ADVERTISEMENT

‘ಸಾಹೊ’ಗೆ ಎವೆಲಿನ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಎವೆಲಿನ್ ಶರ್ಮ
ಎವೆಲಿನ್ ಶರ್ಮ   

ಪ್ರಭಾಸ್‌ ಅಭಿನಯದ ‘ಸಾಹೊ’ ಚಿತ್ರಕ್ಕೆ ಮತ್ತೊಬ್ಬ ಬಾಲಿವುಡ್‌ ಬೆಡಗಿ ಸೇರ್ಪಡೆಯಾಗಿದ್ದಾರೆ. ಭಾರತ ಸಂಜಾತೆ,  ಜರ್ಮನಿಯ ರೂಪದರ್ಶಿ ಎವೆಲಿನ್‌ ಶರ್ಮ ‌ತ್ರಿಭಾಷಾ ಚಿತ್ರ ‘ಸಾಹೊ’ದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದಾರೆ.

‘ಆ್ಯಕ್ಷನ್‌ ಸಿನಿಮಾದಲ್ಲಿ ನಟಿಸುವುದು ನನ್ನ ಕನಸಾಗಿತ್ತು. ಈಗ ‘ಸಾಹೊ’ಗೆ ಎಂಟ್ರಿ ಕೊಟ್ಟಿದ್ದೇನೆ. ಇದಕ್ಕಿಂತ ದೊಡ್ಡ ಅವಕಾಶವನ್ನು ಸದ್ಯ ಎದುರು ನೋಡುವುದು ಸಾಧ್ಯವಿಲ್ಲ’ ಎಂದು ಎವೆಲಿನ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಎವೆಲಿನ್‌ ಈಗಾಗಲೇ ಅಬುಧಾಬಿಗೆ ಹಾರಿದ್ದು ‘ಸಾಹೊ’ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲಿ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗಿದೆ. ತಮ್ಮ ಪಾತ್ರದ ಬಗ್ಗೆ ಎವೆಲಿನ್‌ ಏನೂ ಹೇಳದಿದ್ದರೂ ಈ ಪಾತ್ರಕ್ಕಾಗಿ 10 ಕೆ.ಜಿ. ತೂಕ ಇಳಿಸಿಕೊಂಡಿರುವುದಕ್ಕೆ ಅವರ ಇನ್‌ಸ್ಟಾಗ್ರಾಂ ಫೋಟೊಗಳೇ ಸಾಕ್ಷಿ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಆಗಾಗ ಸಖತ್‌ ಹಾಟ್‌ ಫೋಟೊಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಲ್ಲಿರಲು ಪ್ರಯತ್ನಿಸುವ ಎವೆಲಿನ್‌ ಶರ್ಮಾ, ‘ಸಾಹೊ’ದಲ್ಲಿ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.