ADVERTISEMENT

ಹಕ್ಕುಚ್ಯುತಿಗೆ ಖಂಡನೆ; ವಕೀಲರ ಪ್ರತಿಭಟನೆ

ಮಸೂದೆ ತಿದ್ದುಪಡಿ ತಿರಸ್ಕರಿಸುವಂತೆ ಒತ್ತಾಯ, ವೃತ್ತಿಯಲ್ಲಿಲ್ಲದವರನ್ನು ತರುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:13 IST
Last Updated 22 ಏಪ್ರಿಲ್ 2017, 5:13 IST
ಹಕ್ಕುಚ್ಯುತಿಗೆ ಖಂಡನೆ; ವಕೀಲರ ಪ್ರತಿಭಟನೆ
ಹಕ್ಕುಚ್ಯುತಿಗೆ ಖಂಡನೆ; ವಕೀಲರ ಪ್ರತಿಭಟನೆ   
ಯಾದಗಿರಿ: ವಕೀಲರ ಹಕ್ಕುಚ್ಯುತಿಗಾಗಿ ಕೇಂದ್ರ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ನೀಡಿರುವ ಮಸೂದೆ ತಿದ್ದುಪಡಿ ವರದಿಯನ್ನು ತಿರಸ್ಕರಿಸು ವಂತೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿ ಗಳು ಪ್ರತಿಭಟನೆ ನಡೆಸಿದರು.
 
‘ವಕೀಲರ ಸಂಘಟನೆಗಳಲ್ಲಿ ವಕೀಲಿ ವೃತ್ತಿ ಅಲ್ಲದವರನ್ನು ತರುವ ಹುನ್ನಾರ ನಡೆದಿದೆ. ವಕೀಲರಿಗೆ ಸಾಂವಿಧಾನಿಕವಾಗಿ ನೀಡಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶದಿಂದ ಮಸೂದೆ ತಿದ್ದುಪಡಿಗೆ ವರದಿ ನೀಡಲಾಗಿದೆ.
 
ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧವಾದುದು’ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಕಾನೂನು ಸಚಿವರು ಈ ವರದಿಯನ್ನು ಅಂಗೀಕರಿಸದೆ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
 
‘ಕೇಂದ್ರ ಕಾನೂನು ಆಯೋಗದ ಅಧ್ಯಕ್ಷ ಚೌಹಾಣ ಅವರನ್ನು ವಜಾ ಗೊಳಿಸಬೇಕು. ವಕೀಲರ ಹಿತಕ್ಕೆ ವಿರುದ್ಧ ವ್ಯವಸ್ಥೆ ತರಲು ಹೊರಟಿರುವ ಅವರನ್ನು ಅಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಇಲ್ಲ. ದೇಶದ ವಕೀಲರಿಗೆ ಕಾನೂನು ಆಯೋಗ ತಪ್ಪು ಮಾಹಿತಿ ನೀಡಿ ಹಕ್ಕುಚ್ಯುತಿಗೆ ಕಾರಣವಾಗಿದೆ’ ಎಂದು ದೂರಿದರು.
 
ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಇಟಗಿ, ನಿಂಗಣ್ಣ  ಬಂದಳ್ಳಿ,ರಾಜು ದೊಡ್ಡಮನಿ, ಬಿ.ಬಿ ಕಿಲ್ಲನಕೇರಾ, ನರಸಿಂಹರಾವ್ ಕುಲಕರ್ಣಿ, ಶಫೀಕ್ ಅಹ್ಮದ್ ಖುರೇಶಿ, ಮಾರುತಿ ಕಾಳೆನೋರ್, ಪರ್ವತರೆಡ್ಡಿ ಪಾಟೀಲ್, ದೇವು ದೊಡ್ಡಮನಿ, ಶಾಂತಪ್ಪ ಕಾನಳ್ಳಿ, ಎಸ್‌.ಬಿ.ಪಾಟೀಲ್, ಹಣಮಂತ ಇಟಗಿ, ಟಿ.ಎಸ್. ಮಾಲಿಪಾಟೀಲ್, ಹಣಮಂತ ಜೋಶಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.