತಿ ಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ತೊಂದರೆಗಳನ್ನು ನಿವಾರಿಸಲು ಪಂಡಿತ್ ದೀನ್ ದಯಾಳ ಯೋಜನೆಯಡಿ ಈ ಭಾಗದಲ್ಲಿರುವ ಎಲ್ಲ ವಿದ್ಯುತ್ ತಂತಿ ನವೀಕರಿಸುವಂತೆ ಈಗಾಗಲೇ ಅಧಿಕಾರಿ ಗಳಿಗೆ ಸೂಚಿಸಲಾಗಿದೆ, ಈ ಕುರಿತಂತೆ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದರು.

ಕಳ್ಳಕವಟಗಿ, ಕನಮಡಿ ಗ್ರಾಮಗಳ ವಿದ್ಯುತ್, ರಸ್ತೆ, ಪ್ರೌಢಶಾಲೆಗೆ ಆವರಣ ಗೋಡೆ, ಕೊಳವೆಬಾವಿ, ಕುಡಿಯುವ ನೀರಿನ ಸಮರ್ಪಕ ವಿತರಣೆ, ಐತಿಹಾಸಿಕ ಧರಿದೇವರ ಬಾಂದಾರಗೆ ಗೇಟ್ ಅಳ ವಡಿಸುವುದು, ಬಾಕ್ರಾಬಾಯಿ ಬಾಂದಾರ ಕಾಮಗಾರಿ, 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ, ಶಾದಿಮಹಲ್ ನಿರ್ಮಾಣ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಇದೇ ಸಂದರ್ಭ ಭರವಸೆ ನೀಡಿದರು.

ಪಡಿತರ ಚೀಟಿ ಪಡೆಯಲು ಬಾಪೂಜಿ ಸೇವಾ ಕೆಂದ್ರಕ್ಕೆ ಅರ್ಜಿ ಸಲ್ಲಿಸಿದರೆ, ಪಡಿತರ ಚೀಟಿ ಮನೆಗೆ ತಲುಪಿಸುವ ವ್ಯವಸ್ಥೆ ಜಾರಿಯಲ್ಲಿದೆ. ವಿಧವಾ, ಅಂಗವಿಕಲ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಸಾಮಾಜಿಕ ಯೋಜನೆಗಳಿಗೆ ಯಾವುದೇ ಮಧ್ಯವರ್ತಿ ಗಳಿಗೆ ಹಣ ನೀಡಬಾರದು.

ಬಾಪೂಜಿ ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ನೇರವಾಗಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಮುಖಂಡರಾದ ಸೋಮ ನಾಥ ಬಾಗಲಕೋಟ, ತಮ್ಮಣ್ಣ ಹಂಗ ರಗಿ, ಉಪ ವಿಭಾಗಾಧಿಕಾರಿ ಶಂಕರ ವಣಿಕ್ಯಾಳ, ತಾಲ್ಲೂಕು ಪಂಚಾಯ್ತಿ ಕಾರ್ಯ ಅಧಿಕಾರಿ ದೇವರಮನಿ ಇದ್ದರು. ತಹಶೀಲ್ದಾರ್ ಎಂ.ಎನ್.ಬಳಿಗಾರ ಸ್ವಾಗತಿಸಿದರು.

* * 

ಸಾಮಾಜಿಕ ಸುರಕ್ಷತಾ ಯೋಜನೆಯಡಿ ಫಲಾನುಭವಿಗಳಾಗಲು ಮಧ್ಯವರ್ತಿ ಗಳಿಗೆ ಹಣ ಬೇಡ. ನೇರವಾಗಿ ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ, ಪಡೆಯಿರಿ
ಎಂ.ಬಿ.ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.