ADVERTISEMENT

‘ಸಿದ್ದು ಸರ್ಕಾರ ದ್ವಂದ್ವ ನೀತಿ ಕೈ ಬಿಡಲಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:18 IST
Last Updated 5 ಡಿಸೆಂಬರ್ 2017, 6:18 IST

ನಿಡಗುಂದಿ: ಸಂಸದ ಪ್ರತಾಪಸಿಂಹರನ್ನು ಬಂಧಿಸಿದ ರಾಜ್ಯ ಸರ್ಕಾರ, ಬೆಳಗಾವಿ ಯಲ್ಲಿ ಮಹಾನಗರ ಪಾಲಿಕೆ ಸದ ಸ್ಯರು ಪಾಕಿಸ್ತಾನ ಸೈನಿಕರನ್ನು ಮೆಚ್ಚಿ ಸುವ ಗೀತೆಯೊಂದನ್ನು ಹಾಡಿ ಕುಣಿಸು ಕುಪ್ಪಳಿಸಿದರೂ ಬಂಧಿಸದೇ ಇರುವುದು ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಬಸವನಬಾಗೇವಾಡಿ ಬಿಜೆಪಿ ಮುಖಂಡ ಸಿದ್ದು ಹೂಗಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಆಚರಿಸಲಾದ ಈದ್ ಮಿಲಾದ್ ಕಾರ್ಯ ಕ್ರಮದಲ್ಲಿ ದೇಶದ್ರೋಹಿ ಪಾಕಿಸ್ತಾನಿ ಸೈನಿಕರ ಮೆಚ್ಚಿನ ಗೀತೆಗೆ ಮಹಾನಗರ ಪಾಲಿಕೆ ಸದಸ್ಯರಾದ ಮೋದಿನ್ ಶೇಖ್, ಬಂದೇನವಾಜ್ ಬಾಳೆಕುಂದ್ರಿ, ಅಜೀಂ ಪಟನೆಗಾರ ಸಾರ್ವಜನಿಕವಾಗಿ ಕುಣಿದು ಮಾತೃಭೂಮಿಗೆ ಅಪಮಾನ ಎಸಗಿದ್ದಾರೆ. ಸರ್ಕಾರ ಕೂಡಲೇ ಇವರ ಸದಸ್ಯತ್ವ ರದ್ದುಗೊಳಿಸಿ ಬಂಧಿಸಬೇಕು. ಅದು ಬಿಟ್ಟು ಹನುಮ ಜಯಂತಿ ಆಚರಿ ಸುವವರನ್ನು ಬಂಧಿಸು ವುದು ಹಿಂದು ವಿರೋಧಿ ನೀತಿಯಲ್ಲವೇ ಎಂದೂ ಅವರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT