ADVERTISEMENT

ಚಂದ ಕಾಣ್ಬೇಕಾ? ಕಬ್ಬಿನ ಹಾಲು ಬಳಸಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಚಂದ ಕಾಣ್ಬೇಕಾ? ಕಬ್ಬಿನ ಹಾಲು ಬಳಸಿ
ಚಂದ ಕಾಣ್ಬೇಕಾ? ಕಬ್ಬಿನ ಹಾಲು ಬಳಸಿ   

ಕಬ್ಬಿನ ಹಾಲು ಚರ್ಮ ಸೌಂದರ್ಯದ ಜೊತೆ ದಂತ ಸೌಂದರ್ಯಕ್ಕೂ ಉತ್ತಮ ಮದ್ದು. ಹಲ್ಲಿನ ಮೇಲೆ ಕಪ್ಪು ಕಲೆಯಾದರೆ ಕಬ್ಬನ್ನು ಜಗಿದು ತಿನ್ನುವುದರಿಂದ ಕಲೆ ಹೋಗುತ್ತದೆ. ಸಣ್ಣ ಮಕ್ಕಳಿಗೆ ಕಬ್ಬಿನ ತುಂಡುಗಳನ್ನು ನೀಡಿ ಜಗಿದು ತಿನ್ನುವಂತೆ ಮಾಡಿ. ಇದು ಮಕ್ಕಳ ಹಲ್ಲನ್ನು ಗಟ್ಟಿ ಮಾಡುತ್ತದೆ. ಕಬ್ಬು ತಿನ್ನುವುದರಿಂದ ಹಲ್ಲಿನೊಂದಿಗೆ ವಸಡಿನ ಆರೋಗ್ಯಕ್ಕೂ ಒಳ್ಳೆಯದು.

ಸುಸ್ತು, ಬಾಯಾರಿಕೆಯಾದಾಗ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ಅದೆಂಥ ಸಮಾಧಾನ. ದೇಹದ ಆರೋಗ್ಯಕ್ಕೆ ಕಬ್ಬಿನ ಹಾಲು ಒಳ್ಳೆಯದು. ಹಾಗೇ ಚರ್ಮದ ಸೌಂದರ್ಯಕ್ಕೂ ಕಬ್ಬಿನ ಹಾಲಿನಿಂದ ಪ್ರಯೋಜನಗಳಿವೆ.

* ಕಬ್ಬಿನ ಹಾಲಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಚರ್ಮಕ್ಕೆ  ಒಳ್ಳೆಯದು.
* ಒಣ ಚರ್ಮದವರು ವಾರದಲ್ಲಿ ಎರಡು ಬಾರಿ ಕಬ್ಬಿನ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ತೇವಾಂಶದಿಂದ ಕೂಡಿರುತ್ತದೆ.
* ಒಣ ಚರ್ಮದ ಜೊತೆ ಮೊಡವೆ, ಕಲೆ ಸಮಸ್ಯೆ ಇದ್ದರೆ, ಕಬ್ಬಿನ ಹಾಲಿನೊಂದಿಗೆ ನಿಂಬೆ ರಸ, ಪುದೀನ ಹಾಕಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಸ್ಕ್ರಬ್‌ ಮಾಡಬೇಕು. ನಿಂಬೆ ಹಣ್ಣಿನ ರಸದಿಂದ ಕಲೆ ನಿವಾರಣೆಯಾದರೆ ಪುದೀನ ಬಳಕೆಯಿಂದ ಮೊಡವೆ ಕಡಿಮೆಯಾಗುತ್ತದೆ. ವಾರಕ್ಕೆ ಮೂರು ಸಲ ಈ ಪೇಸ್ಟ್‌ ಬಳಸಬೇಕು.
* ಚರ್ಮ ಕಳೆಗುಂದಿದ್ದರೆ ಕಬ್ಬಿನ ಹಾಲಿನೊಂದಿಗೆ ಒಂದು ಚಮಚ ಜೇನು ಮಿಶ್ರಣ ಮಾಡಿ ದಿನರಾತ್ರಿ ಅರ್ಧ ಗಂಟೆ ಹಚ್ಚಿ ತೊಳೆಯಬೇಕು.
* ಬಿಸಿಲಿನಿಂದ ಚರ್ಮ ಕಪ್ಪಾಗಿದ್ದರೆ ಪರಂಗಿಹಣ್ಣಿನೊಂದಿಗೆ ಕಬ್ಬಿನ ಹಾಲು ಸೇರಿಸಿ ಪ್ಯಾಕ್‌ನಂತೆ ಬಳಸಬಹುದು.      
* ಆಲೂಗೆಡ್ಡೆಯನ್ನು ತುರಿದು ರಸ ತೆಗೆದು ಕಬ್ಬಿನ ಹಾಲಿನೊಂದಿಗೆ ಬೆರಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖ ಕಾಂತಿಯುತವಾಗುತ್ತದೆ.
* ಚರ್ಮ ಸುಕ್ಕಾಗುವುದನ್ನು ಕಬ್ಬಿನ ಹಾಲು ತಡೆಯುತ್ತದೆ. ಹಾಲಿನಲ್ಲಿ ಇರುವ ಸಕ್ಕರೆ ಅಂಶ ತ್ವಚೆಯ ಜೀವಕೋಶಗಳನ್ನು ಪುನರ್ಜೀವಗೊಳಿಸುತ್ತವೆ.
* ಕಿತ್ತಳೆ ಹಣ್ಣಿನ ರಸದೊಂದಿಗೆ ಕಬ್ಬಿನ ಹಾಲು ಮಿಶ್ರಣ ಮಾಡಿ ಬಳಸುವುದರಿಂದ ಡೆಡ್‌ಸ್ಕಿನ್‌ ನಿವಾರಣೆಯಾಗುತ್ತದೆ.
* ಎಣ್ಣೆ ಚರ್ಮದವರು ಮುಲ್ತಾನಿ ಮಿಟ್ಟಿಯೊಂದಿಗೆ ಕಬ್ಬಿನ ಹಾಲು ಬೆರಸಿ ಪ್ಯಾಕ್‌ ಹಾಕಿಕೊಳ್ಳಬಹುದು.  ಮುಲ್ತಾನಿ ಮಿಟ್ಟಿ ಚರ್ಮದಲ್ಲಿನ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ ಕಬ್ಬಿನ ಹಾಲು ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.