ADVERTISEMENT

ಹಕ್ಕಿ ಜ್ವರ ಕೋಳಿ ಇನ್ನೂ ಕೂಗುತ್ತಿದೆ!

ಪವಿತ್ರ ಶೆಟ್ಟಿ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಕೇಳಿದ್ದು ಕೊಡುತ್ತೇವೆ.
ಹಕ್ಕಿ ಜ್ವರ ಎಂದ ಕೂಡಲೇ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿಯೂ ಭಯವಿರುತ್ತದೆ. ಕೋಳಿ ತಿನ್ನುವುದಕ್ಕೆ ಹಿಂದುಮುಂದು ನೋಡುತ್ತಾರೆ. ಆದರೆ ನಮ್ಮ ಹೊಟೇಲ್‌ನಲ್ಲಿ ಯಾರಿಗೂ ಒತ್ತಾಯ ಮಾಡಿಲ್ಲ. ಜನ ಬಂದು ತಮಗೆ ಇಷ್ಟವಾದ ಐಟಂ ತೆಗೆದುಕೊಂಡು ಹೋಗುತ್ತಾರೆ.
 
ನಾನು ಕೂಡ ಮನೆಯಲ್ಲಿ ಕೋಳಿ ಸಾರು ತಿನ್ನುತ್ತೇನೆ. ಇದು ಹೆಸರಘಟ್ಟದ ಒಂದು ಫಾರಂನಲ್ಲಿ ಮಾತ್ರ ಕಂಡು ಬಂದಿದ್ದು. ಎಲ್ಲಾ ಕಡೆ ಇದು ಹರಡಲಿಲ್ಲ. ಎರಡು ವಾರದಿಂದ ಕೆಲವರು ಕೋಳಿಯ ಬದಲಿಗೆ ಮೀನು ಮತ್ತು ಕುರಿ ಮಾಂಸ ಕೇಳುತ್ತಾರೆ. ಜನ ಯಾವುದು ಇಷ್ಟಪಡುತ್ತಾರೋ ಅದನ್ನೇ ನಾವು ಕೊಡುತ್ತೇವೆ.


ನಾವು ಕೂಡ ಜನರ ಆರೋಗ್ಯದ ದೃಷ್ಟಿಯಿಂದ ಒಳ್ಳೆ ಕಡೆಯಿಂದ ಕೋಳಿ ತರಿಸುತ್ತೇವೆ. ಅದೂ ಅಲ್ಲದೇ ಈಗ ಹೆಸರಘಟ್ಟದಲ್ಲಿ ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯ ಸಮಸ್ಯೆಯಿಲ್ಲ. ನಮ್ಮ ವ್ಯಾಪಾರದ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ.
ಪುಳಿಮುಂಚಿ ಹೋಟೇಲ್‌ನ ಮಾಲಕಿ ಸೀಮಾ.

ಮೀನು, ಕುರಿಗೆ ಬೇಡಿಕೆ
2006ರಲ್ಲಿ ಬಂದ ಹಕ್ಕಿಜ್ವರದಷ್ಟು ಪರಿಣಾಮ ಈ ಬಾರಿ ಆಗಿಲ್ಲ. ಆದರೆ ಆರೋಗ್ಯದ ಬಗ್ಗೆ ತುಂಬಾ ಕಾಳಜಿಯುಳ್ಳವರು ಕೋಳಿಯ ಬದಲಿಗೆ ಮೀನು ಮತ್ತು ಕುರಿಯ ಮಾಂಸ ತೆಗೆದುಕೊಳ್ಳುತ್ತಾರೆ. ಒಳ್ಳೆಯ ಪೂರೈಕೆದಾರರ ಬಳಿ ಕೋಳಿ

ತೆಗೆದುಕೊಳ್ಳಬೇಕು. ಜನರ ಆರೋಗ್ಯದ ಜವಾಬ್ದಾರಿ ನಮ್ಮ ಮೇಲೂ ಇದೆ. ಹಕ್ಕಿ ಜ್ವರ ಬಂತು ಎಂದು ನಾನೇನು ಕೋಳಿ ತಿನ್ನುವುದು ಬಿಟ್ಟಿಲ್ಲ. ಆದರೂ ಹಕ್ಕಿಜ್ವರದಿಂದಾಗಿ ಇತ್ತೀಚೆಗೆ ಮೀನು ಇನ್ನಿತರೆ ಮಾಂಸಗಳ ಬೇಡಿಕೆ ಹೆಚ್ಚಾಗಿದ್ದಂತೂ ನಿಜ.



ಕೋಳಿ ಮಾಂಸವನ್ನು ಚೆನ್ನಾಗಿ ತೊಳೆಯಬೇಕು. ಅದನ್ನು ಸೂಕ್ತ ರೀತಿಯಲ್ಲಿ ಶೇಖರಣೆ ಮಾಡಬೇಕು. ಮಾಂಸವನ್ನು ಕತ್ತರಿಸುವ ಬೋರ್ಡ್, ಚಾಕುವನ್ನು ಬದಲಿಸುತ್ತಾ ಇರಬೇಕು.
ಭಗಿನಿ ಗ್ರೂಫ್ ಆಫ್ ಹೋಟೆಲ್‌ನ ಪ್ರಧಾನ ವ್ಯವಸ್ಥಾಪಕ ಶಿವಲಿಂಗಯ್ಯ

