ADVERTISEMENT

ಸಿಂದಗಿ: ಮಿನಿವಿಧಾನಸೌಧಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 5:48 IST
Last Updated 13 ಸೆಪ್ಟೆಂಬರ್ 2017, 5:48 IST

ಸಿಂದಗಿ: ಮುಂಗಾರು ಮತ್ತು ಹಿಂಗಾರು ಬೆಳೆ ವಿಮೆ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಆಗ್ರಹಿಸಿ ತಾಲ್ಲೂಕಿನ ಹಂದಿಗನೂರ ಗ್ರಾಮದ ನೂರಾರು ರೈತರು ಕಾನೂನು ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರದ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ದಾನಪ್ಪಗೌಡ ಚನಗೊಂಡ ಮಾತನಾಡಿ, ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೆಳೆ ವಿಮೆ ಯೋಜನೆಯ ಲಾಭ ಸಿಗದೇ ರೈತರು ಕಂಗಾಲಾಗಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನು ಹಲವಾರು ಸಲ ಪಡೆದುಕೊಂಡಿದ್ದಾರೆ ವಿನಾ ರೈತರ ಬ್ಯಾಂಕ್ ಖಾತೆಗೆ ಈ ವರೆಗೂ ಹಣ ಜಮೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದ 180 ರೈತರಿಗೆ 10 ದಿನಗಳ ಒಳಗಾಗಿ ವಿಮಾ ಪರಿಹಾರ ಹಣ ನೀಡದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುವುದು’ ಎಂದೂ ಎಚ್ಚರಿಸಿದರು. ನಂತರ, ಪ್ರತಿಭಟನಾಕಾರರು ಉಪ ತಹಶೀಲ್ದಾರ್ ಸೈಯದ್ ಹಾಫಿಜುದ್ದೀನ್‌ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಚಿದಾನಂದ ದೇಸಾಯಿ, ಶಂಕ್ರಪ್ಪಗೌಡ ಬಿರಾದಾರ, ಈರಪ್ಪ ಮಾಶ್ಯಾಳ, ಮಹೇಶ ದೇಸಾಯಿ, ನಾಗಣ್ಣ ಬಿರಾದಾರ, ಈರಯ್ಯ ಮಠಪತಿ, ಸುರೇಶ ಬಿರಾದಾರ, ಅಶೋಕ ನೆಗಿನಾಳ, ಗುರಣ್ಣ ಹತ್ತರಕಿಹಾಳ, ಮಡಿವಾಳಪ್ಪ ಕೋರಿ, ಲಕ್ಕಪ್ಪ ಡಾಂಗಿ, ಹುಲ್ಲಪ್ಪಗೌಡ ಬಿರಾದಾರ, ಮಹಾಂತೇಶ ಅಗಸರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.