ADVERTISEMENT

ವರ್ತಮಾನದ ‘ಜ್ವಲಂತ’ ಕಥೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2016, 19:30 IST
Last Updated 4 ಫೆಬ್ರುವರಿ 2016, 19:30 IST
ಜ್ವಲಂತಂ ಜ್ವಾಲ, ದೀಪ್ತಿ
ಜ್ವಲಂತಂ ಜ್ವಾಲ, ದೀಪ್ತಿ   

‘ತ್ರಿಕೋನ ಪ್ರೇಮಕಥೆಯೊಳಗೆ ಒಂದು ಸಂದೇಶವಿದೆ’– ಹೀಗೆಂದರು ನಿರ್ದೇಶಕ ಅಂಬರೀಷ್. ಇಂದು (ಫೆ.5) ತೆರೆಗೆ ಬರುತ್ತಿರುವ ‘ಜ್ವಲಂತಂ’ ಚಿತ್ರದಲ್ಲಿ ಒಂದು ಒಳ್ಳೆಯ ವಿಷಯವನ್ನು ಹೇಳಿದ್ದೇವೆ ಎನ್ನುವ ವಿಶ್ವಾಸ ಅವರದ್ದು. ಅಂಬರೀಷ್ ಅವರ ಜತೆ ಹೊಸ ಹುಡುಗರು ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಜ್ವಲಂತಂ’. ಮೂರು ಲಕ್ಷ ಜನರು ಚಿತ್ರದ ಟ್ರೇಲರ್ ವೀಕ್ಷಿಸಿರುವುದು ಚಿತ್ರತಂಡದ ಗೆಲುವಿನ ವಿಶ್ವಾಸಕ್ಕೆ ಕಾರಣವಾಗಿರುವ ಒಂದು ಅಂಶ.

‘ಇದು ಸೆಸ್ಪನ್ಸ್, ಥ್ರಿಲ್ಲರ್ ಮಾದರಿ ಚಿತ್ರ. 100ಕ್ಕೂ ಹೆಚ್ಚು ಜನರು ಕೆಲಸ ಮಾಡಿದ್ದೇವೆ. ಒಳ್ಳೆಯ ಫಲಿತಾಂಶ ಸಿಕ್ಕುತ್ತದೆ. ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಹಾಡು ಚಿತ್ರದಲ್ಲಿದೆ. ಕಲಾವಿದ ಗೌತಂ ನಟನೆಯಲ್ಲಿ ಹಾಡು ಮೂಡಿದೆ’ ಎಂದು ಖುಷಿ ಖುಷಿಯಲ್ಲಿ ಮಾಹಿತಿ ನೀಡಿದರು ಅಂಬರೀಷ್.

ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ್ದು ಕ್ಲೈಮ್ಯಾಕ್ಸ್ ದೃಶ್ಯದ ಬಗ್ಗೆ. ವಿರಾಮದ ನಂತರ ನಾಯಕನನ್ನು ಸಮುದ್ರ ದಡದಲ್ಲಿ ಕುತ್ತಿಗೆಯವರೆಗೂ ಹೂತು ಹಾಕಲಾಗಿದೆ. ಏಕೆ ಆ ರೀತಿ ಎನ್ನುವುದು ಕಥೆಯಲ್ಲಿರುವ ಅಂಶ. ದ್ವಿತೀಯಾರ್ಧದ ದೃಶ್ಯಗಳನ್ನು ಸೆರೆ ಹಿಡಿಯಲು 24 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ’ ಎಂದರು. ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸುಮಾರು ನೂರು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದ ನಾಯಕ ಜ್ವಾಲ. ದೀಪ್ತಿ, ದೀಪಾಗೌಡ ನಾಯಕಿಯರು. ಯಶ್‌ ಶೆಟ್ಟಿ, ಅಚ್ಯುತ್ ಕುಮಾರ್, ಪವನ್‌ ಕುಮಾರ್ ತಾರಾಬಳಗದಲ್ಲಿ  ಇದ್ದಾರೆ.  ‘ಜ್ವಲಂತಂ’ಗೆ ಅನು ರಾವ್ ಬಂಡವಾಳ ಹೂಡಿದ್ದಾರೆ. ಚಿತ್ರತಂಡದ ವಿ. ಕುಮಾರ್, ರಾಜೇಶ್‌ ರಾಯ್ಕರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.