ADVERTISEMENT

ಲೈಲಾಗೆ 36ರ ವಸಂತ: ಅಪಮಾನಗಳ ನಡುವೆ ಗೆದ್ದು ನಿಂತ ಸನ್ನಿ ಲಿಯೋನ್‌

ಏಜೆನ್ಸೀಸ್
Published 13 ಮೇ 2017, 8:06 IST
Last Updated 13 ಮೇ 2017, 8:06 IST
ಲೈಲಾಗೆ 36ರ ವಸಂತ: ಅಪಮಾನಗಳ ನಡುವೆ ಗೆದ್ದು ನಿಂತ ಸನ್ನಿ ಲಿಯೋನ್‌
ಲೈಲಾಗೆ 36ರ ವಸಂತ: ಅಪಮಾನಗಳ ನಡುವೆ ಗೆದ್ದು ನಿಂತ ಸನ್ನಿ ಲಿಯೋನ್‌   

ಮುಂಬೈ: ನೀಲಿಚಿತ್ರಗಳ ರಾಣಿ, ವಯಸ್ಕರ ಚಿತ್ರಗಳ ಐಟಂ ಎಂಬ ಹೆಸರುಗಳನ್ನು ಕಳಚಿಕೊಂಡು, ಚಿತ್ರರಂಗದಲ್ಲಿ ಹೀಳೆಯುವವರ ನಡುವೆ ತಮ್ಮದೇ ಆದ ಅಸ್ತಿತ್ವ ಸ್ಥಾಪಿಸಿಕೊಂಡಿರುವ ನಟಿ ಸನ್ನಿ ಲಿಯೋನ್‌ ಶನಿವಾರ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ನೀಲಿಚಿತ್ರಗಳ ಸಾಮ್ಯಾಜ್ಯದಲ್ಲಿ ‘ದೊಡ್ಡ ಹೆಸರು’ ಮಾಡಿದ್ದ ಸನ್ನಿ ಲಿಯೋನ್‌ ಬಾಲಿವುಡ್‌ ಚಿತ್ರ ಜಗತ್ತಿಗೆ ಬಂದ ಹೊಸತರಲ್ಲಿ ಆಕೆಯ ದಾರಿಯೇನೂ ಹೂವಿನ ಹಾದಿಯಾಗಿರಲಿಲ್ಲ. ಆಕೆಯ ಸಮಕಾಲೀನರು ಆಕೆಯನ್ನು ಇನ್ನೂ ನೀಲಿಕಣ್ಣುಗಳಿಂದಲೇ ನೋಡುತ್ತಿದ್ದರು. ಆದರೆ, ಅಪಮಾನ, ಅವಜ್ಞೆಗಳನ್ನು ಮೀರಿ ಸನ್ನಿ ಇಂದು ಬಾಲಿವುಡ್‌ನ ಲೈಲಾ ಆಗಿ ಮಿಂಚುತ್ತಿದ್ದಾರೆ.

ವಿಶ್ವ ಮಹಿಳಾ ದಿನದಂದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಮಾಡಿದ್ದ ಟ್ವೀಟ್‌ಗೆ ಅತಿಯಾದ ಕೋಪದ ಅಬ್ಬರ ಮಾಡದೆ ಚಿಕ್ಕದಾಗಿ ಆದರೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಈ ನಟಿಯ ನಡವಳಿಕೆಗೆ ವರ್ಮಾ ಕ್ಷಮೆ ಕೋರಬೇಕಾಯಿತು.

ADVERTISEMENT

‘ಜಗತ್ತಿನ ಎಲ್ಲಾ ಮಹಿಳೆಯರೂ ಪುರುಷರಿಗೆ ಸನ್ನಿ ಲಿಯೋನ್‌ ನೀಡುವಂಥ ಸುಖವನ್ನೇ ನೀಡಲಿ’ ಎಂದು ವರ್ಮಾ ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸನ್ನಿ, ‘ನಿಮ್ಮ ಜವಾಬ್ದಾರಿ ಅರಿತು ಮಾತನಾಡಿ’ ಎಂದಿದ್ದರು. ಈ ಪ್ರತಿಕ್ರಿಯೆ ಬಳಿಕ ವರ್ಮಾ ಕ್ಷಮೆ ಕೋರಿದ್ದರು.

‘ನಾನು ನನ್ನ ಹಿಂದಿನದನ್ನು ಮರೆಯುವುದಿಲ್ಲ. ನಾನು ಇಲ್ಲಿರುವುದಕ್ಕೆ ನನ್ನ ಹಿಂದಿನ ದಿನಗಳೇ ಕಾರಣ. ನಾನು ಚಿಕ್ಕಂದಿನಿಂದಲೂ ಶೋಷಣೆಗೆ ಒಳಗಾಗಿಲ್ಲ. ನಾನು ಲೈಂಗಿಕ ಕಿರುಕುಳ ಅನುಭವಿಸಿಲ್ಲ. ನನ್ನ ಮೇಲೆ ಅತ್ಯಾಚಾರ ನಡೆದಿಲ್ಲ. ನನ್ನನ್ನು ಯಾರೂ ಕೀಳಾಗಿ ನಡೆಸಿಕೊಂಡಿಲ್ಲ’ ಎನ್ನುತ್ತಾರೆ ಸನ್ನಿ.

‘ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಯಾರಿಗೆ ಏನು ಹೇಳಬೇಕೆನಿಸುತ್ತದೆಯೋ ಅದನ್ನು ಹೇಳಲು ಮುಕ್ತ ಅವಕಾಶವಿದೆ. ಕಠಿಣ ಪರಿಶ್ರಮ, ಪ್ರಾರ್ಥನೆ, ಒಳ್ಳೆಯ ಮನಸ್ಸು ಇದ್ದರೆ ನಮ್ಮ ಕನಸುಗಳು ಸಾಕಾರಗೊಳ್ಳುತ್ತವೆ’ ಎಂಬುದು ಸನ್ನಿ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.