ADVERTISEMENT

ಕುಡಿಯವ ನೀರಿನ ಬವಣೆ ನಿವಾರಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಸೆಪ್ಟೆಂಬರ್ 2014, 7:24 IST
Last Updated 28 ಸೆಪ್ಟೆಂಬರ್ 2014, 7:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೆಣ್ಣೂರು-ಬಾಗಲೂರು ರಸ್ತೆಯಲ್ಲಿರುವ ಭೈರತಿ ಬಡಾವಣೆಯ (ಎಬಿನೇಜರ್ ಆಸ್ಪತ್ರೆ ಪಕ್ಕ) ನಿವಾಸಿಗಳು ಕಳೆದ ೫-೬ ವರ್ಷಗಳಿಂದಲೂ ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ.

ಈ ಬಡಾವಣೆಯು ಬಿ.ಬಿ.ಎಂ.ಪಿ. ವಾರ್ಡ್ ನಂ.೫೪, ಮಹದೇವಪುರ ವಲಯದ ವ್ಯಾಪ್ತಿಗೆ ಬರುತ್ತದೆ. ಹಿಂದಿನ ಗ್ರಾಮ ಪಂಚಾಯಿತಿಯು ಬೋರ್‌ವೆಲ್‌ಗಳ ಮೂಲಕ ಸ್ವಲ್ಪ ಮಟ್ಟಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿತ್ತು. ಆದರೆ, ಬಡಾವಣೆಯು ೨೦೦೮ರಲ್ಲಿ ೧೧೦ ಹಳ್ಳಿಗಳ ಸೇರ್ಪಡೆಯೊಂದಿಗೆ ಬಿ.ಬಿ.ಎಂ.ಪಿ. ಪರಿಧಿಗೆ ಬಂದಾಗಿನಿಂದ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ನಿವಾಸಿಗಳು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಬೋರ್‌ವೆಲ್ ಕೊರೆಯಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿಲ್ಲ. ಈ ಬಡಾವಣೆಗೆ ಕಾವೇರಿ ನೀರಿನ ಸಂಪರ್ಕವಿಲ್ಲ.

ಬಡಾವಣೆಯ ನಿವಾಸಿಗಳು ನಿತ್ಯ ಖಾಸಗಿ ಟ್ಯಾಂಕರ್‌ಗಳಿಗೆ ದುಬಾರಿ ಹಣ ತೆತ್ತು ನೀರನ್ನು ಕೊಂಡುಕೊಳ್ಳುತ್ತಿದ್ದು,  ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಇನ್ನಾದರೂ ಈ ಭಾಗದ ಜನರಿಗೆ ಕುಡಿವ ನೀರಿನ ಶಾಶ್ವತ ಪರಿಹಾರ ದೊರಕಿಸಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.