ADVERTISEMENT

ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 19:30 IST
Last Updated 3 ಸೆಪ್ಟೆಂಬರ್ 2017, 19:30 IST
ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ
ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ   

ಆರ್.ಎಲ್. ಜಾಲಪ್ಪ ಅಕಾಡೆಮಿಯು ಬ್ಯಾಂಕಿಂಗ್ ಪರೀಕ್ಷೆಗೆ ಸೆಪ್ಟೆಂಬರ್ ಎರಡನೇ ವಾರದಿಂದ ತರಬೇತಿಯನ್ನು ಆರಂಭಿಸಲಿದೆ. ಈ ತರಬೇತಿಯು ಸೋಲೂರಿನಲ್ಲಿ ನಡೆಯಲಿದೆ.

ಯಾವುದೇ ವಿಷಯದಲ್ಲಿ ಪದವಿ ಪಡೆದ 20-30 ವಯಸ್ಸಿನವರು ಬ್ಯಾಂಕಿಂಗ್‌ ಪರೀಕ್ಷೆ ತೆಗೆದುಕೊಳ್ಳಲು ಅರ್ಹರು. ಆನ್‌ಲೈನ್‌ ಮೂಲಕವೂ ಅಕಾಡೆಮಿ ತರಬೇತಿ ನೀಡಲಿದೆ. ಪ್ರವರ್ಗ 1 ಮತ್ತು 2 ಎಗೆ ಸೇರಿದ ಆಸಕ್ತರು ಸೆಪ್ಟೆಂಬರ್‌ 10ರೊಳಗೆ ಅರ್ಜಿ ಸಲ್ಲಿಸಬೇಕು.

ತರಬೇತಿಗೆ ಅರ್ಜಿ ಆಹ್ವಾನ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯು 6ರಿಂದ 8ನೇ ತರಗತಿಗೆ ಶಿಕ್ಷಕರನ್ನು ನೇಮಿಸಿಕೊಳ್ಳಲು ನವೆಂಬರ್‌ 4ರಂದು ಜಿಲ್ಲಾವಾರು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಬರೆಯುವ ಪ್ರವರ್ಗ 1 ಮತ್ತು ಪ್ರವರ್ಗ 2ಎ ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಕಾಡೆಮಿಯ ಸೋಲೂರಿನಲ್ಲಿ ಸೆಪ್ಟೆಂಬರ್‌ 15ರಿಂದ ಉಚಿತ ತರಬೇತಿ ನೀಡಲಿದೆ.

ADVERTISEMENT

ತರಬೇತಿಯಲ್ಲಿ ಸಾಮಾನ್ಯ ವಿಷಯ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳ ಸಂಖ್ಯೆ 40ಕ್ಕಿಂತ ಹೆಚ್ಚು ಇದ್ದರೆ ಐಚ್ಛಿಕ ವಿಷಯಗಳಿಗೆ ತರಬೇತಿ ಇರಲಿದೆ. ಯುವಕ ಹಾಗೂ ಯುವತಿಯರಿಗೆ ಪ್ರತ್ಯೇಕ ವಸತಿ ನಿಲಯದ ಸೌಲಭ್ಯವಿದೆ. ಆಸಕ್ತ ಬಿ.ಇಡಿ. ಪದವೀಧರರು ಸೆಪ್ಟೆಂಬರ್‌ 10ರೊಳಗೆ ಅರ್ಜಿ ಸಲ್ಲಿಸಬೇಕು.
ವಿಳಾಸ: ಕಾರ್ಯದರ್ಶಿ, ಆರ್.ಎಲ್‌. ಜಾಲಪ್ಪ ಅಕಾಡೆಮಿ, ಸೋಲೂರು, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ, 562127.

