ADVERTISEMENT

ಆನ್‌ಲೈನ್‌ ಇಂಟರ್ನ್‌ಶಿಪ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2016, 19:30 IST
Last Updated 13 ನವೆಂಬರ್ 2016, 19:30 IST
ಆನ್‌ಲೈನ್‌ ಇಂಟರ್ನ್‌ಶಿಪ್‌
ಆನ್‌ಲೈನ್‌ ಇಂಟರ್ನ್‌ಶಿಪ್‌   
ಅಧ್ಯಯನದ ಕೊನೆಯ ಹಂತದಲ್ಲಿ ಪಠ್ಯಕ್ರಮದ ಭಾಗವಾಗಿ ಇಂಟರ್ನ್‌ಶಿಪ್‌ ಪೂರೈಸುವುದು ಈಗ ಬಹುತೇಕ ಕೋರ್ಸ್‌ಗಳಿಗೆ ಕಡ್ಡಾಯ. ಅಂತೆಯೇ ಉತ್ತಮ ಸಂಸ್ಥೆಯೊಂದರಲ್ಲಿ ಇಂಟರ್ನ್‌ಶಿಪ್‌ ಪೂರೈಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಬಯಕೆ. ಕೆಲವು ಕಾಲೇಜುಗಳೇ ಈ ಇಂಟರ್ನ್‌ಶಿಪ್‌ ವ್ಯವಸ್ಥೆ ಮಾಡುತ್ತವೆ. ಇನ್ನೂ ಕೆಲವು ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳೇ ಸ್ವತಃ ಉತ್ತಮ ಸಂಸ್ಥೆಗಳನ್ನು ಆಯ್ದುಕೊಳ್ಳಬೇಕಾಗುತ್ತದೆ.
 
ಅಂತಹ ಅಭ್ಯರ್ಥಿಗಳ ನೆರವಿಗೆ ಇಂಟರ್ನ್‌ಶಾಲಾ ಹೊಸ ಸಾಧ್ಯತೆಯೊಂದನ್ನು ತೆರೆದಿಟ್ಟಿದೆ. 
 
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇಂಟರ್ನ್‌ಶಾಲಾ ಮೂಲಕ ಆನ್‌ಲೈನ್‌ನಲ್ಲಿ  ಇಂಟರ್ನ್‌ಶಿಪ್‌ಗೆ ಅವಕಾಶ ಪಡೆಯಬಹುದು. 
 
ಸುಮಾರು 30 ಸಾವಿರ ಸಂಸ್ಥೆಗಳು ಇಂಟರ್ನ್‌ಶಾಲಾದಲ್ಲಿ ಹೆಸರು ನೋಂದಾಯಿಸಿಕೊಂಡಿವೆ. ದೇಶದ ಯಾವುದೇ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ  ಇಂಟರ್ನ್‌ಶಿಪ್‌ ಮಾಡಬಹುದು. 
 
ಇದು ಸಂಪೂರ್ಣ ಉಚಿತವಾಗಿದ್ದು, ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸ್ಟೈಪಂಡ್‌ ಸಹ ನೀಡಲಾಗುವುದು. 
ಹೆಚ್ಚಿನ ಮಾಹಿತಿಗೆ ಲಾಗಿನ್‌ ಆಗಿ– http://internshala.com. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.