ADVERTISEMENT

ಉಪ್ಪಾರ ಸಮಾಜದ ಏಳ್ಗೆಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 6:13 IST
Last Updated 24 ಫೆಬ್ರುವರಿ 2018, 6:13 IST

ಯಾದಗಿರಿ: ‘ಅಧಿಕಾರ ಪಡೆದ ಅಧಿಕಾರಿಗಳು ಜಾತಿ, ಮತ ಪಂಥ ಭೇದ ತೋರದೆ ಎಲ್ಲ ಜನಾಂಗದವರ ಏಳ್ಗೆಗೆ ಶ್ರಮಿಸಬೇಕು’ ಎಂದು ಭಗೀರಥ ಉಪ್ಪಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಶಿವುರಾಜ ವಕೀಲ ಹೇಳಿದರು.

ಕರ್ನಾಟಕ ಲೋಕ ಸೇವಾ ಆಯೋಗದಿಂದ ನೇಮಕ ಆಗಿರುವ ಮೂವರು ಅಧಿಕಾರಿಗಳಿಗೆ ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಭಗೀರಥ ಉಪ್ಪಾರ ಸಮಾಜದಿಂದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಉಪ್ಪಾರ ಸಮಾಜದಲ್ಲಿ ಈಚೆಗೆ ಪ್ರತಿಭಾನ್ವಿತರು ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಅಂತಹ ಪ್ರತಿಭಾನ್ವಿತರನ್ನು ಗುರುತಿಸಿ ಸಮಾಜ ಅಭಿನಂದಿಸಬೇಕು. ಸಮಾಜದ ಅಭಿವೃದ್ಧಿಗೆ ಅಧಿಕಾರ ಹೊಂದಿದ ವರಿಂದ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಸಮಾಜದ ಉಪ್ಪು ತಿಂದ ಪ್ರತಿಯೊಬ್ಬರೂ ಅಭಿವೃದ್ಧಿಗಾಗಿ ಶ್ರಮಿಸ ಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಎಎಸ್ ಅಧಿಕಾರಿ ಬಿ.ಆರ್.ಪುನೀತ್, ‘ಕಷ್ಟಪಟ್ಟು ಓದಿದರೆ ಫಲ ಖಂಡಿತ ಸಿಗುತ್ತದೆ. ಆ ನಿಟ್ಟಿನಲ್ಲಿ ಸಮಾಜದ ವಿದ್ಯಾರ್ಥಿಗಳು ಕಷ್ಟಪಡಬೇಕು. ಬಡ ಪ್ರತಿಭಾನ್ವಿತರಿದ್ದರೆ ಸಮಾಜ ಕೂಡಲೇ ಅಂತಹವರ ನೆರವಿಗೆ ಧಾವಿಸಬೇಕು’ ಎಂದು ಹೇಳಿದರು.

ಸನ್ಮಾನಿತ ಉಪ ನೋಂದಣಾ ಧಿಕಾರಿ ಪ್ರವೀಣ್ ಗೋಗಿ ಮಾತನಾಡಿ, ‘ಸಮಾಜದಲ್ಲಿ ಒಗ್ಗಟ್ಟು ಮುಖ್ಯ. ಏಕತೆಯಿಂದ ಮುನ್ನಡೆದರೆ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಆದ್ದರಿಂದ ಸಂಘಟಿತರಾಗಬೇಕು’ ಎಂದರು.

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಗಣಪತಿ ಪೂಜಾರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಹಿಂದುಳಿದ ಉಪ್ಪಾರ ಸಮಾಜ ಸಂಘಟನೆ ಮತ್ತು
ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಹೇಳಿದರು. ಮುಖಂಡ ಲಕ್ಷ್ಮಣ ಹೊರಮನಿ ಖಾನಾಪುರ ಮಾತನಾಡಿ, ‘ಸಮಾಜದ ಸುಶಿಕ್ಷಿತ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು.

ಮುಖಂಡರಾದ ಹೇಮಂತ ಕುಮಾರ ಕಶೆಟ್ಟಿ ಎಂಜಿನಿಯರ್, ಡಾ.ಮಹೇಂದ್ರನಾಥ, ಮರಲಿಂಗಪ್ಪ ಕೊಂಚೆಟ್ಟಿ, ಪಾಂಡುರಂಗ ಉಳ್ಳೆಸುಗೂರು, ರಾಮು ಟೇಲರ್ ಕಡೆಚೂರು, ಬನ್ನಪ್ಪ ಹುಲಿಬೆಟ್ಟ, ವೆಂಕಟೇಶ ದೇಸಾಯಿ, ರಾಘವೇಂದ್ರ ಐಕೂರು, ರಾಘವೇಂದ್ರ ಹೊರಮನಿ ಖಾನಾಪೂರ ಇದ್ದರು. ವಕೀಲ ಶಿವರಾಜ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿಸಿದರು. ಗೋವಿಂದಪ್ಪ ಕೊಂಚೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.