ADVERTISEMENT

ಮಳೆಗೆ ಜೋಳದ ಬೆಳೆ ನೆಲಸಮ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 7:22 IST
Last Updated 30 ಆಗಸ್ಟ್ 2017, 7:22 IST
ಕಕ್ಕೇರಾ ಹೊರವಲಯದ ಸಂಗಣ್ಣ ಚಿಂಚೋಡಿ ಅವರ ಹೊಲದಲ್ಲಿ ಭಾನುವಾರ ಸುರಿದ ಮಳೆ ಗಾಳಿಗೆ ಜೋಳದ ಬೆಳೆ ನೆಲಕ್ಕುರುಳಿದೆ
ಕಕ್ಕೇರಾ ಹೊರವಲಯದ ಸಂಗಣ್ಣ ಚಿಂಚೋಡಿ ಅವರ ಹೊಲದಲ್ಲಿ ಭಾನುವಾರ ಸುರಿದ ಮಳೆ ಗಾಳಿಗೆ ಜೋಳದ ಬೆಳೆ ನೆಲಕ್ಕುರುಳಿದೆ   

ಕಕ್ಕೇರಾ: ಭಾನುವಾರ ಸುರಿದ ಭಾರಿ ಮಳೆಯಿಂದ ಹೊಲಗಳಲ್ಲಿ ನೀರು ಹರಿದು ಬೆಳೆಗಳು ನಾಶವಾಗಿವೆ. ಪಟ್ಟಣದ ಹೊರವಲಯದ ಸಂಗಣ್ಣ ಚಿಂಚೋಡಿ ಅವರ ಹೊಲದಲ್ಲಿ 2 ಎಕರೆ ಜೋಳದ ಬೆಳೆ ನೆಲಕ್ಕುರುಳಿ ಹಾಳಾಗಿದೆ.

‘ಬರಗಾಲವಿದ್ದರೂ 2 ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದೆ. ಈಗ ಬೆಳೆ ಕೈಗೆ ಬರುವ ಹಂತದಲ್ಲಿ ಮಳೆ ಗಾಳಿಗೆ ಜೋಳದ ಬೆಳೆ ನೆಲಸಮವಾಗಿದೆ. ಇದರಿಂದ ದಿಕ್ಕು ತೋಚದಂತಾಗಿದೆ’ ಎಂದು ರೈತ ಸಂಗಣ್ಣ ಚಿಂಚೋಡಿ ಅಳಲು ತೋಡಿಕೊಂಡರು.

‘ಸಂಗಣ್ಣ ಅವರ ಜೋಳದ ಬೆಳೆ ಹಾಳಾಗಿದ್ದು, ಅವರಿಗೆ ದಿಕ್ಕು ತೋಚದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ಅವರಿಗೆ ಪರಿಹಾರ ಒದಗಿಸಬೇಕು’ ಎಂದು ವೀರಶೈವ ಸಮಾಜದ ಅಧ್ಯಕ್ಷ ಕೊಟ್ರಯ್ಯ ಸ್ವಾಮಿ ಒತ್ತಾಯಿಸಿದ್ದಾರೆ. ಕಕ್ಕೇರಾದಲ್ಲಿ ಮೂರು ದಿನಗಳಿಂದ 69 ಮಿ.ಮೀ ಮಳೆ ಸುರಿದಿದೆ. ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಸಿ.ಸಿ ರಸ್ತೆಗಳು ಮಳೆ ನೀರಿಗೆ ಕೊಚ್ಚಿ ಹೋಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.