ADVERTISEMENT

ಮರೆಯಾದ ಗ್ರಾಮೀಣ ಸೊಗಡು

ಸಾಮಾಜಿಕ ನಾಟಕದ್ದೇ ಪಾರುಪತ್ಯ: ನೇಪಥ್ಯಕ್ಕೆ ಸರಿಯುತ್ತಿರುವ ಬಯಲಾಟ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 14:50 IST
Last Updated 19 ಏಪ್ರಿಲ್ 2015, 14:50 IST
ಗುರುಮಠಕಲ್‌ ಸಮೀಪದ ನಜರಾಪುರ ಗ್ರಾಮದಲ್ಲಿನ ಬಯಲಾಟದ ದೃಶ್ಯ
ಗುರುಮಠಕಲ್‌ ಸಮೀಪದ ನಜರಾಪುರ ಗ್ರಾಮದಲ್ಲಿನ ಬಯಲಾಟದ ದೃಶ್ಯ   

ಗುರುಮಠಕಲ್:ರೈತರು ವರ್ಷವಿಡೀ ಹೊಲಗಳಲ್ಲಿ ದುಡಿದು, ಬೆಳೆ, ಕುಟುಂಬ ಸಂರಕ್ಷಣೆಯಲ್ಲಿ ಜೀವನವನ್ನು ಕಳೆಯು ತ್ತಾರೆ. ಬೇಸಿಗೆ ಆರಂಭವಾಗುತ್ತಿದ್ದಂ ತೆಯೇ ಕೆಲಸಗಳಿಂದ ಬಿಡುವು ಪಡೆದು, ಒಂದಿಷ್ಟು ವಿಶ್ರಾಂತಿ ಪಡೆಯುತ್ತಾರೆ. ಗ್ರಾಮದಲ್ಲಿನ ಜಾತ್ರೆ, ಬಯಲಾಟ ಎಂದರೆ ಎಲ್ಲಿಲ್ಲದ ಹರ್ಷ. ಸಂಬಂಧಿಗ ಳನ್ನು ಜಾತ್ರೆಗೆ, ಬಯಲಾಟಕ್ಕೆ ಆಮಂತ್ರಿಸು ತ್ತಾರೆ. ಈ ಚಿತ್ರಣ ಇಂದಿಗೂ ಹಲವಾರು ಗ್ರಾಮಗಳಲ್ಲಿ ಕಾಣಸಿಗುತ್ತದೆ.

ಗ್ರಾಮೀಣ ಭಾಗದಲ್ಲಿ ಜಾತ್ರೆಗಳು ಬರುವ ಮುನ್ನವೇ ಗ್ರಾಮದ ಜಾತ್ರೆ ದಿನ ಅಥವಾ ಮಾರನೇ ದಿನ ಸಾಮಾಜಿಕ ನಾಟಕ ಮಾಡಬೇಕು ಎಂದು ಒಲವು ತೋರುತ್ತಿದ್ದಾರೆ. ಇದು ಗ್ರಾಮೀಣ ಭಾಗದಲ್ಲಿ ಹೊಸ ಕಲಾವಿದರನ್ನು ಪರಿ ಚಯಿಸುತ್ತದೆ. ಒಂದು ಕುಟುಂಬದ ಅಥವಾ ಸಮಾಜದಲ್ಲಿನ ನೈಜ ಚಿತ್ರಣ ವನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ ಎಂಬುದು ಮಾತ್ರ ಸಮಾಧಾನದ ಸಂಗತಿ.

ಸಾಮಾಜಿಕ ನಾಟಕಕ್ಕೆ ಯಾವ ನೃತ್ಯಗಾರ್ತಿ ಬರುತ್ತಾರೆ, ಯಾರನ್ನು ಕರೆ ಸುತ್ತಿದ್ದಾರೆ ಎಂಬುದೇ ಚರ್ಚೆ ಆಗುತ್ತದೆ. ಆ ನಾಟಕಗಳನ್ನು ನೋಡುವುದಕ್ಕೆ ಯುವಕರು ಹೆಚ್ಚಾಗಿ ಮುಗಿ ಬೀಳುತ್ತಿದ್ದಾರೆ.

