ADVERTISEMENT

ಕಬಡ್ಡಿ ಪ್ರೇಮಿ ಅಕ್ಷಯ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 19:30 IST
Last Updated 30 ಜುಲೈ 2014, 19:30 IST

ಲಂಡನ್‌ನ ಓ2 ಅರೆನಾದಲ್ಲಿ ಆಗಸ್ಟ್‌ 9ರಿಂದ ಪ್ರಾರಂಭವಾಗಲಿರುವ ವಿಶ್ವ ಕಬಡ್ಡಿ ಲೀಗ್‌ನ (ಡಬ್ಲ್ಯುಕೆಎಲ್‌) ಉದ್ಘಾಟನಾ ಸಮಾರಂಭದಲ್ಲಿ ನಟ ಅಕ್ಷಯ್‌ಕುಮಾರ್‌  ಕಾರ್ಯಕ್ರಮ ನೀಡಲಿದ್ದಾರೆ.

ಖಾಲ್ಸಾ ವಾರಿಯರ್‌ ಕಬಡ್ಡಿ ತಂಡದ ಮಾಲೀಕರೂ ಆಗಿರುವ ಅಕ್ಷಯ್‌, ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಚಿತ್ರಗಳ ಹಾಡುಗಳಿಗೆ ಕುಣಿದು ನೆರೆಯಲಿರುವ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ‘ಕಬಡ್ಡಿ ವಿಶ್ವ ಲೀಗ್‌ ಪಂದ್ಯಗಳ ಕುರಿತು ನಾನು ಉತ್ಸುಕನಾಗಿದ್ದೇನೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಕಬಡ್ಡಿ ಅಭಿಮಾನಿಗಳನ್ನು ನಾನು ತುಂಬು ಹೃದಯದಿಂದ ರಂಜಿಸಲಿದ್ದೇನೆ’ ಎಂದು ಕ್ರೀಡಾಪ್ರೇಮಿಯೂ ಆಗಿರುವ ಅಕ್ಷಯ್‌ ಹೇಳಿದ್ದಾರೆ.

ಡಬ್ಲ್ಯುಕೆಎಲ್‌ನ ಕಮಿಷನರ್‌ ಪರ್ಗತ್‌ ಸಿಂಗ್‌ ಅಕ್ಷಯ್‌ ಕುಮಾರ್‌ ಕಾರ್ಯಕ್ರಮ ನೀಡಲು ಮುಂದಾಗಿರುವುದನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.