ADVERTISEMENT

ರಾಧಿಕಾ ನೃತ್ಯ ವ್ಯಾಖ್ಯಾನ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

ಮಹಿಳೆಯನ್ನು ಆಶ್ಲೀಲವಾಗಿ ತೋರಿಸುವ ಹಾಡುಗಳ ಬಗ್ಗೆ  ನಟಿ ರಾಧಿಕಾ ಆಪ್ಟೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ‘ಅಂತಹ ಹಾಡುಗಳಲ್ಲಿ ನಾನು ಕಾಣಿಸಿಕೊಳ್ಳಲಾರೆ’ ಎಂದೂ ಅವರು ಹೇಳಿದ್ದಾರೆ.

ಇತ್ತೀಚೆಗೆ ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಐಟಂ ಸಾಂಗ್‌ಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ಇದೆಯೇ? ಎಂಬ ಪ್ರಶ್ನೆಗೆ  ಉತ್ತರಿಸಿದ ‘ಹಂಟರ್’ ನಟಿ, ‘ಅದೆಲ್ಲವೂ ಹಾಡಿನ ಸ್ವರೂಪದ ಮೇಲೆ ನಿರ್ಧರಿತವಾಗುತ್ತದೆ. ಐಟಂ ಸಾಂಗ್‌ ಅಂದರೆ ಏನು? ಅದೊಂದು ಹಾಡು ಮತ್ತು ನೃತ್ಯದ ಸಂಯೋಜನೆಯಷ್ಟೇ.

ಆದರೆ  ಮಹಿಳೆಯ ದೇಹಪ್ರದರ್ಶನವೇ ಅದರ ಉದ್ದೇಶವಾಗಿದ್ದರೆ ಅಥವಾ ಅತಿ ಕಡಿಮೆ ಬಟ್ಟೆ ಧರಿಸುವುದೇ ನೃತ್ಯ ಎಂದಾದರೆ ಅದು ನನಗೆ ಇಷ್ಟವಿಲ್ಲ. ಅಂಥ ಹಾಡುಗಳನ್ನು ನಾನು ಮಾಡುವುದೂ ಇಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಏಳು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ರಾಧಿಕಾ, ಚಿತ್ರರಂಗದಲ್ಲಿನ ನಟ ಮತ್ತು ನಟಿಯರ ನಡುವಣ ತಾರತಮ್ಯದ ವಿರುದ್ಧವೂ ಧ್ವನಿಯೆತ್ತಿದ್ದಾರೆ.

‘ಚಿತ್ರರಂಗದಲ್ಲಿ ನಟ, ನಟಿಯರಿಬ್ಬರೂ ಸಮನಾಗಿ ದುಡಿಯುತ್ತಾರೆ. ಆದರೆ ನಟರು ಹೆಚ್ಚು ಸಂಭಾವನೆ ಪಡೆಯುತ್ತಾರೆ. ಈ ಅಸಮಾನತೆ ನನಗೆ ನನಗಿಷ್ಟವಿಲ್ಲ. ಸಂಭಾವನೆ ನೀಡಲು ಯಾವುದಾದರೂ ನಿರ್ದಿಷ್ಟ ಮಾನದಂಡ ಇರಬೇಕು. ಸಮನಾದ ಕೆಲಸಕ್ಕೆ ನಾನು ಅತ್ಯಂತ ಕಡಿಮೆ ಹಣವನ್ನು ಪಡೆಯುತ್ತೇನೆ. ಆದರೆ ಅದೇ ಸಮಯದಲ್ಲಿ ನನ್ನ ಜತೆ ಕೆಲಸ ಮಾಡಿದ ನಟರು ಅತ್ಯಂತ ಹೆಚ್ಚು ಹಣವನ್ನು ಪಡೆಯುತ್ತಾರೆ. ಇದು ನೋವಿನ ಸಂಗತಿ’ ಎಂದು ಅವರು ತರತಮ ಪರಿಸ್ಥಿತಿಯ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.