ADVERTISEMENT

26ಕ್ಕೆ ತೆರೆ ಮೇಲೆ ಗಣೇಶನ ‘ಪಟಾಕಿ’

​ಪ್ರಜಾವಾಣಿ ವಾರ್ತೆ
Published 23 ಮೇ 2017, 10:47 IST
Last Updated 23 ಮೇ 2017, 10:47 IST
26ಕ್ಕೆ ತೆರೆ ಮೇಲೆ ಗಣೇಶನ ‘ಪಟಾಕಿ’
26ಕ್ಕೆ ತೆರೆ ಮೇಲೆ ಗಣೇಶನ ‘ಪಟಾಕಿ’   

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಸಾಯಿಕುಮಾರ್‌ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಪಟಾಕಿ’ ಸಿನಿಮಾ ಇದೇ 26ರಂದು ತೆರೆಕಾಣಲಿದೆ.

ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬ ತಾನು ಜನರಿಗೆ ಒಳಿತನ್ನೇ ಮಾಡುವ ನಿಲುವಿಗೆ ಬಂದರೆ ಆಗುವ ಬದಲಾವಣೆ ಚಿತ್ರದ ಕಥೆ.

ತೆಲುಗಿನಲ್ಲಿ ಯಶಸ್ಸು ಕಂಡ ‘ಪಟಾಸ್’ ಚಿತ್ರದ ರೀಮೇಕ್ ‘ಪಟಾಕಿ’ ಇದೇ ಶುಕ್ರವಾರ ಬಿಡುಗಡೆಯಾಗಲಿದ್ದು, ಚಿತ್ರದ ಟ್ರೇಲರ್‌ಗಳು ಈಗಾಗಲೇ ಸದ್ದು ಮಾಡಿವೆ.

ADVERTISEMENT

ಮಂಜು ಸ್ವರಾಜ್‌ ನಿರ್ದೇಶನದ ಪಟಾಕಿ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ರನ್ಯಾ ರಾವ್‌, ಸಾಧು ಕೋಕಿಲ ಮುಂತಾದವರ ಅಭಿನಯವಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.