ADVERTISEMENT

ಕಾಜೋಲ್ ಸೌಂದರ್ಯ ಮೀಮಾಂಸೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2016, 19:30 IST
Last Updated 22 ನವೆಂಬರ್ 2016, 19:30 IST
ಕಾಜೋಲ್ ಸೌಂದರ್ಯ ಮೀಮಾಂಸೆ
ಕಾಜೋಲ್ ಸೌಂದರ್ಯ ಮೀಮಾಂಸೆ   

ಕೃಷ್ಣ ಸುಂದರಿ ಕಾಜೋಲ್‌ಗೆ ಇತ್ತೀಚೆಗೆ ತಾನು ಸುಂದರಿ ಅನ್ನುವ ಅಂಶ  ಚೆನ್ನಾಗಿ ಮನವರಿಕೆ ಆಗಿದೆಯಂತೆ. ಹೌದು, ಈ ಬಗ್ಗೆ ಖುದ್ದು ಕಾಜೋಲ್ ಮನಬಿಚ್ಚಿ ಮಾತನಾಡಿದ್ದಾರೆ. ‘ಇಷ್ಟು ವರ್ಷಗಳಲ್ಲಿ ಎಷ್ಟೊಂದು ಬದಲಾವಣೆಯಾಗಿದೆ. ನಾನೂ ಸುಂದರಿ ಎನ್ನುವ ಅಂಶ ಈಚೆಗೆ ನನಗೆ ಮನವರಿಕೆ ಆಗುತ್ತಿದೆ. ಇದನ್ನು ಅರಿತುಕೊಳ್ಳಲು ನನಗೆ ಎಷ್ಟೊಂದು ಕಾಲ ಬೇಕಾಯಿತಲ್ಲಾ ಎನ್ನುವ ಬಗ್ಗೆ ನನಗೆ ಅಚ್ಚರಿ ಆಗುತ್ತಿದೆ’ ಎಂದು ಕಾಜೋಲ್‌ ಹೇಳಿಕೊಂಡಿದ್ದಾರೆ.

‘ನನ್ನ ಬಗ್ಗೆ ನನಗಿರುವ ನಂಬಿಕೆಗಳು ಈಗ ಬದಲಾಗಿವೆ. ಇಂದು ನನ್ನ ಬಗ್ಗೆ ನಾನು ಯೋಚಿಸಿದಾಗ ನಾನು ಉತ್ತಮ ವ್ಯಕ್ತಿಯಾಗಿದ್ದೇನೆ. ಪ್ರಬುದ್ಧಳಾಗಿದ್ದೇನೆ ಮತ್ತು ಆತ್ಮವಿಶ್ವಾಸದಿಂದ್ದೇನೆ’ ಎನಿಸುತ್ತದೆ ಎಂದು ತಮ್ಮ ವ್ಯಕ್ತಿತ್ವದಲ್ಲಾದ ಬದಲಾವಣೆಯನ್ನು ಕಾಜೋಲ್ ಗುರುತಿಸಿದ್ದಾರೆ.

ತಾವು ಸುಂದರಿ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಕಾಜೋಲ್ ಈ ಬಗ್ಗೆ ಸೌಂದರ್ಯ ಮೀಮಾಂಸೆಯನ್ನೇ ಬಿಚ್ಚಿಟ್ಟಿದ್ದಾರೆ. ತ್ವಚೆಯ ಆರೋಗ್ಯಕ್ಕಾಗಿ ಜಾಸ್ತಿ ನೀರು ಕುಡಿಯಬೇಕು, ದಿನಕ್ಕೆ ಮೂರು ಬಾರಿ ಮುಖ ತೊಳೆಯಬೇಕು ಎಂದು ಬ್ಯೂಟಿ ಟಿಪ್ಸ್‌ ನೀಡಿರುವ ಕಾಜೋಲ್, ವಂಶವಾಹಿಗಳ ಮೂಲಕ ಹರಿದುಬರುವ ಸೌಂದರ್ಯವೂ ಮುಖ್ಯ ಎಂದಿದ್ದಾರೆ.

ಸಿನಿರಂಗದಲ್ಲಿ ಉತ್ತುಂಗದ ಸ್ಥಿತಿಯಲ್ಲಿದ್ದಾಗಲೇ ನಟ ಅಜಯ್ ದೇವಗನ್ ಅವರನ್ನು ಮದುವೆಯಾದರು. ಆಗ ಕಾಜೋಲ್‌ಗಿನ್ನೂ 25ರ ಹರೆಯ. ಮದುವೆ, ಮಕ್ಕಳು, ಮಧ್ಯೆಮಧ್ಯೆ ಸಿನಿಮಾ ಜೀವನ ನಡುವೆ ಕಾಜೋಲ್‌ 42ರ ಹರೆಯಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಗಿರಲಿ, ಸ್ವತಃ ಕಾಜೋಲ್‌ಗೆ ಅಚ್ಚರಿ.

ನಾನು ಅಂದವಾಗಿ ಅಲಂಕರಿಸಿಕೊಂಡಾಗ, ಪತಿ ಅಜಯ್  ನನ್ನನ್ನು ನೋಡಿ ‘ಚೆನ್ನಾಗಿ ಕಾಣುತ್ತಿ’ ಎಂದು ಕಮೆಂಟ್ ಮಾಡುತ್ತಾರೆ. ನನಗೆ ಅದಕ್ಕಿಂತ ಬೇರೆ ಇನ್ನೇನು ಬೇಕು’ ಎಂದು ನಕ್ಕು ಮಾತು ಮುಗಿಸುತ್ತಾರೆ ಕಾಜೋಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.