ADVERTISEMENT

‘ಮಹದಾಯಿ ಹೋರಾಟ: ಬಿಜೆಪಿ ಕಾಂಗ್ರೆಸ್‌ ನಾಟಕ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 6:28 IST
Last Updated 29 ಡಿಸೆಂಬರ್ 2017, 6:28 IST

ಮುದ್ದೇಬಿಹಾಳ: ಮಹದಾಯಿ ನದಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ನೀಡಲಾದ ಉತ್ತರ ಕರ್ನಾಟಕ ಬಂದ್‌ಗೆ ಬೆಂಬಲಿಸಿ, ಜೆಡಿಎಸ್‌ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮಾತನಾಡಿ, ‘ಮಹದಾಯಿ ನದಿ ನೀರಿನ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಾಟಕ ಮಾಡುತ್ತಿವೆ. ಇವರಿಗೆ ಜನರ ಬಗ್ಗೆ ನಿಜವಾದ ಕಾಳಜಿ, ಕಳಕಳಿ ಇಲ್ಲ. ಎರಡೂ ಪಕ್ಷಗಳನ್ನು ಉತ್ತರ ಕರ್ನಾಟಕದಿಂದ ಒದ್ದೋಡಿಸೋವರೆಗೆ ನಮ್ಮ ಜನರಿಗೆ ನ್ಯಾಯ ಸಿಗೊಲ್ಲ. ಇವೆರಡೂ ಪಕ್ಷಗಳು ಉತ್ತರ ಕರ್ನಾಟಕಕ್ಕೆ ಅಂಟಿದ ಶಾಪ’ ಎಂದು ಕಿಡಿಕಾರಿದರು.

ADVERTISEMENT

ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ ಮಾತನಾಡಿದರು. ಮುಖಂಡರಾದ ಶರಣು ಬೂದಿಹಾಳಮಠ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಈರಸಂಗಪ್ಪಗೌಡ ಪಾಟೀಲ, ಸಂಗನಗೌಡ ಹೆಗರಡ್ಡಿ, ಮುನ್ನಿ ಮುಲ್ಲಾ, ಬಸವಂತ್ರಾಯ ಬಿರಾದಾರ, ವಿಜಯ ಹಿರೇಮಠ, ಕೆ.ಬಿ.ಹುನಕುಂಟಿ, ಅಶೋಕ ಜಮ್ಮಲದಿನ್ನಿ, ಸಂಗಪ್ಪ ಬಾಗೇವಾಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.