ADVERTISEMENT

‘ದೌರ್ಜನ್ಯ ವಿರುದ್ಧ ಹೋರಾಟ ಅಗತ್ಯ’

‘ಯುವ ಮಹಿಳೆಯರಲ್ಲಿ ವೈಜ್ಞಾನಿಕ ಮನೋಭಾವದ ಅಭಿವೃದ್ಧಿ’ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ಮೇ 2017, 8:43 IST
Last Updated 25 ಮೇ 2017, 8:43 IST

ವಿಜಯಪುರ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇವೆ. ಈ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಲು ವೈಜ್ಞಾನಿಕ ಪ್ರೇರೇಪಣೆ ಅಗತ್ಯ ಎಂದು ಮಂಗಳೂರಿನ ಫೆಡರೇಷನ್ ಆಫ್ ಇಂಡಿಯನ್ ರ್‌್ಯಾಷ್ನಲಿಷ್ಟ್ ಅಸೋಸಿಯೇಶನ್‌ನ ಅಧ್ಯಕ್ಷ ನರೇಂದ್ರ ನಾಯ್ಕ್ ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ದಕ್ಷಿಣ ಕನ್ನಡ ವೈಚಾರಿಕ ಸಂಸ್ಥೆ ಮತ್ತು ಏಡ್ ವಿತೌಟ್ ರಿಲಿಜನ್ ಟ್ರಸ್ಟ್ ವತಿಯಿಂದ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್‌ ಭವನದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಯುವ ಮಹಿಳೆಯರಲ್ಲಿ ವೈಜ್ಞಾನಿಕ ಮನೋಭಾವದ ಅಭಿವೃದ್ಧಿ’ ಕುರಿತ ಕಾರ್ಯಾಗಾರದಲ್ಲಿ ಮಾತ ನಾಡಿದ ಅವರು, ಭಾರತೀಯರು ತಮ್ಮಲ್ಲಿರುವ ಜ್ಞಾನವನ್ನು ಪ್ರಸ್ತುತಪಡಿಸುವಲ್ಲಿ ವಿಫಲರಾಗುತ್ತಿರು ವುದು ವಿಷಾದನೀಯ ಎಂದರು.

ನಮ್ಮ  ಸಮಾಜದಲ್ಲಿ ಮಾಂತ್ರಿಕರು, ಮೋಡಿ ಮಾಡುವವರು, ದೆವ್ವ ಬಿಡಿಸು ವವರು, ಮುಗ್ಧ ಜನರನ್ನು ಮೋಸಗೊಳಿ ಸುವ ಒಂದು ವ್ಯವಸ್ಥಿತ ಜಾಲವೇ ಇದೆ. ಜನರಲ್ಲಿರುವ ಮೂಢನಂಬಿಕೆ, ಅಜ್ಞಾನಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಈ ಮೋಸಗಾರರು ಜನರನ್ನು ನಿರಂತರವಾಗಿ ಸುಲಿಗೆ ಮಾಡುತ್ತ ಬಂದಿದ್ದಾರೆ ಎಂದು ಹೇಳಿದರು.

ಡೋಂಗಿ ಸ್ವಾಮಿಗಳು ಹೇಗೆ ಜನರಿಗೆ ಮಂಕು ಬೂದಿ ಎರಚುವ ಮೂಲಕ ಜನರನ್ನು ಮರಳು ಮಾಡಿ ಮೋಸ ಮಾಡುತ್ತಾರೆ. ಅಜ್ಞಾನ, -ಮೂಢ ನಂಬಿಕೆಗಳನ್ನು ಬಳಸಿಕೊಂಡು ಕೆಲವರು ಜನರನ್ನು ಹೇಗೆ ಸುಲಿಗೆ ಮಾಡುತ್ತಾರೆ ಎಂಬ ನೈಜ ಸಂಗತಿಗಳನ್ನು ಒಳಗೊಂಡ ವಿಡಿಯೋ ಚಿತ್ರ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. 

ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉಪ ವ್ಯವಸ್ಥಾಪಕ ಶ್ಯಾಮ್ ಸುಂದರ್ ರಾವ್ ಮಾತನಾಡಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕಾದ ಅಗತ್ಯ ಕುರಿತು ಪ್ರತಿಪಾದಿಸಿದರು.

ಕುಲಸಚಿವ ಪ್ರೊ.ಕೆ.ಪಿ.ಶ್ರೀನಾಥ್ ಮಾತನಾಡಿ ಯಾವುದರ ಬಗ್ಗೆ ಕಾಳಜಿ ಇರುತ್ತದೆಯೋ ಅದರಲ್ಲಿ ನಮಗೆ ನಂಬಿಕೆಯಿರುತ್ತದೆ ಎಂದರು. ವಿದ್ಯಾರ್ಥಿನಿಯರು ವೈಚಾರಿಕ ಚಿಂತನೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಪ್ರೊ.ಎಸ್.ಎ.ಖಾಜಿ, ಪ್ರೊ.ಎಸ್.ಬಿ. ಮಾಡಗಿ, ಪ್ರೊ.ಪಿ.ಜಿ. ತಡಸದ, ಡಾ.ವಿಷ್ಣು ಶಿಂಧೆ, ಡಾ.ರಾಜಕುಮಾರ ಮಾಲಿ ಪಾಟೀಲ, ವಿದ್ಯಾರ್ಥಿನಿಯರ ಒಕ್ಕೂಟದ ಪದಾಧಿಕಾರಿಗಳು, ವರ್ಗ ಪ್ರತಿನಿಧಿಗಳು, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಬೋಧಕ-–ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿ ಯರು ಮಹಿಳಾ ಗೀತೆ ಹಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶ ನಾಲಯದ ನಿರ್ದೇಶಕ ಪ್ರೊ.ಓಂಕಾರ ಕಾಕಡೆ ಸ್ವಾಗತಿಸಿದರು. ಭಾರತಿ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ ವಂದಿಸಿದರು. ವಿದ್ಯಾರ್ಥಿನಿ ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಹೀನ್ ಮೊಕಾಶಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.