ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2016, 19:30 IST
Last Updated 16 ಅಕ್ಟೋಬರ್ 2016, 19:30 IST

1) ಗ್ರಾ.ಪಂ., ತಾ.ಪಂ. ಮತ್ತು ಜಿಲ್ಲಾ ಪಂಚಾಯ್ತಿ ಸಭೆಗೆ ಅಧ್ಯಕ್ಷರು ಗೈರು ಹಾಜರಾದಾಗ ಸಭೆಯನ್ನು ಯಾರ ಅಧ್ಯಕ್ಷತೆಯಲ್ಲಿ ನಡೆಸುತ್ತಾರೆ?
a) ಉಪಾಧ್ಯಕ್ಷರು  b) ಹಿರಿಯ ಸದಸ್ಯ
c) ಸರ್ಕಾರಿ ಅಧಿಕಾರಿಗಳು d) ಶಾಸಕರು

2) ಜಿಲ್ಲಾ ಪಂಚಾಯ್ತಿಯಲ್ಲಿ ಒಟ್ಟು ಎಷ್ಟು ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ?
a) ನಾಲ್ಕು   b) ಐದು
c) ಆರು  d) ಏಳು

3) ಈ ಕೆಳಕಂಡವುಗಳಲ್ಲಿ ಯಾವುದು ತಾಲ್ಲೂಕು ಪಂಚಾಯ್ತಿಯ ಸ್ಥಾಯಿ ಸಮಿತಿಯಾಗಿರುವುದಿಲ್ಲ?
a) ಸಾಮಾಜಿಕ ನ್ಯಾಯ ಸಮಿತಿ  b) ಯೋಜನಾ ಸಮಿತಿ
c) ವಯಸ್ಕರ ಶಿಕ್ಷಣ ಸಮಿತಿ d) ಹಣಕಾಸು ಸಮಿತಿ

4) ಜಿಲ್ಲಾ ಪಂಚಾಯ್ತಿ ಸದಸ್ಯರು ಲಿಖಿತ ರೂಪದ ರಾಜೀನಾಮೆಪತ್ರವನ್ನು ಈ ಕೆಳಕಂಡ ಯಾರಿಗೆ ಸಲ್ಲಿಸಬಹುದು?
a) ಜಿಲ್ಲಾಧಿಕಾರಿ   b) ಜಿಲ್ಲಾ ಉಸ್ತುವಾರಿ ಸಚಿವ c) ಕಾರ್ಯನಿರ್ವಹಣಾ ಅಧಿಕಾರಿ
d) ಜಿ.ಪಂ. ಅಧ್ಯಕ್ಷರು

5) ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷರ ಆಡಾಳಿತಾವಧಿಯು  ಎಷ್ಟು ತಿಂಗಳು ಇರುತ್ತದೆ ?
a) 20 ತಿಂಗಳು  b) 25 ತಿಂಗಳು
c) 30 ತಿಂಗಳು  d) 40 ತಿಂಗಳು

6) ಗ್ರಾಮ ಪಂಚಾಯ್ತಿ ಸದಸ್ಯರಾಗಲು ಈ ಕೆಳಕಂಡ ಯಾವ ಅರ್ಹತೆಯನ್ನು ಕಡ್ಡಾಯ ಮಾಡಲಾಗಿದೆ?
a) ಸ್ನಾತಕೋತ್ತರ ಪದವಿ ಪಡೆದಿರಬೇಕು  
b) ಶೌಚಾಲಯ ಹೊಂದಿರಬೇಕು
c) ಜಮೀನು ಹೊಂದಿರಬೇಕು  
d)  ಖರ್ಚು ಮಾಡುವಷ್ಟು ಹಣವಿರಬೇಕು

7)ಗ್ರಾ.ಪಂ. ಸಭೆ, ತಾ. ಪಂ. ಸಭೆ, ಮತ್ತು ಜಿ.ಪಂ.ನ ವಿಶೇಷ ಸಭೆ ನಡೆಸಲು ಕನಿಷ್ಠ ಪಕ್ಷ  ಎಷ್ಟು ಸದಸ್ಯರ ಬೆಂಬಲವಿರಬೇಕು?
a) ಎರಡನೇ ಮೂರರಷ್ಟು  b) ಮೂರನೇ ಒಂದರಷ್ಟು
c)  ಐದನೇ ಒಂದರಷ್ಟು  d) ಎಲ್ಲ ಸದಸ್ಯರು

8) ಜಿಲ್ಲಾ ಪಂಚಾಯ್ತಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಈ ಕೆಳಕಂಡವರಲ್ಲಿ ಯಾರು ನೇಮಕ ಮಾಡುತ್ತಾರೆ?
a) ಜಿ.ಪಂ. ಅಧ್ಯಕ್ಷರು b) ಕಾರ್ಯನಿರ್ವಹಣಾ ಅಧಿಕಾರಿ  c) ಸರ್ಕಾರ  d) ಜಿ.ಪಂ.ನ ಎಲ್ಲ ಸದಸ್ಯರು

9) ಒಂದು ವರ್ಷದಲ್ಲಿ ಕನಿಷ್ಠ ಪಕ್ಷ ಎಷ್ಟು ಬಾರಿ ಗ್ರಾಮ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು?
a) ಒಂದು ಬಾರಿ   b) ಎರಡು ಬಾರಿ
c) ಮೂರು ಬಾರಿ  d) ನಾಲ್ಕು ಬಾರಿ

10) ಗ್ರಾ.ಪಂ, ತಾ. ಪಂ, ಮತ್ತು ಜಿ.ಪಂ.ಗೆ ನಡೆಯುವ ಚುನಾವಣೆಗೆ ಮತದಾರರ ಪಟ್ಟಿಯನ್ನು ಯಾರ ತಯಾರು ಮಾಡುತ್ತಾರೆ?
a) ಜಿಲ್ಲಾಧಿಕಾರಿಗಳು  b) ಸರ್ಕಾರ
c) ರಾಜಕೀಯ ಪಕ್ಷಗಳು  d) ಚುನಾವಣಾ ಆಯೋಗ

ಉತ್ತರಗಳು 1-a, 2-b, 3-c, 4-d, 5-a, 6-b, 7-b, 8-c, 9-b, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.