ADVERTISEMENT

ಕರಣ್‌ ಕಷ್ಟ...

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 10:31 IST
Last Updated 24 ಜುಲೈ 2014, 10:31 IST

ಈಗತಾನೆ ಬಾಲಿವುಡ್‌ ಪ್ರವೇಶಿಸುತ್ತಿರುವ ಕಿರುತೆರೆ ನಟರ ಜೊತೆ ಹೋಲಿಕೆ ಮಾಡುತ್ತಿರುವುದಕ್ಕೆ ‘ಕಿತನಿ ಮೊಹಬತ್‌ ಹೈ’ ಚಿತ್ರದ ನಟ ಕರಣ್‌ ಕುಂದ್ರಾ ಅವರಿಗೆ ಬೇಜಾರಾಗಿದೆ.

‘ಸಮಕಾಲೀನ ಟಿ.ವಿ ನಟರ ಜೊತೆ ಯಾವುದೇ ಸ್ಪರ್ಧೆಯಿಲ್ಲ. ನನ್ನ ಗುರಿ ಏನಿದ್ದರೂ ವರುಣ್‌ ಧವನ್‌ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಅವರಿಗೆ ಸ್ಪರ್ಧೆ ಒಡ್ಡುವುದು. ಆ ನಿಟ್ಟಿನಲ್ಲಿ ಸಮರ್ಥನಾಗಲು ಪ್ರಯತ್ನಿಸುತ್ತಿದ್ದೇನೆ’ ಎಂದು ವಿಕ್ರಂ ಭಟ್‌ ಅವರ ‘ಹಾರರ್‌ ಸ್ಟೋರಿ’ ಚಿತ್ರದ ಮೂಲಕ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ 29 ವರ್ಷದ ಕರಣ್‌ ಹೇಳಿದ್ದಾರೆ.

ಕಿರುತೆರೆ, ಬೆಳ್ಳಿಪರದೆ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸುವುದಾಗಿ ಇದೆ ವೇಳೆ ಕರಣ್‌ ತಿಳಿಸಿದ್ದಾರೆ.
ಸುಶಾಂತ್‌ ಸಿಂಗ್‌ ರಜಪೂತ್‌, ಜೇ ಭಾನುಶಾಲಿ, ಸಿದ್ಧಾರ್ಥ ಶುಕ್ಲಾ ಸೇರಿದಂತೆ ಹಲವು ಮುಖಗಳು ಇತ್ತೀಚೆಗೆ ಕಿರುತೆರೆಯಿಂದ ಬಾಲಿವುಡ್‌ ಪ್ರವೇಶಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.