ADVERTISEMENT

ಒಳ್ಳೇ ಕಾರಣಕ್ಕೆ ಉಡುಗೆ ಮಾರಾಟ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:53 IST
Last Updated 11 ನವೆಂಬರ್ 2017, 5:53 IST
ಒಳ್ಳೇ ಕಾರಣಕ್ಕೆ ಉಡುಗೆ ಮಾರಾಟ
ಒಳ್ಳೇ ಕಾರಣಕ್ಕೆ ಉಡುಗೆ ಮಾರಾಟ   

ಸೆಲಬ್ರೆಟಿಗಳ ಉಡುಪು, ಫ್ಯಾಷನೆಬಲ್‌ ಆಭರಣ, ಶೂಗಳು ಎಂದಿಗೂ ಅಭಿಮಾನಿಗಳ ಆಕರ್ಷಣೆಯಾಗಿರುತ್ತದೆ. ಇಷ್ಟು ಚೆಂದದ ಉತ್ಪನ್ನಗಳು ಇವರಿಗೆಲ್ಲ ಹೇಗೆ ಸಿಗುತ್ತದೆ. ನಾವು ಎಷ್ಟು ಅಂಗಡಿ ತಡಕಾಡಿದರೂ, ಇಂಥ ಉತ್ಪನ್ನಗಳು ಸಿಗುವುದಿಲ್ವಲ್ಲಾ ಎಂದು ಪೇಚಾಡುವವರಿಗೆ ಈಗೊಂದು ಸುವರ್ಣ ಅವಕಾಶ ಲಭಿಸಿದೆ.

ಒಂದೇ ವೇದಿಕೆಯಲ್ಲಿ ಹಲವು ನಟಿಯರನ್ನು ಕಣ್ತುಂಬಿಕೊಳ್ಳುವ ಅವಕಾಶದ ಜೊತೆಗೆ ಅಭಿಮಾನಿಗಳಿಗೆ ಮನಮೋಹಕ ಆಭರಣ, ಉಡುಪುಗಳನ್ನು ಕೊಳ್ಳುವ ಅವಕಾಶವೂ ಸಿಗಲಿದೆ. ಈ ಮಾರಾಟದಿಂದ ಸಿಗುವ ಹಣವನ್ನು ಮಕ್ಕಳ ದಿನಾಚರಣೆಯ ಪ್ರಯುಕ್ತ ಜೆ.ಪಿ. ಮತ್ತು ಆದ್ಯ ಫೌಂಡೇಷನ್‌ಗೆ ನೀಡುವ ಉದ್ದೇಶ ಈ ನಟಿಯರದು. ಕಡಿಮೆ ಬೆಲೆಗೆ ಇದನ್ನು ಮಾರುತ್ತಿರುವುದು ವಿಶೇಷ.

ವಿದೇಶಗಳಲ್ಲಿ ಈಗಾಗಲೇ ಪ್ರಚುರತೆ ಗಳಿಸಿರುವ ಈ ರೀತಿಯ ಮಾರಾಟ ಪರಿಕಲ್ಪನೆಯನ್ನು ಇಲ್ಲಿಯೂ ನಡೆಸಲು ಉದ್ದೇಶಿಸಿದವರು ನಟಿ ಶೃತಿ ಹರಿಹರನ್‌.

ADVERTISEMENT

ನಟಿಯರಾದ ರಾಜಶ್ರೀ ಪೊನ್ನಪ್ಪ, ಕಾವ್ಯಶೆಟ್ಟಿ, ಶ್ರದ್ಧಾ ಶ್ರೀನಾಥ್‌, ಸಂಯುಕ್ತ ಹೊರನಾಡು, ಸಂಯುಕ್ತ ಹೆಗಡೆ, ಮೆಘನಾ ರಾಜ್‌, ಮಾನ್ವಿತಾ ಹರೀಶ್‌, ಮೇಘನಾ ಗಾಂವ್ಕರ್‌, ಹಿತಾ ಚಂದ್ರಶೇಖರ್‌, ಶಾನ್ವಿ ಶ್ರೀವಾತ್ಸವ, ಸಂಗೀತಾ ಭಟ್‌, ಪ್ರಜ್ಞಾ, ನೀತು ಶೆಟ್ಟಿ ಈ ಕೆಲಸಕ್ಕೆ ಸಾಥ್‌ ನೀಡಿದ್ದಾರೆ.

ಪ್ರತಿಕ್ರಿಯೆಯ ಬಗ್ಗೆ ಕುತೂಹಲ

ಹಿರೋಯಿನ್‌ಗಳ ಬಳಿ ಸಾಕಷ್ಟು ಉಡುಪುಗಳಿರುತ್ತವೆ. ಸಿನಿಮಾ, ಪ್ರಮೋಷನ್‌, ಕಾರ್ಯಕ್ರಮಗಳಿಗೆ ಅಂಥೆಲ್ಲ ನೂರಾರು ಬಟ್ಟೆಗಳನ್ನು ಕೊಂಡುಕೊಳ್ಳುತ್ತಾರೆ. ಕೆಲವೊಂದನ್ನು ಒಮ್ಮೆ ಬಳಸಿದ್ದರೆ, ಇನ್ನು ಕೆಲವನ್ನು ತೆಗೆದು ನೋಡಿರುವುದಿಲ್ಲ. ಅಂಥದೆಲ್ಲವನ್ನು ಮಾರಿ, ಅದರಿಂದ ಬಂದ ಹಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬಹುದು ಎಂದು ಶೃತಿ ಹರಿಹರನ್‌  ಹೇಳಿದರು. ಈ ಕುರಿತು ನಟಿಯರನ್ನು ಸಂಪರ್ಕಿಸಿದಾಗ ಅವರಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂತು.

ಕೆಲವರು ಬಾಂಬೆಯಲ್ಲಿದ್ದಾರೆ, ಅಂಥವರೂ ಉಡುಪನ್ನು ಕಳುಹಿಸಿದ್ದಾರೆ. ಟ್ರಂಕ್‌ ಸೇಲ್‌ ವಿದೇಶ್‌ ಪರಿಕಲ್ಪನೆ. ಮನೆ ಸಾಮಾನುಗಳನ್ನು ಅವರ ಮನೆಯ ಹಿತ್ತಲಿನಲ್ಲಿಯೇ ಈ ರೀತಿ ಮಾರುತ್ತಾರೆ. ನಮ್ಮಲ್ಲಿ ಹೀಗೆ ಯಾರು ಮಾಡಿಲ್ಲ ಅನಿಸುತ್ತದೆ. ‘ಯಾರದ್ದೋ ಇನ್ನೊಬ್ಬರದು ನಾವು ಬಳಸಬಹುದಾ’ ಎಂಬ ಮನಸ್ಥಿತಿಯಿರುವವರೇ ಹೆಚ್ಚಿದ್ದಾರೆ. ಹಾಗಾಗಿ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಭಯ ಇದೆ.

–ಸಚಿನಾ ಹೆಗ್ಗಾರ್‌, ವಸ್ತ್ರವಿನ್ಯಾಸಕಿ

**

ಎಲ್ಲರೂ ಒಂದಾಗುವ ಖುಷಿ

ನಾವು ಸಿನಿಮಾದಲ್ಲಿ ಒಂದು ಬಾರಿ ಹಾಕಿರುವ ಮತ್ತು ನಮ್ಮ ವಾರ್ಡ್‌ರೊಬ್‌ನಲ್ಲಿರುವ ಉಡುಪನ್ನು ಇಲ್ಲಿ ಮಾರಾಟ ಮಾಡುತ್ತೇವೆ. ಇದು ನನ್ನ ಆಲೋಚನೆ ಅಲ್ಲ. ಶೃತಿ ಈ ರೀತಿಯ ಕೆಲಸ ಮಾಡುವ ಎಂದುಕೊಂಡಿದ್ದೇವೆ, ನೀವು ಕೈಜೋಡಿಸುತ್ತೀರಾ ಎಂದು ಕೇಳಿದರು. ಎಲ್ಲ ಹಿರೋಯಿನ್‌ಗಳು ಒಟ್ಟಿಗೆ ಮಾಡುತ್ತಿರುವ ಜೊತೆಗೆ, ಇದೊಂದು ಒಳ್ಳೆಯ ಉದ್ದೇಶ ಎಂದುಕೊಂಡು ಒಪ್ಪಿಕೊಂಡೆ. ಜೊತೆಗೆ ಬೇರೆಯವರಿಗೆ ಈ ರೀತಿಯ ಕೆಲಸ ಮಾಡಲು ನಾವು ಪ್ರೇರಣೆಯಾಗಬಹುದು.

–ನೀತು ಶೆಟ್ಟಿ ನಟಿ

**
ರೆಸಿಡೆನ್ಸಿ ರಸ್ತೆಯ ಬಿಹೈವ್‌ನಲ್ಲಿ ವ್ಯಾನಿಟಿ ಟ್ರಂಕ್‌ ಸೇಲ್‌ ನಡೆಯಲಿದೆ. ನೋದಂಣಿಗೆ: http://insider.in/the-vanity-trunk-sale-nov12-2017/event

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.