ಟಿವಿ, ಸಾಮಾಜಿಕ ನಾಟಕಗಳ ಹೊಡೆತಕ್ಕೆ ಗ್ರಾಮೀಣ ಭಾಗದ ಜನಪದ ಕಲೆ ಬಯಲಾಟಕ್ಕೆ ಆದ್ಯತೆ ಕಡಿಮೆ ಆಗುತ್ತಿದೆ. ಆದರೆ ಇದೆಲ್ಲವನ್ನೂ ಮೆಟ್ಟಿ ನಿಂತು, ಸಮೀಪದ ನಜರಾ ಪುರ ಗ್ರಾಮದಲ್ಲಿ ಈ ಕಲೆ ಯನ್ನು ಉಳಿಸಿ ಬೆಳೆಸಿ ಕೊಂಡು ಹೋಗುವ ಪ್ರಾಮಾ ಣಿಕ ಪ್ರಯತ್ನ ನಡೆಯುತ್ತಿದೆ.

ಬಯಲಾಟದಲ್ಲಿ ಹೆಚ್ಚಾಗಿ ಅನಕ್ಷರ ಸ್ಥರಾದ ರೈತರು ಭಾಗವಹಿಸು ತ್ತಾರೆ. ಕಷ್ಟಪಟ್ಟು ಬಯಲಾಟದ ಮಾತುಗ ಳನ್ನು ಅಕ್ಷರಸ್ಥರಲ್ಲಿ ಹೇಳಿಸಿಕೊಂಡು ಇಡೀ ದಿನ ಅದನ್ನು ಕಂಠಪಾಠ ಮಾಡುತ್ತಾರೆ. ರೈತರಿಗೆ ನಾಟಕದ ಮಾತುಗಳನ್ನು ಕಲಿಸಿ, ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸಲ್ಲಿ ನಜರಾಪುರ ಗ್ರಾಮದ ಬಯಲಾಟ ಮಾಸ್ತರ್ ಎಂದೇ ಪ್ರಸಿದ್ಧಿ ಶರಣಪ್ಪ ಬಂಟು ತೊಡಗಿದ್ದಾರೆ.

ಇದುವರೆಗೆ ಸುಮಾರು 50ಕ್ಕೂ ಹೆಚ್ಚು ಬಯಲಾಟದ ಕಥೆಗಳನ್ನು ಪ್ರದ ರ್ಶಿಸಿದ್ದಾರೆ. ರಾಮಾಂ ಜನೇಯ ಯುದ್ಧ, ಕಳಾ ಸುರ, ಗಯೋ ಪಾಕ್ಷಿನಂ, ಸುಭದ್ರ ಕಲ್ಯಾಣ, ಶುಂಭನಿ ಶುಂಭ, ಕನ ಕಾಂಗಿ ಕಥೆ, ಲವಕುಶ, ಮಹಿಷಾಸುರ ಮರ್ದಿನಿ, ಬಬ್ರುವಾಹನ ಸೇರಿದಂತೆ ಅನೇಕ ಬಯಲಾಟಗಳನ್ನು ನಜರಾಪುರ, ಪುಟ ಪಾಕ, ಎಂಟಿಪಲ್ಲಿ, ಕೇಶಾವರ, ದಂತಾ ಪುರ, ಗುರುಮಠಕಲ್ ಸೇರಿದಂತೆ ಸುತ್ತ ಲಿನ ಗ್ರಾಮಗಳಲ್ಲಿಯೂ ಇವರು ಬಯ ಲಾಟ ಕಲಿಸಿ, ಪ್ರದರ್ಶನ ಮಾಡಿಸಿದ್ದಾರೆ.

