ADVERTISEMENT

ಕಿರುತೆರೆ ಮೇಲೆ ರಿಯಾ ಕಣ್ಣು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2014, 19:30 IST
Last Updated 28 ಸೆಪ್ಟೆಂಬರ್ 2014, 19:30 IST
ಸೋನಮ್‌ ಕಪೂರ್‌, ರಿಯಾ ಕಪೂರ್‌
ಸೋನಮ್‌ ಕಪೂರ್‌, ರಿಯಾ ಕಪೂರ್‌   

ಬಾಲಿವುಡ್‌ನಲ್ಲಿ ‘ಆಯಿಷಾ’ ಸಿನಿಮಾ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಬಿ–ಟೌನ್‌ಗೆ ಎಂಟ್ರಿ ಪಡೆದ ನಟ ಅನಿಲ್‌ ಕಪೂರ್‌ ಅವರ ಪುತ್ರಿ ರಿಯಾ ಕಪೂರ್‌ ಈಗ ಕಿರುತೆರೆಯಲ್ಲೂ ಹಣ ಹೂಡಲು ಕಾತುರರಾಗಿದ್ದಾರೆ.

‘ನಾವು ನಮ್ಮ ಸಂಸ್ಥೆಯನ್ನು ವಿಸ್ತರಿಸುತ್ತಿದ್ದೇವೆ. ಅದಕ್ಕಾಗಿ ಕಿರುತೆರೆಗೂ ಪದಾರ್ಪಣೆ ಮಾಡುವ ಆಲೋಚನೆ ಇದೆ. ಆದರೆ ಕಿರುತೆರೆಗೆ ಎಂಟ್ರಿ ನೀಡಲು ಸಾಕಷ್ಟು ಸಮಯ ಹಾಗೂ ಶಕ್ತಿ ಬೇಕು’ ಎಂದು ಐಎಎನ್ಎಸ್‌ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಯುಎಸ್‌ ಥ್ರಿಲ್ಲರ್‌ ‘24’ ಕಿರುತೆರೆ ಧಾರಾವಾಹಿಯನ್ನು ಹಿಂದಿಯಲ್ಲಿ ನನ್ನ ತಂದೆ ಅನಿಲ್ ಕಪೂರ್‌ ಅವರೇ ನಿರ್ಮಾಣ ಮಾಡಿ, ಅದರಲ್ಲಿ ಅಭಿನಯಿಸಿದ್ದರು. ‘24’ ಧಾರಾವಾಹಿ ನಿರ್ಮಾಣ ಮಾಡಲು ತುಂಬಾ ಸಮಯ ಬೇಕಾಗಿತ್ತು. ಅಲ್ಲದೆ ನಾವು ಕಿರುತೆರೆಯಲ್ಲಿ ಯಾವುದೇ ಕೆಲಸ ಪ್ರಾರಂಭಿಸಿದರೂ ಅದಕ್ಕೆ ಹೆಚ್ಚಿನ ಸಮಯ ನೀಡಬೇಕು. ಅದಕ್ಕಾಗಿ ಖಂಡಿತವಾಗಿಯೂ ಸ್ವಲ್ಪ ತಾಳ್ಮೆಯಿಂದ ಕಿರುತೆರೆಗೆ ಎಂಟ್ರಿ ಕೊಡುತ್ತೇನೆ’ ಎಂದಿದ್ದಾರೆ ರಿಯಾ.

‘ನಾನು ಮತ್ತು ಸೋನಂ ತುಂಬಾ ಆಪ್ತರು. ಅವರು ಸಾಕಷ್ಟು ರಿಸ್ಕ್‌ ತೆಗೆದುಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರು ಮಾಡುವ ಸಾಕಷ್ಟು ಕೆಲಸಗಳು ನನಗೆ ಇಷ್ಟವಾಗುತ್ತೆ. ಹಾಗೆಯೇ ಕೆಲವು ನನ್ನನ್ನು ಪ್ರೇರೇಪಿಸುವುದಿಲ್ಲ’ ಎಂದಿದ್ದಾರೆ ಅವರು.  

‘ಖೂಬ್‌ಸೂರತ್’ ಸಿನಿಮಾಕ್ಕೆ ಒಳ್ಳೆಯ ಪ್ರಿತಿಕ್ರಿಯೆ ಸಿಕ್ಕಿದೆ. ಈ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಈಗ ಸಿಕ್ಕಿರುವ ಪ್ರತಿಕ್ರಿಯೆಯಿಂದ ನನಗೆ ತುಂಬಾ ಖುಷಿಯಾಗಿದೆ. ಇದರಿಂದ ಹೆಣ್ಣು ಮಕ್ಕಳೂ ಸಿನಿಮಾಗಳನ್ನು ನಿರ್ಮಾಣ ಮಾಡಬಹುದು ಎಂದು ಮತ್ತೆ ನಂಬಿಕೆ ಬಂದಿದೆ ಎನ್ನುವುದು ರಿಯಾ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.