ADVERTISEMENT

ಕೋರ್ಟ್‌ ಕಲಾಪ ಬಹಿಷ್ಕರಿಸಿದ ವಕೀಲರು

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ನಿವೇಶನ ನೀಡಲು ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 9:23 IST
Last Updated 10 ಜನವರಿ 2017, 9:23 IST
ಯಾದಗಿರಿ: ‘ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ದೈನಂದಿನ ಕೋರ್ಟ್‌ ಕಲಾಪಗಳಿಗೆ ತೊಂದರೆ ಉಂಟಾಗಿದೆ’ ಎಂದು ಆರೋಪಿಸಿ ವಕೀಲರು ಸೋಮವಾರ ಕೋರ್ಟ್‌ ಕಲಾಪ ಬಹಿಷ್ಕರಿಸಿ ಜಿಲ್ಲಾ ಧಿಕಾರಿ ಕಚೇರಿ ಎದುರು ಅನಿ ರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
 
ಪ್ರತಿಭಟನೆಗೂ ಮುಂಚೆ ಜಿಲ್ಲಾ ವಕೀಲರ ಸಂಘದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು. ನಂತರ ನಗರದ ಶಾಸ್ತ್ರಿಚೌಕ್‌ನಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸಿದರು.
 
‘ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ವಕೀಲರು ಜಿಲ್ಲಾ ನ್ಯಾಯಾಲಯಕ್ಕಾಗಿ ತಕ್ಷಣ ನಿವೇಶನ ನೀಡಬೇಕು. ಜಿಲ್ಲಾ ವಕೀಲರ ಸಂಘಕ್ಕೆ ವಕೀಲರ ಭವನ ನಿರ್ಮಿಸಬೇಕು. ಅದಕ್ಕಾಗಿ ಈಗಾಗಲೇ ನಿವೇಶನ ನೀಡುತ್ತೇವೆ ಎಂದು ಭರವಸೆ ನೀಡಿರುವ ಜಿಲ್ಲಾಡಳಿತ ಹೈದರಾಬಾದ್ ರಸ್ತೆ ಯಲ್ಲಿರುವ ನಿವೇಶನ ಆಗಲಿ ಅಥವಾ ಮಿನಿ ವಿಧಾನಸೌಧದ ಹತ್ತಿರ ಇರುವ ನಿವೇಶನ ತಕ್ಷಣವೇ ನೀಡಬೇಕು’ ಎಂದು ವಕೀಲರು ಒತ್ತಾಯಿಸಿದರು. 
 
ವಕೀಲರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಮಹಿಪಾಲರೆಡ್ಡಿ ಇಟಗಿ ಮಾತನಾಡಿ,‘ಆರು ವರ್ಷಗಳಿಂದ ಜಿಲ್ಲಾ ನ್ಯಾಯಾಲಯ ಹಳೆಯ ಕಟ್ಟಡದಲ್ಲಿಯೇ ಕಚೇರಿ ಕೆಲಸಗಳನ್ನು ಆರಂಭಿಸಿದ್ದು, ಇಲ್ಲಿಯವರೆಗೆ ಜಿಲ್ಲಾ ನ್ಯಾಯಾಲಯಕ್ಕೆ ಮೀಸಲಿಟ್ಟ ನಿವೇಶನ ನೀಡಲು ಜಿಲ್ಲಾಡಳಿತ ವಿಫಲವಾಗಿದೆ. ನ್ಯಾಯ ಸಿಗು ವವರೆಗೂ ಹೋರಾಟ ಮುಂದು ವರಿಸುತ್ತೇವೆ’ ಎಂದು ಹೇಳಿದರು.
 
ಹಿರಿಯ ವಕೀಲರಾದ ಎಸ್.ಬಿ.ಪಾಟೀಲ್, ಗಂಗಾಧರ ರಾವ್ ಆವಂತಿ, ಜಿ.ನಾರಾಯಣರಾವ್, ನರ ಸಿಂಗರಾವ್ ಕುಲಕರ್ಣಿ , ವಕೀಲರ ಸಂಘದ ಕಾರ್ಯದರ್ಶಿ ನಿಂಗಣ್ಣ ಬಂದ ಳ್ಳಿ, ಜಿ.ಭೀಮರಾವ್, ಉಪಾಧ್ಯಕ್ಷ  ಎಂ. ಕೃಷ್ಣಾ ಗುರುಮಠಕಲ್, ಸದಸ್ಯ ಎಸ್.ಪಿ. ನಾಡೇಕರ್, ರಾಜು ದೊಡ್ಡಮನಿ, ಅಮೀನ್‌ರೆಡ್ಡಿ ಪಾಟೀಲ್, ಪ್ರಸನ್ನ ದೇಶ ಮುಖ್, ಎಸ್.ಪಿ.ನಾಡೇಕರ್, ಪುಷ್ಪಾ ಲತಾ ಪಾಟೀಲ್, ಸಾವಿತ್ರಿ ಪಾಟೀಲ್, ಮಹ್ಮದ್ ಅಕ್ಬರ್, ಎಂ.ಎಂ.ಕಾಂತಿಮನಿ, ಮಾರುತಿ ಈಟೆ, ನಿರಂಜನ್, ಗೋವಿಂದ್ ಜಾಧವ್, ಅಶ್ವಿನಿ ಆವಂತಿ, ದೇವಿಂದ್ರ ದೊಡ್ಮನಿ, ಬಂಗಾರೆಪ್ಪ, ಬಿ.ಬಿ.ಕಿಲ್ಲನಕೇರಾ, ಎಸ್.ಎಸ್. ಪಾಟೀಲ್, ಸಿ.ಎಸ್.ಪಾಟೀಲ್ ಸೇರಿದಂತೆ ಅನೇಕ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
 
**
ಪತ್ರ ಬರೆದ ನ್ಯಾಯಾಧೀಶರು
ಯಾದಗಿರಿ: ವಕೀಲರು ಕಲಾಪ ಬಹಿ ಷ್ಕರಿಸಿದ್ದರಿಂದ ಕಕ್ಷಿದಾರರಿಗೆ ತೊಂದರೆ ಉಂಟಾದ ಕಾರಣ ಇಲ್ಲಿನ ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾ ಲಯದ ನ್ಯಾಯಾಧೀಶ ಎಸ್.ಎನ್‌.ನಾಯಕ್ ಜಿಲ್ಲಾ ಧಿಕಾರಿಗೆ ಪತ್ರ ಬರೆದಿದ್ದಾರೆ.
 
ಜಿಲ್ಲಾಡಳಿತದಿಂದಾಗಿ ವಕೀಲ ರೆಲ್ಲರೂ ಕಲಾಪ ಬಹಿ ಷ್ಕರಿಸುವಂತಾಗಿದೆ. ಇದರಿಂದ ಕಕ್ಷಿದಾರರಿಗೆ ತೊಂದರೆ ಹಾಗೂ ನ್ಯಾಯಾಲಯದ ಅಮೂಲ್ಯ ವೇಳೆ ವ್ಯರ್ಥವಾಗಿದೆ. ಇದಕ್ಕೆಲ್ಲಾ ನೀವೆ ಹೊಣೆ. ಕೂಡಲೇ ಸಮಜಾಯಿಷಿ ನೀಡುವಂತೆ ನ್ಯಾಯಾಧೀಶರು ಪತ್ರದಲ್ಲಿ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ ಎಂಬುದಾಗಿ ವಕೀಲr ಸಂಘದ ಸದಸ್ಯರೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.