ಬಯಲಾಟ ಮಾಡಲು ಸುಮಾರು 6 ತಿಂಗಳ ಕಾಲಾವಕಾಶ ಬೇಕು. ಅದಕ್ಕಾಗಿ, ದಸರಾ ಹಬ್ಬದಂದು ಬಯಲಾಟದ ಕಥೆಯ ಪುಸ್ತಕ ಮತ್ತು ಹಲವು ಸಾಮಗ್ರಿಗಳಿಟ್ಟು ಪೂಜೆ ಸಲ್ಲಿಸಿ, ಪ್ರಯೋಗಕ್ಕೆ ಚಾಲನೆ ನೀಡಲಾಗುತ್ತದೆ. ಅನಕ್ಷರಸ್ಥ ರೈತರಿಗೆ ಬಯಲಾಟ ಕಲಿಸುವುದು ಎಂದರೆ ಅವರಿಗೆ ಬಲು ಇಷ್ಟ.
ಮೊದಲು ಕಥೆಯ ಸಾರಾಂಶ ಮನದಟ್ಟ ಮಾಡಿಸುತ್ತಾರೆ. ನಂತರ ಪ್ರತಿಯೊಬ್ಬರ ಮಾತುಗಳನ್ನು ಬರೆದು ಕೊಟ್ಟು ಕಂಠಪಾಠ ಮಾಡಲು ಹೇಳಲಾಗುತ್ತದೆ. ಇದರಲ್ಲಿನ ದೇವಿ, ಗಣಪತಿ ಪಾತ್ರಗಳು ಮಾಡುವವರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿ ಪಾತ್ರಕ್ಕೆ ಒಗ್ಗುತ್ತಾರೆ.

ಈ ಪ್ರದರ್ಶನ ಬೇಸಿಗೆಯ ಫೆಬ್ರುವರಿ ಯಿಂದ ಆರಂಭವಾಗುತ್ತವೆ. ರೈತರು ಎಲ್ಲ ಕೆಲಸಗಳನ್ನು ಮುಗಿಸಿ ವಿಶ್ರಾಂತಿಯ ಕಾಲ ಅದು. ಜನರು ಗ್ರಾಮದಲ್ಲಿನ ಬಯಲಾಟ ನೋಡಲು ಪ್ರದರ್ಶನ ದಿನದಂದು ಸಂಜೆಯಿಂದಲೇ ವೇದಿಕೆಯ ಮುಂಭಾಗ ದಲ್ಲಿ ಹಾಸಿಗೆ ಹಾಕಿ ಕಾದು ಕುಳಿತಿರುತ್ತಾರೆ.

ಆರಂಭದಲ್ಲಿ ವಿಘ್ನವಿನಾಯಕನ ಪೂಜೆ ಸಲ್ಲಿಸಿ, ಆರಂಭಿಸುವುದು ವಾಡಿಕೆ. ಈ ಪ್ರದರ್ಶನ ನಿರಂತರವಾಗಿ 7-8 ಗಂಟೆ ನಡೆಯುತ್ತದೆ. ಇದರಲ್ಲಿ ಸುಮಾರು 15– 20 ಕಲಾವಿದರು ಪ್ರದರ್ಶನ ನೀಡುತ್ತಾರೆ.

ಹೆಚ್ಚಾಗಿ ಬಯಲಾಟದಲ್ಲಿ ರಾಕ್ಷಸರ ಸಂಹಾರ ಮಾಡಿ, ಒಳಿತನ್ನು ಮಾಡುವ ದೇವಿಗೆ ಪೂಜೆ ಮಾಡುವುದನ್ನು ತೋರಿಸಲಾಗುತ್ತದೆ. ಆ ಹೊತ್ತಿಗೆ ಬೆಳಕಾಗುತ್ತದೆ. ಜನರು ತಮ್ಮ ಮನೆಗಳಿಗೆ ತೆರಳುತ್ತಾರೆ.
*
ಇಂತಹ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ಕಷ್ಟದ ಕೆಲಸ. ಕಲಾವಿದರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿ ಪ್ರೋತ್ಸಾಹ ನೀಡುವ ಅಗತ್ಯತೆ ಇದೆ. 
ಶರಣಪ್ಪ ಬಂಟು, ಬಯಲಾಟದ ಮಾಸ್ತರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.