ADVERTISEMENT

ಸಾಂಸ್ಕೃತಿಕ ಸಾಮ್ಯತೆಯ ಥಾಯ್ಲೆಂಡ್

ಜಿ.ಎನ್.ಶಿವಕುಮಾರ
Published 26 ಸೆಪ್ಟೆಂಬರ್ 2016, 19:35 IST
Last Updated 26 ಸೆಪ್ಟೆಂಬರ್ 2016, 19:35 IST
ಸಾಂಸ್ಕೃತಿಕ ಸಾಮ್ಯತೆಯ ಥಾಯ್ಲೆಂಡ್
ಸಾಂಸ್ಕೃತಿಕ ಸಾಮ್ಯತೆಯ ಥಾಯ್ಲೆಂಡ್   

ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂ.ವೀರಪ್ಪ ಮೊಯ್ಲಿ ಅವರಿಗೆ ಥಾಯ್ಲೆಂಡ್‌ನ ‘ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ‘(ಎಐಟಿ)ಯಿಂದ ‘ಜಾಗತಿಕ ಪೌರ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. - ಇದು ಥಾಯ್ಲೆಂಡ್-ಬೆಂಗಳೂರಿಗೂ ಬಿಡದ ನಂಟು  ಇರುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಥಾಯ್ಲೆಂಡ್‌ನ ವಸ್ತ್ರವಿನ್ಯಾಸ, ಕಾಣಿಕೆ, ಅಲಂಕಾರಿಕ ವಸ್ತುಗಳು, ಆರೋಗ್ಯ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಿಗೆ ವಿಶ್ವದೆಲ್ಲೆಡೆ ಬೇಡಿಕೆ.

ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಬೌದ್ಧ ದೇವಾಲಯಗಳಿವೆ. ಫುಕೆಟ್‌ನ ಟಂಗ್ ಬೀಚ್ ಹಾಗೂ ವಿಶ್ವದ ಅತ್ಯಂತ ಸುಂದರ ಉಷ್ಣವಲಯದ ಫಿ.ಫಿ ದ್ವೀಪಸಮೂಹ ಇಲ್ಲಿನ ಇನ್ನೊಂದು ಪ್ರಸಿದ್ಧ ಪ್ರವಾಸಿ ತಾಣ. ಬಾಲಿವುಡ್‌ನ ನಟ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಇದೇ ಫುಕೆಟ್ ಬೀಚ್‌ನಲ್ಲಿ ಬಿಕಿನಿ ಧರಿಸಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದರು.

ಬ್ಯಾಂಕಾಕ್‌ನಿಂದ 145 ಕಿ.ಮೀ. ದೂರವಿರುವ ಹುವಾ ಹಿನ್ ರೆಸಾರ್ಟ್‌ ಸುತ್ತ ಹಲವು ಅಂತರರಾಷ್ಟ್ರೀಯ ದರ್ಜೆಯ ಹೋಟೆಲ್‌ಗಳಿವೆ. ಸಾಂಪ್ರದಾಯಿಕ ಥಾಯ್ ಅಡುಗೆ, ಥಾಯ್ ಬುಡಕಟ್ಟು ಸಂಸ್ಕೃತಿ, ಆನೆಗಳ ಸಮ್ಮೇಳನ, ಬಾಣ ಬಿರುಸುಗಳ ಹಬ್ಬ, ‘ಫೈ ಥ ಖಾನ್’ ಹಬ್ಬ ಗಮನ ಸೆಳೆಯುತ್ತವೆ. ಥಾಯ್ಲೆಂಡಿನ ರಾಣಿಯ ಹುಟ್ಟುಹಬ್ಬವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತ-ಥಾಯ್ಲೆಂಡ್ ಸಂಸ್ಕೃತಿಯಲ್ಲಿರುವ ಸಾಮ್ಯತೆಗೆ ಇದು ಉದಾಹರಣೆ ಮಾತ್ರ. ಇದೇ ದೇಶದಲ್ಲಿನ ಇನ್ನೊಂದು ಅಚ್ಚರಿಯ ಸಂಗತಿಯಾಗಿ ಕಾಣುವುದು ‘ಪಾಕ್ ಒ.ಕೆ’ ಎಂಬ ಪುಟ್ಟಗ್ರಾಮದ ‘ಬಾಡಿಗೆ ತಾಯ್ತನ ಉದ್ಯಮ’.

