ADVERTISEMENT

ರಾಣಿಗೆ ತಾಯ್ತನದ ಬಯಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2014, 19:30 IST
Last Updated 19 ಆಗಸ್ಟ್ 2014, 19:30 IST

ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅವರಿಗೆ ಆದಷ್ಟು ಬೇಗ ಗರ್ಭಿಣಿ ಆಗುವ ಆಸೆಯಂತೆ. ಯಶ್‌ರಾಜ್‌ ಫಿಲ್ಮ್ಸ್‌ನ ನಿರ್ದೇಶಕ ಹಾಗೂ ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು ವರಿಸಿರುವ ರಾಣಿ ಇತ್ತೀಚೆಗೆ ಮಾಧ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದಾರೆ.

ವಿವಾಹವಾಗಿ ಕೆಲವೇ ತಿಂಗಳು ಕಳೆಯುತ್ತಿದ್ದಂತೆಯೇ ರಾಣಿ ಮುಖರ್ಜಿ ಗರ್ಭಿಣಿಯಾಗಿದ್ದಾರೆ ಎಂದು ಸಾಕಷ್ಟು ಗಾಳಿ ಮಾತು ಬಾಲಿವುಡ್‌ನಲ್ಲಿ ಹರಡಿದ್ದವು.

‘ನಾನು ಗರ್ಭಿಣಿಯಾಗಿದ್ದೇನೆ ಎಂದು ವಿವಾಹಕ್ಕಿಂತ ಮುಂಚಿತವಾಗಿಯೇ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಈ  ಗಾಳಿಮಾತುಗಳು ನಿಜವಾದರೆ ನನಗೆ ತುಂಬಾ ಸಂತೋಷವಾಗುತ್ತದೆ. ಗಾಳಿಮಾತುಗಳಿಂದಲೇ ನಾನು ತಾಯಿಯಾಗುವ ಸೌಭಾಗ್ಯ ಪಡೆಯುತ್ತೇನೆ. ಈ ಮಾತುಗಳು ಬ್ರಹ್ಮಾಂಡವನ್ನು ತಲುಪಿ ಅದು ನನ್ನನ್ನು ಗರ್ಭಿಣಿಯಾನ್ನಾಗಿಸುತ್ತದೆ’ ಎಂದು ರಾಣಿ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಪ್ರತಿಯೊಬ್ಬ ಹೆಣ್ಣು ಸಹ ಜೀವನದಲ್ಲಿ ತಾಯ್ತನದ ಸುಖವನ್ನು ಅನುಭವಿಸಲು ಹಾತೊರೆಯುತ್ತಾಳೆ. ಇದರಿಂದ ನಾನು ಹೊರತಾಗಿಲ್ಲ. ನನಗೂ ತಾಯಿಯಾಗಿ ಹೆಣ್ಣು ಜೀವನದ ಪ್ರತಿಯೊಂದು ಘಟ್ಟವನ್ನು ಅನುಭವಿಸುವ ಆಸೆ ಇದೆ’ ಎಂದಿದ್ದಾರೆ ರಾಣಿ.

‘ನಾನು ಗರ್ಭಿಣಿಯಾದಾಗಲೂ ಚಿತ್ರಗಳಲ್ಲಿ ಅಭಿನಯಿಸಲು ಬಯಸುತ್ತೇನೆ. ಆದರೆ ಅದನ್ನು ಚಿತ್ರಕತೆ ಹಾಗೂ ನಿರ್ದೇಶಕರ ಮೇಲೆ ನಿರ್ಧಾರ ಮಾಡುತ್ತೇನೆ. ಚಿತ್ರಕತೆ ಚೆನ್ನಾಗಿದ್ದು, ನನಗೆ ಇಷ್ಟವಾದಲ್ಲಿ ಮಾತ್ರ ಅಭಿನಯಿಸಲು ಒಪ್ಪುತ್ತೇನೆ. ಚಿತ್ರರಂಗದಲ್ಲಿ ಕೆಟ್ಟ ಹಾಗೂ ಒಳ್ಳೆಯ ಸುದ್ದಿಗಳನ್ನು ಒಳ್ಳೆಯ ಸುದ್ದಿಯಾಗಿಯೇ ಸ್ವೀಕರಿಸಬೇಕು. ಜನರು ನಮ್ಮ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕೊಡುವುದನ್ನು ನಿಲ್ಲಿಸಬಾರದು’ ಎನ್ನುವ ಅಭಿಪ್ರಾಯ ರಾಣಿಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.