ADVERTISEMENT

ಸೌಲಭ್ಯಗಳ ನಗರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಸೌಲಭ್ಯಗಳ ನಗರ
ಸೌಲಭ್ಯಗಳ ನಗರ   

ನಾನು ದೇಶದ ಬಹುತೇಕ ದೊಡ್ಡ ನಗರಗಳನ್ನು ನೋಡಿದ್ದೇನೆ. ಆದರೆ, ಇಲ್ಲಿಯ ಹವಾಮಾನ ಜನರ ಸಜ್ಜನಿಕೆ ದೇವಸ್ಥಾನಗಳು, ಹಳೇ ಬೆಂಗಳೂರಿನ ಪ್ರಸಿದ್ಧ ಪ್ರದೇಶಗಳು ಸುಂದರವಾದ ಪಾರ್ಕ್‌ಗಳು ಎಲ್ಲವೂ ಇದೆ.

ಸದಾಶಿವನಗರ, ಜಯನಗರ, ಎಂ.ಜಿ.  ರಸ್ತೆಯಲ್ಲಿ ಓಡಾಡುವುದೇ ರೋಮಾಂಚನ. ಹಳೇ ಹೋಟೆಲ್‌ಗಳ ಜನಪ್ರಿಯತೆ, ಹೊಸ ಹೋಟೆಲ್‌ಗಳ  ಆಕರ್ಷಣೆ, ಚೈನೀಸ್‌ ಆಹಾರ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತದೆ. 

ಪ್ರವಾಸಿತಾಣಗಳು, ನಗೆಕೂಟಗಳು, ಪಾರ್ಟಿ, ಪಿಕ್‌ನಿಕ್‌ ಅಂತ ಖುಷಿಯಾಗಿರುವ ಜನರಿದ್ದಾರೆ. ಒಂಟಿಯಾಗಿರುವವರಿಗೆ ಆಶ್ರಯತಾಣಗಳಿವೆ. ಮನೆ ಕೆಲಸ, ಮಕ್ಕಳ ಆರೈಕೆಗೆ ಜನ ಸಿಗುತ್ತಾರೆ. ಆಧುನಿಕ ಆಸ್ಪತ್ರೆಗಳಿವೆ. ಮಲೆನಾಡು ಬಿಟ್ಟು ಇಲ್ಲಿಗೆ ಬರುವಾಗ ಇದ್ದ ಭಯ ಈಗಿಲ್ಲ. ಎಲ್ಲರಿಗೂ ಇಲ್ಲಿ ಕೆಲಸ ಸಿಗುತ್ತದೆ. ಪರರಾಜ್ಯದವರು, ವಿದೇಶದವರೂ ಇಷ್ಟಪಡುವ ನಗರ ನನ್ನ ಬೆಂಗಳೂರು.

- ನಳಿನಿ ಆರ್‌.ಗಂಗಮ್ಮ ವೃತ್ತ, ಜಾಲಹಳ್ಳಿ ಈಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.