ಯಾರೂ ಪ್ರಶ್ನಿಸಿಲ್ಲ
ನಮ್ಮ ಹೊಟೇಲ್‌ಗೆ ಬರುವ ಜನ ಹಕ್ಕಿಜ್ವರದ ಬಗ್ಗೆ ಯಾವುದೇ ಪ್ರಶ್ನೆಯನ್ನೂ ಕೇಳಿಲ್ಲ. ವ್ಯಾಪಾರದ ಮೇಲೂ ಇದರಿಂದ ಪರಿಣಾಮವಾಗಿಲ್ಲ. ಎಂದಿನಂತೆಯೇ ಬಂದು ಕೋಳಿ ಸುಕ್ಕಾ, ಬಿರಿಯಾನಿ ತೆಗೆದುಕೊಂಡು ಹೋಗುತ್ತಾರೆ.  ನಾವು ಗೋದ್ರೆಜ್ ಚಿಕನ್

ADVERTISEMENT

ಸೆಂಟರ್‌ನಿಂದ ಕೋಳಿ ತೆಗೆದುಕೋಳ್ಳುತ್ತೇವೆ. ಗ್ರಾಹಕರಿಂದಲೂ ಯಾವುದೇ ರೀತಿಯ ದೂರು ಬಂದಿಲ್ಲ.

ಕ್ರೆಸೆಂಟ್ ಹೊಟೇಲ್‌ನ ಜನರಲ್ ಮ್ಯಾನೇಜರ್ ಗಿರೀಶ್


ಕೈಯಲ್ಲಿ ಬಿರಿಯಾನಿ ಬಾಯಲ್ಲಿ ಹಕ್ಕಿಜ್ವರ

ಚಿಕನ್ ಬಿರಿಯಾನಿ ಪಾರ್ಸೆಲ್ ಕೈಯಲ್ಲಿ ಹಿಡಿದುಕೊಂಡು ಹಕ್ಕಿಜ್ವರ ಬಂದಿದೆಯಂತೆ ಹೌದಾ? ಎಂದು ಪ್ರಶ್ನೆ ಕೇಳುತ್ತಾರೆ. ಚಿಕನ್ ಪ್ರಿಯರು ಜಾಸ್ತಿ ಇದ್ದಾರೆ. 2006ರಲ್ಲಿ ಇದೇ ರೀತಿ ಹಕ್ಕಿ ಜ್ವರ ಬಂದಿತ್ತು. ಆಗ ವ್ಯಾಪಾರದಲ್ಲಿ ತುಂಬಾನೇ ನಷ್ಟ ಆಗಿತ್ತು.

ಆದರೆ ಈ ಬಾರಿ ಹಾಗೆ ಆಗಿಲ್ಲ. ಕೆಲವರು ಚಿಕನ್ ಬಿರಿಯಾನಿ ಬದಲಿಗೆ ಮಟನ್ ಬಿರಿಯಾನಿ, ಮೀನಿನ ಸಾಂಬಾರ್ ತೆಗೆದುಕೊಳ್ಳುತ್ತಾರೆ. ಮೊದಲ ವಾರದಲ್ಲಿ ಸ್ವಲ್ಪಮಟ್ಟಿಗೆ ಬಿರಿಯಾನಿ ಕೇಳುವವರು ಕಡಿಮೆ ಇದ್ದರು. ಆದರೆ ಈಗ ಮತ್ತೆ ಬೇಡಿಕೆ ಹೆಚ್ಚುತ್ತಿದೆ.ಜನರ ಆರೋಗ್ಯದ ಬಗ್ಗೆ ನಾವು ಕೂಡ ಕಾಳಜಿ ವಹಿಸುತ್ತೇವೆ. ಹಾಗಾಗಿ ಒಳ್ಳೆಯ ಕಡೆಯಿಂದ ಕೋಳಿಗಳನ್ನು ತರುತ್ತೇವೆ.

ಯಾಕೆಂದರೆ ಈ ವ್ಯಾಪಾರ ಒಂದು ದಿನದ ಕಾಯಕವಲ್ಲ. ಸ್ವಚ್ಫತೆಗೆ ಮೊದಲ ಆದ್ಯತೆ. ಜನಕ್ಕೆ ನಂಬಿಕೆ ಇದ್ದರೆ ಮಾತ್ರ ಹೋಟೆಲ್‌ಗೆ ಬರುತ್ತಾರೆ. ಹಾಗಾಗಿ ಅವರ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ.

ಬಿರಿಯಾನಿ ಮನೆ~ ಮಾಲೀಕ ಶಂಕರ ಶೆಟ್ಟಿ.   

ಗಂಭೀರ ಸಮಸ್ಯೆಗಳು ಸಾಕಷ್ಟಿವೆ
ಹಕ್ಕಿಜ್ವರ ಒಂದು ಸಮಸ್ಯೆ ಹೌದು. ಆದರೆ ನಗರದಲ್ಲಿ ಹಾಗೂ ದೇಶದಲ್ಲಿ ಇನ್ನೂ

ಗಂಭೀರವಾದ ಸಮಸ್ಯೆಗಳೂ ಸಾಕಷ್ಟಿವೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಚಿಸಬೇಕು. ನಾನು ಅಪರೂಪಕ್ಕೊಮ್ಮೆ ತಿನ್ನುತ್ತೇನೆ. ಆದಷ್ಟು ಹಣ್ಣು, ಚಪಾತಿ ತಿನ್ನುತ್ತೇನೆ.
ನಟ ಸುದೀಪ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.