ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2016, 19:30 IST
Last Updated 13 ನವೆಂಬರ್ 2016, 19:30 IST
1. ಕರ್ನಾಟಕದ ಗೆಜೆಟ್ ದಾಖಲೆಗಳ ಪ್ರಕಾರ ರಾಜ್ಯದ ಅರಣ್ಯಭೂಮಿಯ ವಿಸ್ತೀರ್ಣ ಎಷ್ಟಿದೆ? 
a) 43,356,45 ಚ.ಕಿ.ಮೀ.
b) 44,456,45 ಚ.ಕಿ.ಮೀ.  
c) 45,556,45 ಚ.ಕಿ.ಮೀ.  
d) 46,656,45 ಚ.ಕಿ.ಮೀ.  
 
2. ಕರ್ನಾಟಕ ಸರ್ಕಾರದ ವಾಜಪೇಯಿ ಆರೋಗ್ಯ ವಿಮಾ ಯೋಜನೆ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ?
a) ಆರೋಗ್ಯ
b) ಕೃಷಿ
c) ಕೈಗಾರಿಕೆ
d) ಕಾರ್ಮಿಕ ಕಲ್ಯಾಣ
 
3. ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ ಭಾಗ-1 ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಕೃತಿಯ ಕರ್ತೃ ಯಾರು?
a) ಎಚ್. ತಿಪ್ಪೆರುದ್ರಸ್ವಾಮಿ        
b) ಶಂ. ಬಾ. ಜೋಶಿ
c) ರಂ. ಶ್ರೀ. ಮುಗುಳಿ              
d)ಎಂ. ಚಿದಾನಂದಮೂರ್ತಿ
 
4. ಮುಲ್ಲ ಪೆರಿಯಾರ್ ಅಣೆಕಟ್ಟು ವಿವಾದ ಈ ಕೆಳಕಂಡ ಯಾವ ರಾಜ್ಯಗಳ ನಡುವೆ ಉದ್ಭವಿಸಿದೆ?
a) ಕರ್ನಾಟಕ-ತಮಿಳುನಾಡು
b) ಕೇರಳ-ತಮಿಳುನಾಡು
c) ತಮಿಳುನಾಡು-ಆಂಧ್ರಪ್ರದೇಶ
d) ಕೇರಳ-ಗೋವಾ
 
5. ಜಾಗತಿಕ ತಾಪಮಾನ ಏರಿಕೆ  ಮತ್ತು ಹಸಿರುಮನೆ ಪರಿಣಾಮ ನಿಯಂತ್ರಣಕ್ಕಾಗಿ 194 ದೇಶಗಳು ಮಾಡಿಕೊಂಡಿರುವ ಒಪ್ಪಂದ ಯಾವುದು ?
a) ನ್ಯಾಟೊ
b) ಇಕೋ
c) ಕ್ಯೂಟೊ
d) ಸೆಟೋ
 
6. ಬಂಗಾಳಕೊಲ್ಲಿಯ ಉತ್ತರ ತೀರದಲ್ಲಿರುವ ಚಿತ್ತಗಾಂಗ್ ನಗರ ಯಾವ ದೇಶದ ಮುಖ್ಯ ಬಂದರು ನಗರವಾಗಿದೆ?
a) ಭೂತಾನ್
b) ಭಾರತ
c) ಬಾಂಗ್ಲಾದೇಶ
d)  ಮ್ಯಾನ್ಮಾರ್
 
7. ಜೇಡಿಮಣ್ಣು, ಮರಳು, ಸುಣ್ಣದಕಲ್ಲು ಡೊಲಾಮೈಟ್ ಕಲ್ಲಿದ್ದಲು, ಜಿಪ್ಸಂ ಲವಣದಿಂದ ಯಾವ ಪದಾರ್ಥವನ್ನು ತಯಾರಿಸಲಾಗುತ್ತದೆ?
a) ಸುಣ್ಣ
b) ಬಣ್ಣ
c) ರಸಗೊಬ್ಬರ
d) ಸಿಮೆಂಟ್
 
8. ಕಾಲದ ಕರೆ, ಮನುಕುಲದ ಹಾಡು, ಹರಿವ ನೀರು, ಸಂಪರ್ಕ ಈ ಕೃತಿಗಳನ್ನು ರಚಿಸಿದ ಕನ್ನಡದ ಖ್ಯಾತ ಸಾಹಿತಿ ಯಾರು?
a) ಯಶವಂತ ಚಿತ್ತಾಲ
b) ಕುಂ. ವೀರಭದ್ರಪ್ಪ
c) ಗೌರೀಶ್ ಕಾಯ್ಕಿಣಿ
d) ಗಂಗಾಧರ ಚಿತ್ತಾಲ
 
9. ಆಹಾರದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವುದರಿಂದ ಈ ಕೆಳಕಂಡ ಯಾವ ವಿಟಮಿನ್ ಕೊರತೆ ಉಂಟಾಗುತ್ತದೆ?
a) ವಿಟಮಿನ್ ಬಿ
b) ವಿಟಮಿನ್ ಬಿ12
c) ವಿಟಮಿನ್ ಸಿ  
d) ವಿಟಮಿನ್ ಡಿ
 
10. ಕ್ರೋಮೈಟ್ ಉತ್ಪಾದನೆಯಲ್ಲಿ ಈ ಕೆಳಕಂಡ ಯಾವ ರಾಜ್ಯ ಅಗ್ರಸ್ಥಾನವನ್ನು ಪಡೆದಿದೆ?
a) ಆಂಧ್ರಪ್ರದೇಶ
b) ತೆಲಂಗಾಣ
c) ಒಡಿಶಾ  
d) ಬಿಹಾರ
 
ಉತ್ತರಗಳು 1-a, 2-a, 3-b, 4-b, 5-c, 6-c, 7-d, 8-d, 9-b, 10-c.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.