ADVERTISEMENT

ಹಿರಿಯ ನಟಿ ಪದ್ಮಾ ಕುಮಟಾ ನಿಧನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 4:25 IST
Last Updated 8 ಮಾರ್ಚ್ 2017, 4:25 IST
ಹಿರಿಯ ನಟಿ ಪದ್ಮಾ ಕುಮಟಾ ನಿಧನ
ಹಿರಿಯ ನಟಿ ಪದ್ಮಾ ಕುಮಟಾ ನಿಧನ   

ಬೆಂಗಳೂರು: ಹಿರಿಯ ನಟಿ ಪದ್ಮಾ ಕುಮಟಾ (58) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು.

ನಗರದಲ್ಲಿ ನಡೆಯುತ್ತಿದ್ದ ‘ಮಹಾನದಿ’ ಧಾರವಾಹಿ ಚಿತ್ರೀಕರಣ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.  ಪದ್ಮಾ ಅವರು ‘ಚೋಮನ ದುಡಿ’ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ವರನಟ ರಾಜ್‌ಕುಮಾರ್‌ ಅವರ ‘ದೇವತಾ ಮನುಷ್ಯ’ ಮತ್ತು ಶಿವರಾಜ್‌ಕುಮಾರ್‌ ಅವರ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೆ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.