ADVERTISEMENT

ಸುಖಾಸುಮ್ಮನೆ ರ್ಯಾಂಪ್ ನಡೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 19:30 IST
Last Updated 26 ಏಪ್ರಿಲ್ 2015, 19:30 IST
ಕೈಲೀ ಜೆನ್ನರ್
ಕೈಲೀ ಜೆನ್ನರ್   

‘ರೂಪದರ್ಶಿಯಾಗುವುದು ನನ್ನ ಜೀವನದ ಮಹದಾಸೆಯಲ್ಲ. ಅದಕ್ಕಿಂತಲೂ ಮಿಗಿಲಾದ ಕನಸು ಮತ್ತು ಮಹತ್ವಾಕಾಂಕ್ಷೆ ನನಗಿದೆ’ ಎಂದಿದ್ದಾರೆ  ಕೈಲೀ ಜೆನ್ನರ್. ಅಂದಹಾಗೆ, ಜೆನ್ನರ್‌ ಅಮೆರಿಕದ ರಿಯಾಲಿಟಿ ಟೀವಿ ಸ್ಟಾರ್‌ ಕಿಮ್‌ ಕರ್ದಾಶಿಯಾನ್‌ ಅವರ ಸಹೋದರಿ. 17 ವರ್ಷದ ಈ ಚೆಲುವೆ ಈಚೆಗೆ ಪ್ಯಾರಿಸ್‌ನಲ್ಲಿ ನಡೆದ ಅಡಿಡಾಸ್‌ ಫ್ಯಾಷನ್‌ ಷೋನಲ್ಲಿ ತನ್ನ ಭಾವ ಕಾನ್ಯೆ ವೆಸ್ಟ್‌ ಅವರೊಂದಿಗೆ ರ್ಯಾಂಪ್ ವಾಕ್‌ ಮಾಡಿದ್ದರು.

ಜೆನ್ನರ್‌ ರ್ಯಾಂಪ್ ಮೇಲೆ ಕಾಣಿಸಿಕೊಂಡರೂ, ಆಕೆಗೆ ಫ್ಯಾಷನ್‌ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಇಚ್ಛೆ ಏನೂ ಇಲ್ಲವಂತೆ. ಜನಪ್ರಿಯ ರೂಪದರ್ಶಿ ಹಾಗೂ ಜೆನ್ನರ್‌ ಸಹೋದರಿ ಕೆಂಡಾಲ್ ಜೆನ್ನರ್ ಹಾದಿಯಲ್ಲಿ ನಡೆಯುವ ಅಭಿಲಾಷೆಯೂ ಇಲ್ಲವಂತೆ.

‘ಫ್ಯಾಷನ್‌ ತವರೂರು ಪ್ಯಾರಿಸ್‌ನಲ್ಲಿ ಭಾವನೊಟ್ಟಿಗೆ ರ್ಯಾಂಪ್ ಹಂಚಿಕೊಂಡಿದ್ದು ನಿಜಕ್ಕೂ ಭಿನ್ನ ಅನುಭವ. ಆದರೆ, ನಾನು ವೃತ್ತಿಪರ ರೂಪದರ್ಶಿಯಾಗಲು ಬಯಸುವುದಿಲ್ಲ. ಅದೇನಿದ್ದರೂ ನನ್ನ ಅಕ್ಕನಿಗೆ ಬಿಟ್ಟಿದ್ದು. ರ್ಯಾಂಪ್ ವಾಕ್‌ ಮಾಡುವುದಕ್ಕಿಂತಲೂ ನನಗೆ ವಿನ್ಯಾಸದ ಬಗ್ಗೆ ಹೆಚ್ಚು ಮೋಹವಿದೆ’ ಎಂದಿದ್ದಾರೆ ಈಕೆ.
                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.