ADVERTISEMENT

‘ದೀನ, ದಲಿತರ ಪಕ್ಷ ಜೆಡಿಎಸ್’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 5:02 IST
Last Updated 4 ಸೆಪ್ಟೆಂಬರ್ 2017, 5:02 IST

ಚಡಚಣ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  20 ತಿಂಗಳು ಅಧಿಕಾ ರಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಎಂ.ಆರ್.ಪಾಟೀಲ ಹೆಳಿದರು.

ಸ್ಥಳಿಯ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ನಡೆದ ನಾಗಠಾಣ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು
ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ಗಳ ದುರಾಡಳಿತಗಳಿಗೆ ಮತದಾರರು ಬೇಸತ್ತು ಹೋಗಿದ್ದಾರೆ.

ಜೆಡಿಎಸ್ ರೈತರ, ದೀನ ದಲಿತರ ಏಳಿಗೆಗೆ ಸದಾ ಶ್ರಮಿಸುವ ಪಕ್ಷವಾಗಿದೆ.ಕಳೆದ ಬಾರಿ ಅತ್ಯಲ್ಪ ಮತ ಗಳಿಂದ ಪರಾಭವಗೊಂಡಿದ್ದ ದೇವಾ ನಂದ ಚವ್ಹಾಣ ಅವರನ್ನು ಇದೊಂದು ಬಾರಿ ನಾಗಠಾಣ ಮತಕ್ಷೇತ್ರದ ಮತದಾ ರರು ಆಶಿರ್ವದಿಸಬೇಕು ಎಂದರು.

ADVERTISEMENT

ಮುಖಂಡರಾದ ಬಾಬು ಚವ್ಹಾಣ, ಇಮಾಮಗೌಡ ಪಾಟೀಲ, ಶಿವರಾಜ ಬಿರಾದಾರ, ಗಜಾನಂದ ಪವಾರ, ಧೋಳೇಶ ಚವ್ಹಾಣ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಗೆಲವಿಗೆ ಕಾರ್ಯ ಕರ್ತರು ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳ ದುರಾಡಳಿತ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಧನೆಗಳ ಕುರಿತು ಮನೆ ಮನೆಗೆ ತೆರಳಿ, ಜೆಡಿಎಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸಬೇಕು ಎಂದು ಹೇಳಿದರು.

ನಾಗಠಾಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚ್ವಹಾಣ ಮಾತನಾಡಿ, ಒಂದು ಬಾರಿ ಜನರ ಸೇವೆ ಮಾಡಲು ಯಾವುದೇ ಫಲಾಪೇಕ್ಷವಿಲ್ಲದೆ ಕಾರ್ಯಕರ್ತರು ತಮ್ಮ ಗೆಲುವಿದೆ ಶ್ರಮಿಸಲಬೇಕು ಎಂದರು.

ಸಭೆಯಲ್ಲಿ ಮುಖಂಡರಾದ ವಿಠ್ಠಲ ವಡಗಾಂವ, ದೂಳೇಶ ಚವ್ಹಾಣ, ಗಜಾನಂದ ಪವಾರ, ರಾಮ ಝಡ್ಪೇಕರ, ಮಹೇಶ ಕುಲಕರ್ಣಿ, ರಾಜೂ ಡೊಣಗಾಂವ, ಸಿಕಂದರ      ಸಾವಳಸಂಗ, ಅಮಸಿದ್ದ ಬಳಗಾನೂರ, ರಾಜೆಂದ್ರ ಕಟ್ಟಿಮನಿ, ರಾಜೂ ಮೆಡೆಗಾರ, ಬಂಡಿ ನದಾಫ, ಲಾಲಸಾಬ ಅತ್ತಾರ,ಪ್ರಕಾಶ ಪಾಟೀಲ, ಸಂತೋಷ ಕೋಟಿ,ರಫೀಕ್  ಮಕಾನದಾರ, ಭಿಮಾಶಂಕರ ಭೈರಗೊಂಡ, ಸಿದ್ಧರಾಮ ಗಾಡಿವಡ್ಡರ, ಮಾಳಪ್ಪ ಕುರೆ, ಶಿವಶಂಕರ ಹಿರೇಮಠ ಇದ್ದರು. ಕಾಂಗ್ರೆಸ್‌ ಮುಖಂಡ ರಾಮ ಝಡ್ಪೇಕರ್ ಹಾಗೂ ಬಿಜೆಪಿ ಮುಖಂಡ ಭೀಮಾಶಂಕರ ವಾಳಿಖೀಂಡಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.