ADVERTISEMENT

ವಿಶೇಷ ಊಟ

ಪ್ರೇಮಿಗಳ ದಿನದ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2015, 19:30 IST
Last Updated 13 ಫೆಬ್ರುವರಿ 2015, 19:30 IST

ಹಿತವಾಗಿ ಕೇಳಿಬರುವ ರೊಮ್ಯಾಂಟಿಕ್‌ ಸಂಗೀತ, ಈಜುಕೊಳದಲ್ಲಿ ಕಾಣಿಸುವ ಚಂದ್ರನ ಪ್ರತಿಬಿಂಬ, ಸುತ್ತಲೂ ಮಬ್ಬುಗತ್ತಲು, ಊಟದ ಟೇಬಲ್‌ ಮೇಲೆ ಉರಿಯುತ್ತಿರುವ ದೊಡ್ಡ ಮೇಣದ ಬತ್ತಿ, ಅದರ ಪಕ್ಕದಲ್ಲಿ ತರಹೇವಾರಿ ಭಕ್ಷ್ಯ–ಭೋಜನಗಳು... ಇಂತಹ ವಾತಾವಣದಲ್ಲಿ ಪ್ರೇಮಿಗಳು ಎದುರುಬದಿರಾಗಿ ಕುಳಿತು ಊಟ ಸವಿಯುವ ಅವಕಾಶ ಕಲ್ಪಿಸಿದೆ ಕೀಸ್‌ ಹೋಟೆಲ್‌.

ಹೊಸೂರು ರಸ್ತೆಯಲ್ಲಿರುವ ಕೀಸ್‌ ಹೋಟೆಲ್‌ನಲ್ಲಿ ಕ್ಯಾಂಡಲ್‌ ಲೈಟ್‌ ಡಿನ್ನರ್‌ಗೆ ದೀಪೋತ್ಸವವೂ ಜೊತೆಯಾಗಲಿದೆ. ಹುರಿದ ಮತ್ತು ಸುಟ್ಟ ಖಾದ್ಯಗಳ ಸವಿಯನ್ನು ಲೈವ್‌ ಆಗಿ ಕೌಂಟರ್‌ನಲ್ಲಿ ಆಸ್ವಾದಿಸಬಹುದು. ಇದರ ಜೊತೆಗೆ ಲೈವ್‌ ಸಂಗೀತ ಮತ್ತು ಒಂದು ಗ್ಲಾಸ್‌ ವೈನ್‌ ಬೋನಸ್ಸಾಗಿ ಸಿಗಲಿದೆ. ಫೆ.14ರ ರಾತ್ರಿ 8ರಿಂದ 11ರವರೆಗೆ ಲಭ್ಯವಿರುವ ಈ ಊಟದ ಬೆಲೆ ₨2499 ಒಂದುಜೋಡಿಗೆ). ಟೇಬಲ್‌ ಕಾಯ್ದಿರಿಸಲು: +91 9686201585.

ವೈಟ್‌ಫೀಲ್ಡ್‌ನಲ್ಲಿರುವ ಕೀಸ್ ಹೋಟೆಲ್‌ನಲ್ಲಿ ಮಲ್ಟಿಕ್ವಿಸಿನ್‌ ಬಫೆ, ಲೈವ್‌ ಸ್ಟೇಷನ್ಸ್‌, ಹಾರ್ಟ್‌ ಮಾದರಿಯ ಚಾಕೊಲೇಟ್‌ ಕೇಕ್‌, ವೈನ್ಸ್‌ ಮತ್ತು ಸ್ನ್ಯಾಕ್ಸ್‌,ಕ್ಲಾಸಿಕ್‌ ಕಾಕ್‌ಟೇಲ್‌ ಮತ್ತು ಲೈವ್‌ ಸಂಗೀತ ಇರುತ್ತದೆ. ಫೆ.14ರ ಸಂಜೆ 7ರಿಂದ ರಾತ್ರಿ 11ರವರೆಗೆ ದೊರೆಯುವ ಈ ಊಟದ ಬೆಲೆ ₨2400 (ಒಂದು ಜೋಡಿಗೆ). ಟೇಬಲ್‌ ಕಾಯ್ದಿರಿಸಲು: +91 8884038484.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.