*
ನೀಟ್ ಪರೀಕ್ಷೆ ತರಬೇತಿ
ವೈದ್ಯಕೀಯ ಶಿಕ್ಷಣ ಪಡೆಯಲು ಹಂಬಲಿಸುವವರಿಗೆ ನೀಟ್ ಪರೀಕ್ಷೆ. ನೀಟ್‌ಗೆ ಕೋಚಿಂಗ್ ಪಡೆಯುವುದು ಎಷ್ಟು ಮುಖ್ಯವೋ, ಕೋಚಿಂಗ್ ನೀಡುವ ಸಂಸ್ಥೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ನೀಟ್‌ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದೆ ಎಕ್ಸಾಂ 24X7.com. ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ನಿಮ್ಮ ವೈದ್ಯಕೀಯ ಕನಸನ್ನು ನನಸಾಗಿಸಲು ಮುಕ್ತ ಅವಕಾಶ ಕಲ್ಪಿಸುತ್ತಿದೆ ಎಕ್ಸಾಂ 24X7.com. ಇಲ್ಲಿ ಪರಿಣಿತ ಪ್ರಾಧ್ಯಾಪಕರಿಂದ 8 ತಿಂಗಳ ತರಬೇತಿ ಪಡೆದು ನೀಟ್ ಮೂಲಕ ಮೆಡಿಕಲ್ ಸೀಟ್ ಗಳಿಸಲು ಸಾಧ್ಯ, ಎಕ್ಸಾಂ 24X7.com ನಲ್ಲಿ ತರಬೇತಿ ಪಡೆದ ಮೊದಲ ಬ್ಯಾಚ್‌ನ ಎಲ್ಲಾ 25 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಆರ್ಹತೆ ಗಳಿಸಲು ಯಶಸ್ವಿಯಾಗಿದ್ದಾರೆ.

ತರಬೇತಿಯಲ್ಲಿ ಭಿನ್ನತೆ: ಎಕ್ಸಾಂ 24X7.comನಲ್ಲಿ ತರಬೇತಿ ನೀಡುವ ವಿಧಾನ ಭಿನ್ನವಾಗಿದೆ. ಇಲ್ಲಿ ಪಠ್ಯಕ್ರಮಗಳನ್ನು ಸುಲಭ–ಮಧ್ಯಮ–ಕಠಿಣ ಎಂಬ 3 ವಿಭಾಗಗಳಾಗಿ ವಿಂಗಡಿಸಿ ಕ್ರಮಾನುಸಾರ ತರಬೇತಿ ನೀಡಲಾಗುತ್ತದೆ. 8 ತಿಂಗಳ ಅವಧಿಯಲ್ಲಿ ದಿನಕ್ಕೆ 5 ಗಂಟೆಯಂತೆ ವಾರದ 5 ದಿನಗಳ ಕಾಲ ನಿರಂತರ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಪರಿಪೂರ್ಣವಾಗಿದೆಯಾ ಎಂದು ತಿಳಿದುಕೊಳ್ಳಲು ವಾರಕೊಮ್ಮೆ ಪರೀಕ್ಷೆಯನ್ನು ನಡೆಸಲಾಗುವುದು. ತರಬೇತಿ ಅಂತ್ಯದ ಒಳಗಾಗಿ ಒಟ್ಟು 10 ಬಾರಿ ಅಣಕುಪರೀಕ್ಷೆಯನ್ನು ನಡೆಸಲಾಗುವುದು. ಫೆಬ್ರುವರಿ ಅಂತ್ಯದ ವೇಳೆಗೆ ಎಲ್ಲಾ ಸಿಲೆಬಸ್ ಪೂರ್ಣಗೊಳಿಸಿ ಮಾರ್ಚ್‌ನಲ್ಲಿ ಪುನರ್ ಮನನ ನಡೆಯುತ್ತದೆ.

ಇನ್ನು ನೀಟ್ ಪರೀಕ್ಷೆ ಬರೆಯುವಲ್ಲಿ ಅತಿ ಮುಖ್ಯವಾದ ವಿಷಯವೆಂದರೆ ಸಮಯದ ಹೊಂದಾಣಿಕೆ. ಇದಕ್ಕಾಗಿಯೇ ಎಕ್ಸಾಂ 24X7.com ಪ್ರತಿ ಪ್ರಶ್ನೆಗೆ 45 ಸೆಕೆಂಡ್‌ಗಳಂತೆ ನಿರ್ದಿಷ್ಟ ಸಮಯದ ಒಳಗಾಗಿ ಎಲ್ಲ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬಹುದು ಎಂಬ ಬಗ್ಗೆ ವಿಶೇಷ ತರಬೇತಿ ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ: www.exams24X7.com ವೆಬ್‌ಸೈಟ್ ಅನ್ನು ಸಂಪರ್ಕಿಸಿ. ಸಂಪರ್ಕಕ್ಕೆ: 7760077722/7795777722

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.