ADVERTISEMENT

ಪ್ರಿಯಾಂಕಾ ಸರದಿ

ಬಾಲಿವುಡ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಪ್ರಿಯಾಂಕಾ ಸರದಿ
ಪ್ರಿಯಾಂಕಾ ಸರದಿ   
ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ತನ್ನ ಹಾಲಿವುಡ್ ಸಿನಿಮಾ ‘ಟ್ರಿಪಲ್ ಎಕ್ಸ್‌; ರಿಟರ್ನ್‌ ಆಫ್‌ ಕ್ಸಾಂಡಿಯರ್‌ ಕೇಜ್‌’ ಪ್ರಚಾರಕ್ಕೆ ನಟ ವಿನ್ ಡೀಸೆಲ್‌ ಅವರನ್ನು ಭಾರತಕ್ಕೆ ಕರೆತಂದ ಬೆನ್ನಲ್ಲೆ ಈಗ ನಟಿ ಪ್ರಿಯಾಂಕಾ ಚೋಪ್ರಾ ಸಹ ತನ್ನ ಹಾಲಿವುಡ್‌ ಚಿತ್ರದ ಸಹನಟರನ್ನು ಭಾರತಕ್ಕೆ ಕರೆತರುವ ಉಮೇದು ವ್ಯಕ್ತಪಡಿಸಿದ್ದಾರೆ.
 
ಈಗಾಗಲೇ ಚಿತ್ರೀಕರಣ ಮುಗಿದಿರುವ ಪ್ರಿಯಾಂಕಾ ಅವರ ಹಾಲಿವುಡ್ ಚಿತ್ರ ‘ಬೇವಾಚ್‌’ನ ಪ್ರಚಾರ ಕಾರ್ಯ ಇನ್ನಷ್ಟೆ  ಪ್ರಾರಂಭವಾಗಲಿದೆ.
 
ಚಿತ್ರದಲ್ಲಿ ಪ್ರಿಯಾಂಕಾ ಅವರೊಂದಿಗೆ  ಪ್ರಖ್ಯಾತ ಹಾಲಿವುಡ್‌ ನಟ, ನಟಿಯರ ದಂಡೇ ಇದ್ದು ಅವರನ್ನು ಭಾರತಕ್ಕೆ ಕರೆತರುವ ಯೋಚನೆಯಲ್ಲಿದ್ದಾರೆ ಪಿಗ್ಗಿ.
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ‘ಈ ಬಗ್ಗೆ ಚಿತ್ರತಂಡದೊಂದಿಗೆ ಚರ್ಚಿಸಿದ್ದೇನೆ, ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದೇವೆ’ ಎಂದಿದ್ದಾರೆ.
 
‘ಬೇವಾಚ್’ ಚಿತ್ರದಲ್ಲಿ ಪ್ರಿಯಾಂಕಾ ಜೊತೆ  ಜ್ಯಾಕ್‌ ಎಪ್ರಾನ್‌, ಡ್ವಾಯೆನ್ ಜಾನ್ಸನ್‌, ಅಲೆಕ್ಸಾಂಡ್ರಾ ಡಾಡೆರಿಯಾ, ಕೆಲ್ಲಿ ರೋಬ್ರಾಚ್‌  ಅಭಿನಯಿಸಿದ್ದಾರೆ.
 
ಭಾರತದ ವಿವಿಧತೆಯ ಬಗ್ಗೆ ತಮ್ಮ ಸಹನಟರಿಗೆ ಸಾಕಷ್ಟು ಹೇಳಿದ್ದಾರಂತೆ ಪ್ರಿಯಾಂಕಾ, ಅವರು ‘ಭಾರತಕ್ಕೆ ಬಂದರೆ ದೇಶದ ಸಂಸ್ಕೃತಿಯ ಪರಿಚಯಮಾಡಿಸುತ್ತೇನೆ’ ಎಂದಿದ್ದಾರೆ.
 
ಅಂದಹಾಗೆ ‘ಬೇವಾಚ್‌’ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.