ADVERTISEMENT

ಅಮೆಗೋ ಆ್ಯಪ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಅಮೆಗೋ ಆ್ಯಪ್ ಬಿಡುಗಡೆ
ಅಮೆಗೋ ಆ್ಯಪ್ ಬಿಡುಗಡೆ   

ಪ್ರಯಾಣದ ವೇಳೆ ಅನಾರೋಗ್ಯ, ಅಪಘಾತ ಸೇರಿದಂತೆ ಯಾವುದೇ ರೀತಿಯ ತೊಂದರೆ ಉಂಟಾದರೆ, ತಕ್ಷಣವೇ ನೆರವಿಗೆ ಧಾವಿಸುವ ‘ಅಮೆಗೋ’ ಮೊಬೈಲ್ ಆ್ಯಪ್ ಬಿಡುಗಡೆಯಾಗಿದೆ.

ಆ್ಯಪ್ ಅನ್ನು ಮೆಡೌಸ್ ನಾಲೆಜ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ ಅಭಿವೃದ್ಧಿಪಡಿಸಿದೆ. ‘ಪ್ರಯಾಣದ ಸಮಯದಲ್ಲಿ ಅನಾರೋಗ್ಯ ಉಂಟಾದರೆ, ಅಪಘಾತವಾದರೆ ನಮಗೆ ಯಾರು ದಿಕ್ಕು ಎನ್ನುವ ಆತಂಕ ಇದ್ದೇ ಇರುತ್ತದೆ. ಈ ಆತಂಕ ನಿವಾರಿಸಲೆಂದೇ ನಮ್ಮ ಸಂಸ್ಥೆ ಅಮೆಗೋ ಆಪ್ ರೂಪಿಸಿದೆ’ ಎಂದು ಸಂಸ್ಥೆ  ವ್ಯವಸ್ಥಾಪಕ ನಿರ್ದೇಶಕ ಯತೀಂದ್ರ ಬನಪ್ಪ ತಿಳಿಸಿದ್ದಾರೆ.

‘ಸದಸ್ಯತ್ವ ಪಡೆಯುವವರು ಪ್ರಯಾಣದ ವೇಳೆ ವೈದ್ಯಕೀಯ ಸಮಸ್ಯೆ ಎದುರಿಸಿದರೆ ಅಥವಾ ಅಪಘಾತಕ್ಕೀಡಾದರೆ,  ತಕ್ಷಣವೇ ನೆರವಿಗೆ ಧಾವಿಸಲು ಪ್ರತಿ ಜಿಲ್ಲೆಯಲ್ಲೂ ತರಬೇತಿ ಪಡೆದ ವೃತ್ತಿನಿರತರ ತಂಡವನ್ನು ಹೊಂದಿದೆ’ ಎಂದು ಸಂಸ್ಥೆ ತಿಳಿಸಿದೆ.

ವಾರ್ಷಿಕ ಹತ್ತು ಸಾವಿರ ರೂಪಾಯಿ ಹಣ ಪಾವತಿಸಿ ಸದಸ್ಯರಾದರೆ ಒಂದು ವರ್ಷದವರೆಗೆ ಗರಿಷ್ಠ ₹5 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ವೆಚ್ಚವನ್ನು ಸಂಸ್ಥೆ ಭರಿಸಲಿದೆ. ಅಪಘಾತವಾದ ಸಂದರ್ಭದಲ್ಲಿ ಉತ್ತಮ ಆಸ್ಪತ್ರೆಗೆ ದಾಖಲಿಸುವುದು ಹಾಗೂ  ರೋಗಿಯ ಆರೈಕೆಯ ಸೇವೆಯನ್ನೂ ಈ ಸಂಸ್ಥೆ ಒದಗಿಸುತ್ತದೆ.

ಭಾರತದಾದ್ಯಂತ ಸಂಸ್ಥೆ ಚುಟುವಟಿಕೆಯಿಂದ ಇದ್ದು, ಸದಸ್ಯತ್ವ ಪಡೆದವರು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಆ್ಯಪ್‌ ಮೂಲಕ ಸಂದೇಶ ಕಳುಹಿಸಿದರೆ ಸಾಕು. ಇದಕ್ಕೆ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ನಿವಾಸದ ಸ್ಥಳವನ್ನು ಜಿಪಿಎಸ್‌ನಲ್ಲಿ ದಾಖಲಿಸಬೇಕು. ಇದರಿಂದ ಆ ವ್ಯಕ್ತಿ ಮನೆಯಿಂದ 99 ಕಿ.ಮೀ. ದೂರ ಕ್ರಮಿಸಿದ ಕೂಡಲೇ ಅವರು ಇರುವ ಸ್ಥಳದ ಸಂದೇಶವನ್ನು ಆ್ಯಪ್ ಸಂಸ್ಥೆಗೆ ಕಳುಹಿಸುತ್ತದೆ.

ಈ ಸಂದರ್ಭದಲ್ಲಿ ಯಾವುದೇ ಅಪಘಾತವಾದರೆ ಈ ಸಂಸ್ಥೆ ನೆರವಿಗೆ ಧಾವಿಸುತ್ತದೆ. ಬಂಧುಗಳಿಗೂ ಮಾಹಿತಿ ತಿಳಿಸಲಾಗುತ್ತದೆ. ವೈದ್ಯರಿಗೆ ರೋಗಿಯ ವೈದ್ಯಕೀಯ ಇತಿಹಾಸ ಈ ಆ್ಯಪ್ ಮೂಲಕ ಲಭ್ಯವಾಗುವ ಕಾರಣ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.