ADVERTISEMENT

ಶಿಕ್ಷಣ, ಆರ್ಥಿಕ ಶಕ್ತಿಯಿಂದ ಸಾಧ್ಯ

ಅಸ್ಪೃಶ್ಯತೆ ನಿರ್ಮೂಲನೆ ಕುರಿತ ವಿಚಾರ ಸಂಕಿರಣದಲ್ಲಿ ಶಾಸಕ ಯಶವಂತರಾಯಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:35 IST
Last Updated 9 ಮಾರ್ಚ್ 2017, 10:35 IST
ಶಿಕ್ಷಣ, ಆರ್ಥಿಕ ಶಕ್ತಿಯಿಂದ ಸಾಧ್ಯ
ಶಿಕ್ಷಣ, ಆರ್ಥಿಕ ಶಕ್ತಿಯಿಂದ ಸಾಧ್ಯ   
ಇಂಡಿ: ‘ಉತ್ತಮ ಶಿಕ್ಷಣ ಹಾಗೂ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಿದಾಗ ಅಸ್ಪೃಶ್ಯತೆಯ್ನ ನಿರ್ಮೂಲನೆ ಮಾಡ ಬಹುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿಪಾದಿಸಿದರು.
 
ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಡಗಾ ನೂರ ಗ್ರಾಮದ ಬಲಭೀಮ ಯುವಕ ಮಂಡಳ ಸಂಯುಕ್ತವಾಗಿ ಹಮ್ಮಿ ಕೊಂಡಿದ್ದ ‘ಅಸ್ಪೃಶ್ಯತೆ ನಿರ್ಮೂಲನೆ’ ಎಂಬ ವಿಷಯ ಕುರಿತ ವಿಚಾರ ಸಂಕಿ ರಣದಲ್ಲಿ  ಅವರು ಮಾತನಾಡಿದರು.
 
‘ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಸರ್ಕಾರದಿಂದ ಸಾಧ್ಯವಿಲ್ಲ. ಈ ಕಾರ್ಯವನ್ನು ಸಮಾಜವೇ ಮಾಡಬೇಕು’ ಎಂದರು.
 
ಡಿಎಸ್ಎಸ್ ರಾಜ್ಯ ಘಟಕದ ಅಧ್ಯಕ್ಷ (ಪರಿವರ್ತನೆ) ಅಭಿಷೇಕ ಚಕ್ರವರ್ತಿ ಮಾತನಾಡಿ,  ‘ಅಸ್ಪೃಶ್ಯತೆ ನಿರ್ಮೂಲನೆ ಕುರಿತಂತೆ ಡಾ.ಅಂಬೇಡ್ಕರ್‌ ಸಂವಿ ಧಾನದ 17ನೇ ವಿಧಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೂ ಇದು ಸಾಧ್ಯವಾಗಿಲ್ಲ’ ಎಂದು ವಿಷಾದಿಸಿದರು.
 
ಜಿಲ್ಲಾಧಿಕಾರಿ ಶಿವಕುಮಾರ ಕೆ.ಬಿ.ಮಾತನಾಡಿ, ಸರ್ಕಾರ ಅಸ್ಪೃಶ್ಯತೆಯ ಬಗ್ಗೆ ಸಾಕಷ್ಟು ಕಾನೂನು ಗಳನ್ನು ಮಾಡಿದೆ. ಆದರೆ ಅಸ್ಪೃಶ್ಯರು ಅವುಗಳ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಇದರಿಂದ ಅಸ್ಪೃಶ್ಯತೆ ಜೀವಂತವಾಗಿದೆ ಎಂದರು. 
 
ಡಿಎಸ್ಎಸ್ ಅಂಬೇಡ್ಕರವಾದ ವಿಭಾಗೀಯ ಸಂಚಾಲಕ ಜಿತೇಂದ್ರ ಕಾಂಬಳೆ, ಜಿಲ್ಲಾ ಸಂಚಾಲಕ (ಸಾಗರ ಬಣ) ವಿನಾಯಕ ಗುಣಸಾಗರ ಮಾತನಾಡಿದರು. ಅಡಿವೆಪ್ಪ ಸಾಲಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. 
 
ಪುರಸಭೆಯ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಅಧ್ಯಕ್ಷತೆ ವಹಿಸಿದ್ದರು. ಎಸಿ ಶಂಕರ ವಣಿಕ್ಯಾಳ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ರುಕ್ಮುದ್ದೀನ್‌ ತದ್ದೇವಾಡಿ, ಜಿತೇಂದ್ರ ಕಾಂಬಳೆ, ಆನಂದ ಅವದಿ ಹಾಗೂ ಇತರರು ಇದ್ದರು. ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೊದ್ದಾರ ಸ್ವಾಗತಿಸಿದರು. ನಿಲಯ ಪಾಲಕ ಸದಾನಂದ ಬಡಿಗೇರ ನಿರೂಪಿಸಿದರು. ಭೀಮಾಶಂಕರ ಬಿರಾದಾರ ವಂದಿಸಿದರು.

* ಸರ್ಕಾರ ಕಠಿಣವಾದ ಕಾನೂನುಗಳನ್ನು ಜಾರಿಗೆ ತರಬಹುದು. ಆದರೆ, ಸಮಾಜವೇ ಮನಸ್ಸು ಮಾಡಿದರೆ ಈ  ಪಿಡುಗನ್ನು ಹೋಗಲಾಡಿಸಬಹದು
ಯಶವಂತರಾಯಗೌಡ ಪಾಟೀಲ, ಶಾಸಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.