ADVERTISEMENT

ಸವಿ ರುಚಿಯ ಮೆಂತ್ಯ ಸೊಪ್ಪಿನ ಪರಾಠ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 14:34 IST
Last Updated 9 ಜೂನ್ 2017, 14:34 IST
ಸವಿ ರುಚಿಯ ಮೆಂತ್ಯ ಸೊಪ್ಪಿನ ಪರಾಠ
ಸವಿ ರುಚಿಯ ಮೆಂತ್ಯ ಸೊಪ್ಪಿನ ಪರಾಠ   

ಸಹಜವಾಗಿ ಪರಾಠ ಮಾಡುವುದು ಎಲ್ಲರಿಗೂ ತಿಳಿದೆ ಇದೇ. ಆದರೆ ಮೆಂತ್ಯ ಸೊಪ್ಪು ಬಳಸಿ ಪರಾಠ ಮಾಡುವುದು ಹೇಗೆ ಎಂಬುದಕ್ಕೆ ಪ್ರಜಾವಾಣಿ ರೆಸಿಪಿ ನೋಡಿ ಕಲಿಯಿರಿ.
ಸಾಮಾಗ್ರಿಗಳು :
1. ಗೋಧಿ ಹಿಟ್ಟು –           1 ಕಪ್
2. ಮೆಂತ್ಯ ಸೊಪ್ಪು –        1 ಕಟ್ಟು
3. ಖಾರದ ಪುಡಿ –           1 ಸ್ಪೂನ್
4. ಅರಶಿನ ಪುಡಿ –          1/2 ಸ್ಪೂನ್
5. ಎಣ್ಣೆ –                      1 ಸ್ಪೂನ್
6. ಉಪ್ಪು –                    ರುಚಿಗೆ ತಕ್ಕಷ್ಟು
7. ನೀರು –                    1 ರಿಂದ 1 1/2 ಕಪ್
ಮಾಡುವ ವಿಧಾನ: ಒಂದು ಬೌಲ್ ನಲ್ಲಿ ಗೋಧಿ ಹಿಟ್ಟು ಹಾಕಿ. ಅದಕ್ಕೆ ಮೆಂತ್ಯದ ಎಲೆಗಳು, ಖಾರದ ಪುಡಿ, ಅರಶಿನ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ನೀರು ಹಾಕುತ್ತಾ ನಾದಿಕೊಳ್ಳಿ.

ಹಿಟ್ಟನ್ನು ಚೆನ್ನಾಗಿ ನಾದಿಕೊಂಡ ಮೇಲೆ, ಉಂಡೆಗಳನ್ನಾಗಿ ಮಾಡಿ. ಚಪಾತಿ ಮಣೆಯಲ್ಲಿ ಸ್ವಲ್ಪ ದಪ್ಪವಾಗಿ ಲಟ್ಟಿಸಿಕೊಳ್ಳಿ. ಇದನ್ನು ಕಾದ ಹೆಂಚಿನ ಮೇಲೆ ಹಾಕಿ. ಬೇಯಲು ಅನುಕೂಲವಾಗುವಂತೆ, ಒಂದು ಚಮಚ/ಫೆÇೀರ್ಕ್ ಸಹಾಯದಿಂದ ತೂತು ಮಾಡಿಕೊಳ್ಳಿ. ಆಮೇಲೆ ಎರಡೂ ಬದಿ ಎಣ್ಣೆ ಹಾಕಿ ಬೇಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT