ADVERTISEMENT

ನಗರದ ಚಹರೆ

ಪ್ರಜಾವಾಣಿ ಚಿತ್ರ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ನಾನು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಒಂದು ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ಕೆಲವು ವರ್ಷಗಳಿಂದ ನನ್ನ ಕಚೇರಿಗೆ ತೆರಳುವ ದಾರಿಯಲ್ಲಿ ಕಾಣುವ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದೇನೆ. ಎಲೆಕ್ಟ್ರಾನಿಕ್‌ ಸಿಟಿ ಪ್ರವೇಶಿಸುತ್ತಿದ್ದಂತೆಯೇ ಸುತ್ತಲಿನ ದೃಶ್ಯ ನಿಧಾನವಾಗಿ ಬದಲಾಗುತ್ತವೆ. ಹಗಲು–ರಾತ್ರಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುತ್ತವೆ. ಪೂರ್ಣ ನಿರ್ಮಾಣಗೊಂಡು ಬಣ್ಣದ ಕನ್ನಡಕ ತೊಟ್ಟು ಒತ್ತೊತ್ತಾಗಿ ನಿಂತ ಕಟ್ಟಡಗಳ ಆವರಣದಲ್ಲಿ ವಿಲಕ್ಷಣ ಅನಿಸುವ ಹೂವಿನ ಗಿಡಗಳು ಪಾಗಾರದಿಂದ ಆಚೆಗೆ ಜಿಗಿಯಲು ತವಕಿಸುತ್ತಿರುವಂತೆ ಭಾಸವಾಗುತ್ತದೆ. ಇಲ್ಲಿ ಒಂದಷ್ಟು ದೂರ ನಡೆದರೆ ಮನುಷ್ಯರು ಕಾಣುವುದು ಕಡಿಮೆ. ಬದಲಾಗಿ ಜಾಹೀರಾತಿನ ಫಲಕಗಳು, ಬೃಹತ್‌ ಕಟ್ಟಡಗಳು, ಅವುಗಳನ್ನು ಸುತ್ತುವರಿದ ಕಲ್ಲು ಪಾಗಾರಗಳ ನಡುವಣ ಸಣ್ಣ ರಂಧ್ರಗಳು, ಆ ಕಿಂಡಿಯ ಒಳಗೆ ಇಣುಕಿದರೆ ಅಪರೂಪಕ್ಕೆ ಕಾಣುವ ಮನುಷ್ಯರೂ ಕೈಗಾರಿಕಾ ಪ್ರಪಂಚದ ಯಂತ್ರದ ತುಣುಕುಗಳಂತೇ ಕಾಣುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.