ADVERTISEMENT

ಸಮಾಜಮುಖಿ ವಸ್ತುವೇ ‘ಲವ್‌ ಸೋನಿಯಾ’ ತಿರುಳು

ರೋಹಿಣಿ ಮುಂಡಾಜೆ
Published 23 ಆಗಸ್ಟ್ 2018, 19:30 IST
Last Updated 23 ಆಗಸ್ಟ್ 2018, 19:30 IST
‘ಲವ್‌ ಸೋನಿಯಾ’ ಟ್ರೇಲರ್‌
‘ಲವ್‌ ಸೋನಿಯಾ’ ಟ್ರೇಲರ್‌   

ಬಡತನ, ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ ಮತ್ತು ಮುಂಬೈನ ಕೆಂಪುದೀಪ ಪ್ರದೇಶದ ಹತ್ತಾರು ಮುಖಗಳನ್ನು ಅನಾವರಣಗೊಳಿಸುವ ಚಿತ್ರ‘ಲವ್‌ ಸೋನಿಯಾ’. ಗುರುವಾರ ಬಿಡುಗಡೆಯಾಗಿರುವ ಟ್ರೇಲರ್‌ ಈ ಸುಳಿವನ್ನು ಕೊಟ್ಟಿದೆ. ಜೊತೆಗೆ, ಇದೇ ತಿರುಳಿನ ಸಿನಿಮಾಗಳು ಈ ಹಿಂದೆಯೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರೂ ‘ಲವ್‌ ಸೋನಿಯಾ’ ತೀರಾ ವಿಭಿನ್ನ ಪ್ರಯೋಗಗಳಿಂದ ಗಮನ ಸೆಳೆಯಲಿದೆ ಎಂದೂ ಟ್ರೇಲರ್‌ ಸಾಬೀತು ಮಾಡಿದೆ.

ಬಡ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ತಂದೆ ತಾಯಿಯೇ ವೇಶ್ಯಾವಾಟಿಕೆ ದಂಧೆಯವರಿಗೆ ಮಾರಾಟ ಮಾಡುವುದು, ಸಹೋದರಿಯನ್ನು ಕಳಕೊಂಡು ಇನ್ನೊಬ್ಬಳು ಅನುಭವಿಸುವ ತೊಳಲಾಟ ಇಡೀ ಚಿತ್ರದ ಮುಖ್ಯ ಭೂಮಿಕೆ. ಅಕ್ಕ–ತಂಗಿ ಪಾತ್ರಗಳಲ್ಲಿ ಮೃಣಾಲ್‌ ಠಾಕೂರ್‌ ಮತ್ತು ರಿಯಾ ಸಿಸೋಡಿಯಾ ಚೆನ್ನಾಗಿಯೇ ನಟಿಸಿದ್ದಾರೆ.

ಅಕ್ಕನನ್ನು ಹುಡುಕುತ್ತಾ ಮುಂಬೈಗೆ ಬರುವ ತಂಗಿಗೆ ಕೆಂಪುದೀಪ ಪ್ರದೇಶ ಮತ್ತು ಎಲ್ಲಿ ಹೋದರೂ ವೇಶ್ಯಾವಾಟಿಕೆ ಜಾಲದ ನಾನಾ ಮುಖಗಳ ಪರಿಚಯವಾಗುತ್ತದೆ. ರಾಜ್‌ಕುಮಾರ್‌ ರಾವ್‌, ಮನೋಜ್‌ ಬಾಜಪೇಯಿ, ರಿಚಾ ಚಡ್ಡಾ, ಫ್ರೀಡಾ ಪಿಂಟೊ, ಡೆಮಿ ಮೂರೆ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಟ್ರೇಲರ್‌ ಸಿನಿಪ್ರಿಯರ ತುಂಬು ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.