ADVERTISEMENT

ತ್ರಿವರ್ಣದಲ್ಲಿ ತಿಂಡಿ ತಿನಿಸು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2014, 19:30 IST
Last Updated 14 ಆಗಸ್ಟ್ 2014, 19:30 IST

ಇಂದು 68ನೇ ಸ್ವಾಂತಂತ್ರ್ಯೋತ್ಸವದ ಸಂಭ್ರಮ. ತಮ್ಮೊಳಗಿನ ದೇಶಪ್ರೇಮವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿವ್ಯಕ್ತಿಪಡಿಸುತ್ತಾರೆ. ಗ್ರಾಹಕರಲ್ಲಿ ದೇಶ ಪ್ರೇಮದ ಬಗ್ಗೆ ಒಲವು ಮೂಡಿಸುವ ಸಲುವಾಗಿ ಶ್ರೀನಿಧಿ ರಿಯಲ್‌ ಫುಡ್ಸ್‌ ಹೋಟೆಲ್‌ ಇಂದು ತ್ರಿವರ್ಣದಲ್ಲಿ ತಯಾರಾದ ತಿಂಡಿ ತಿನಿಸುಗಳನ್ನು ಸರಬರಾಜು ಮಾಡಲು ಸಜ್ಜಾಗಿದೆ.

ಯಾವುದೇ ಬಗೆಯ ರಾಸಾಯನಿಕ ವಸ್ತುಗಳನ್ನು ಬಳಸದೆ ಕೇವಲ ಕೇಸರಿ, ಬಿಳಿ, ಹಸಿರು ಬಣ್ಣ ಬಳಸಿ ತಿಂಡಿ ತಿನಿಸುಗಳನ್ನು ತಯಾರಿಸುವುದು ಈ ದಿನದ ವಿಶೇಷ. ‘ಕೇಸರಿ, ಬಿಳಿ ಮತ್ತು ಹಸಿರು ಬಣ್ಣದಲ್ಲಿ ತಯಾರಾದ ಕ್ಯಾರೇಟ್‌ ದೋಸೆ, ಉದ್ದಿನ ದೋಸೆ, ಪಾಲಕ್‌ ದೋಸೆಗಳಿಗೆ ತ್ರಿವರ್ಣ ಬಣ್ಣದ ಚಟ್ನಿಯು ಸಾಥ್‌ ನೀಡಲಿದೆ.

ಬ್ಯಾಡಗಿ ಮೆಣಸಿನಕಾಯಿ, ತೆಂಗಿನ ಕಾಯಿ, ಉಪ್ಪು, ಹುಳಿ, ಹುರಿಗಡಲೆಯಿಂದ ತಯಾರಿಸುವ ಚಟ್ನಿಗೂ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಅದೇ ರೀತಿ, ಗ್ರಾಹಕರು ಜ್ಯೂಸ್‌ನಲ್ಲೂ ತ್ರಿವರ್ಣದ ರಂಗು ಕಣ್ತುಂಬಿಕೊಳ್ಳಬಹುದು. ಪುದಿನಾ ಸೊಪ್ಪಿನಿಂದ ಮಾಡಿದ ಪುದಿನಾ ಜ್ಯೂಸ್‌, ಕ್ಯಾರೆಟ್‌ನಿಂದ ತಯಾರಿಸಿದ ಕ್ಯಾರೆಟ್‌ ಜ್ಯೂಸ್‌ ಮತ್ತು ಬನಾನ ಜ್ಯೂಸ್‌ ಗ್ರಾಹಕರಿಗೆ ಲಭ್ಯವಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕ ಬೇಳೂರು ರಾಘವೇಂದ್ರ ಶೆಟ್ಟಿ.

ಸ್ಥಳ: ಮಿಲ್ಲರ್ಸ್‌ ಟ್ಯಾಂಕ್‌ ಬಂಡ್‌ ರೋಡ್‌, ಜೈನ್‌ ಆಸ್ಪತ್ರೆ ಹಿಂಭಾಗ,  ವಸಂತ ನಗರ. ಮಾಹಿತಿಗೆ: 93431 99997

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.