ADVERTISEMENT

ತಂಬಾಕು ದುಷ್ಪರಿಣಾಮ ತಡೆಯಲು ಸಲಹೆ

ಕೋಪ್ಟಾ ಕಾಯ್ದೆ ಕಾರ್ಯಾಗಾರದಲ್ಲಿ ನೀಲಮ್ಮ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:40 IST
Last Updated 18 ಜನವರಿ 2017, 5:40 IST
ತಂಬಾಕು ದುಷ್ಪರಿಣಾಮ ತಡೆಯಲು ಸಲಹೆ
ತಂಬಾಕು ದುಷ್ಪರಿಣಾಮ ತಡೆಯಲು ಸಲಹೆ   

ಯಾದಗಿರಿ: ‘ತಂಬಾಕಿನ ದುಷ್ಪರಿಣಾಮ ತಡೆಯುವುದರಲ್ಲಿ ವೈದ್ಯರ ಪಾತ್ರ ಮಹ ತ್ವದ್ದಾಗಿದೆ’ ಎಂದು ಡಾ.ಎಸ್‌.ನೀಲಮ್ಮ ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸಮೀಕ್ಷಣಾ ಘಟಕ ಆಶ್ರಯದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿ ಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಯಲ್ಲಿ ‘ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಪ್ಟಾ ಕಾಯ್ದೆ 2003’ ರ ಕುರಿತು ವೈದ್ಯಾಧಿ ಕಾರಿಗಳಿಗೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕಿನ ಪರಿಣಾಮದ ಗಂಭೀರತೆ ಕುರಿತಂತೆ ಅರಿವು ಮೂಡಿಸಲು ಎಲ್ಲಾ ವೈದ್ಯರು ಒಗ್ಗೂಡಿ ಕಾರ್ಯ ಪ್ರವೃತ್ತ ರಾಗುವಂತೆ ಅವರು ಕರೆ ನೀಡಿದರು.
ಸುರಪುರ ತಾಲ್ಲೂಕು ಆರೋ ಗ್ಯಾಧಿಕಾರಿ ಡಾ. ಆರ್.ವಿ.ನಾಯಕ್ ಮಾತ ನಾಡಿ,‘ಈ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದಲ್ಲಿ ಸಕ್ರಿಯವಾಗಿ ಚಾಲನೆ ನೀಡುವುದು ತುಂಬಾ ಅವಶ್ಯಕವಾಗಿದೆ. ಈ ಹಿನ್ನೆಲೆ ತಾಲ್ಲೂಕು ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಲು ನಾವೆಲ್ಲರೂ ಸಿದ್ಧರಿರಬೇಕು’ ಎಂದರು.

ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಲಕ್ಷ್ಮೀಕಾಂತ ಮಾತ ನಾಡಿ,‘ಯಾದಗಿರಿ ಜಿಲ್ಲೆಯಲ್ಲಿ ತಂಬಾಕುವಿನ ದುಷ್ಪರಿಣಾಮ ಕುರಿತು ಜನಜಾಗೃತಿ ಮೂಡಿಸುವುದು ಅಗತ್ಯ. ಜನರಿಗೆ ತಂಬಾಕುವಿನಿಂದಾಗುವ ಗಂಭೀರ ಪರಿಣಾಮ ಹಾಗೂ ರೋಗಗಳ ಬಗ್ಗೆ ಮನವರಿಕೆ ಮಾಡುವ ಮೂಲಕ ತಂಬಾಕು ಚಟ ಬಿಡಿಸಲು ಸಾಧ್ಯ’ ಎಂದು ತಿಳಿಸಿದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿ ದುರ್ಗೇಶ್ ಮಾಚ ನೂರ ಅವರು ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಪ್ಟಾ ಕಾಯ್ದೆ 2033 ರ ಬಗ್ಗೆ ಸವಿ ಸ್ತಾರವಾಗಿ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ಸಲಹೆಗಾರರಾದ ಮಹಾಲಕ್ಷ್ಮಿ ಸಜ್ಜನ ಸ್ವಾಗತಿಸಿದರು. ಜಿಲ್ಲಾ ಸಮಾಜ ಕಾರ್ಯಕರ್ತ ಮಾಸ್ಟರ್ ಫಿಲಿಪ್, ಜಿಲ್ಲಾ ಆಪ್ತ ಸಮಾಲೋಚಕ ನಟರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.