ADVERTISEMENT

‘ಉಪ್ಪು ಹುಳಿ ಖಾರ’ಕ್ಕೆ ನ್ಯೂಯಾರ್ಕ್‌ನಲ್ಲಿ ಹೆಜ್ಜೆ

ಕ್ಲೈಮಾಕ್ಸ್‌ ಬಾಕಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2016, 19:30 IST
Last Updated 15 ಸೆಪ್ಟೆಂಬರ್ 2016, 19:30 IST
ಉಪ್ಪು ಹುಳಿ ಖಾರ- ಅನುಶ್ರೀ, ಶರತ್
ಉಪ್ಪು ಹುಳಿ ಖಾರ- ಅನುಶ್ರೀ, ಶರತ್   

ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ಚಿತ್ರತಂಡ ಅಮೆರಿಕದ ನ್ಯೂಯಾರ್ಕ್‌ ನಗರದ ಅದ್ಭುತ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಿದೆ.

ನಾಯಕ ಶರತ್‌ ಹಾಗೂ ನಾಯಕಿ ಅನುಶ್ರೀ ‘ರೋಮಿಯೊ.. ರೋಮಿಯೊ..’ ಎಂಬ ಹಾಡಿಗೆ ಟೈಮ್‌ ಸ್ಕ್ವೇರ್‌, ಲೋವರ್ ಮ್ಯಾನ್‌ಹಟನ್, ಪ್ಯಾಟರಿ ಪಾರ್ಕ್, ಸ್ಕೈ ಲೈನ್‌ ಹೋಟೆಲ್‌, ಪಿಯರ್ ಲೆವೆಲ್‌ ಹಾಗೂ ಬ್ರೂಕ್ಲಿನ್ ಬ್ರಿಡ್ಜ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.

ಮೂರು ದಿನ ಹಾಡಿನ ಚಿತ್ರೀಕರಣ ನಡೆದಿದ್ದು, ‘ರಂಗಿತರಂಗ’ ಖ್ಯಾತಿಯ ಛಾಯಾಗ್ರಾಹಕ ಲಾನ್ಸ್ ಕಪ್ಲಾನ್‌ ನೃತ್ಯದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಆದದರೆ, ಸಿನಿಮಾದ ಬಹುತೇಕ ಛಾಯಾಗ್ರಹಣದ ಹೊಣೆ ಮಾತ್ರ ನಿರಂಜನ್ ಬಾಬು ಅವರದು.

ಚಿತ್ರದ ಕ್ಲೈಮಾಕ್ಸ್‌ ಹಾಗೂ ಮೂರು ಹಾಡುಗಳ ಚಿತ್ರೀಕರಣವಿನ್ನೂ ಬಾಕಿಯಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮೂವರು ಸಂಗೀತ ನಿರ್ದೇಶಕರು ಮಟ್ಟು ಹಾಕಿದ್ದಾರೆ. ಜುಡೊ ಸ್ಯಾಂಡಿ ಮೂರಕ್ಕೆ, ಕಿಶೋರ್ ಹಾಗೂ ಪ್ರಜ್ವಲ್ ಪೈ ತಲಾ ಒಂದೊಂದು ಹಾಡುಳಿಗೆ ರಾಗ ಸಂಯೋಜಿಸಿದ್ದಾರೆ.

ಸಿನಿಮಾದಲ್ಲಿ ಮಾಲಾಶ್ರೀ ಅವರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಇನ್ನೂ ಕೆಲ ಹೊಸ ಮುಖಗಳನ್ನು ಇಮ್ರಾನ್ ಪರಿಚಯಿಸುತ್ತಿದ್ದಾರೆ. ರಮೇಶ್ ರೆಡ್ಡಿ (ನಂಗ್ಲಿ) ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.