ಬೆಂಗಳೂರಿನಿಂದ ನೇರವಾಗಿ ಸಿಂಗಪುರ, ಮಲೇಷ್ಯಾಗಳಿಗೆ ತೆರಳಿದರೆ ವೆಚ್ಚ ಹೆಚ್ಚಾಗುತ್ತದೆ ಎಂದು ಅನೇಕರು ಬ್ಯಾಂಕಾಕ್‌ಗೆ ತೆರಳಿ ಅಲ್ಲಿಂದ ಬೇರೆಡೆಗೆ ಪ್ರವಾಸಕ್ಕೆ ಹೋಗುತ್ತಾರೆ.

ಥಾಯ್ಲೆಂಡ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ 10 ವರ್ಷದಲ್ಲಿ ದುಪ್ಪಟ್ಟಾಗಿದೆ. 2008ರಲ್ಲಿ 4.5 ಲಕ್ಷದಷ್ಟಿದ್ದ ಪ್ರವಾಸಿಗರ ಸಂಖ್ಯೆ 2015ರ ವೇಳೆಗೆ ಒಂದು ಕೋಟಿ ದಾಟಿದೆ.

ಗಗನಚುಂಬಿ ಕಟ್ಟಡಗಳ ಕತಾರ್
ಕಡಿಮೆ ಮಳೆ ಬೀಳುವ ಶುಷ್ಕ ವಾತಾವರಣದ ಕತಾರ್‌ ದೇಶ ವಲಸಿಗರ ನಾಡು ಎಂದೇ ಪ್ರಸಿದ್ಧ. ಮೂಲ ನಿವಾಸಿಗಳು ಇಲ್ಲಿ ಅಲ್ಪಸಂಖ್ಯಾತರು. ಆದರೆ ತೈಲೋದ್ಯಮದ ಹಿಡಿತ ಅವರ ಕೈಲೇ ಇದೆ.

ದಕ್ಷಿಣಕ್ಕೆ ಸೌದಿ ಅರೇಬಿಯಾ, ಉಳಿಂದತೆ ಪರ್ಷಿಯಾದ ಕೊಲ್ಲಿಯಿಂದ ಸುತ್ತುವರಿದು ಪಶ್ಚಿಮ ಏಷ್ಯಾದ ಅರೇಬಿಯಾದ ದ್ವೀಪಕಲ್ಪದಲ್ಲಿ ಕತಾರ್‌ಗೆ  ಅರೆಬಿಕ್ ಬಾಷೆಯಲ್ಲಿ ‘ದವ್ಲತ್ ಕತಾರ್’ ಎನ್ನುತ್ತಾರೆ.

ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ರಾಜಧಾನಿ ದೊಹಾದಲ್ಲಿ 50ಕ್ಕೂ ಹೆಚ್ಚು ಗಗನಚುಂಬಿ ಕಟ್ಟಡಗಳಿವೆ. ‘ದುಬೈ ಟವರ್’ ಅತ್ಯಂತ ದೊಡ್ಡದಾಗಿದ್ದು, ಎತ್ತರ ಕಟ್ಟಡಗಳ ನಿರ್ಮಾಣದಲ್ಲಿ ಪೈಪೋಟಿ ನಡೆಯುತ್ತಲೇ ಇದೆ.

ಇಸ್ಲಾಂ ಕಲೆಯ ವಸ್ತುಸಂಗ್ರಹಾಲಯ, ಅಸ್ಟೈಯರ್ ಟವರ್, ಎಜುಕೇಷನ್ ಸಿಟಿ, ಲುಸೇಲ, ಅಲ್ ವಾಭ್ ಸಿಟಿ, ದಿ ಪಲರ್್, ದೊಹಾ ಸ್ಕೈಲೈನ್ ಅಟ್ ನೈಟ್ ಸೇರಿದಂತೆ ಹತ್ತಾರು ಪ್ರವಾಸಿ ಸ್ಥಳಗಳಿವೆ. 2022ರ ಫೀಫಾ ವಿಶ್ವಕಪ್ ಪಂದ್ಯ ಕತಾರ್‌ನಲ್ಲಿ ನಡೆಯಲಿದೆ.

ನಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಅನಿಲವೂ ಕತಾರ್‌ನಿಂದಲೇ ಬಂದಿರಬಹುದು. ಏಕೆಂದರೆ ಕತಾರ್ ಭಾರತದ ಪಾಲಿಗೆ ಪ್ರಮುಖ ಎಲ್ಎನ್‌ಜಿ ಪೂರೈಕೆದಾರ ರಾಷ್ಟ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT