ADVERTISEMENT

ಅತ್ಯಾಚಾರ, ಆಸ್ತಿ ಮುಟ್ಟುಗೋಲು: ಸುಗ್ರೀವಾಜ್ಞೆಗೆ ಅಂಕಿತ

ಪಿಟಿಐ
Published 23 ಏಪ್ರಿಲ್ 2018, 4:11 IST
Last Updated 23 ಏಪ್ರಿಲ್ 2018, 4:11 IST
ಅತ್ಯಾಚಾರ, ಆಸ್ತಿ ಮುಟ್ಟುಗೋಲು: ಸುಗ್ರೀವಾಜ್ಞೆಗೆ ಅಂಕಿತ
ಅತ್ಯಾಚಾರ, ಆಸ್ತಿ ಮುಟ್ಟುಗೋಲು: ಸುಗ್ರೀವಾಜ್ಞೆಗೆ ಅಂಕಿತ   

ನವದೆಹಲಿ: 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ರಾತ್ರಿಯೇ ಅಂಕಿತ ಹಾಕಿದ್ದಾರೆ.

‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ’ಗೆ(ಪೋಕ್ಸೊ) ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದ ಕೇಂದ್ರ ಸಂಪುಟ ಆ ಪ್ರಸ್ತಾಪ ವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿತ್ತು.

ಸುಗ್ರೀವಾಜ್ಞೆ ಕೈಸೇರಿದ ಕೆಲವೇ ಗಂಟೆಯಲ್ಲಿ ರಾಷ್ಟ್ರಪತಿ ಹಸಿರು ನಿಶಾನೆ ತೋರಿಸಿದ್ದಾರೆ. ಭಾನುವಾರ ಈ ಸಂಬಂಧ ಗೆಜೆಟ್‌ ಸುತ್ತೋಲೆಯನ್ನೂ ಹೊರಡಿಸಲಾಗಿದೆ.

ADVERTISEMENT

‘ದೇಶದಲ್ಲಿ ಇತ್ತೀಚಿನ ಬೆಳವಣಿಗೆ ಗಮನಿಸಿದಾಗ ಕಠಿಣ ಕಾಯ್ದೆಯ ಅಗತ್ಯವಿರುವುದು ರಾಷ್ಟ್ರಪತಿಗೆ ಮನವರಿಕೆಯಾಗಿದೆ. ಸಂವಿಧಾನದತ್ತ ಅಧಿಕಾರ ಬಳಸಿಕೊಂಡು ಅವರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.

ಮುಟ್ಟುಗೋಲಿಗೂ ಒಪ್ಪಿಗೆ: ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೆ ಪೂರಕವಾದ ಮತ್ತೊಂದು ಸುಗ್ರೀವಾಜ್ಞೆಗೂ ರಾಷ್ಟ್ರಪತಿ ಒಪ್ಪಿಗೆನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಕೇಂದ್ರ ಸಂಪುಟ ಸಭೆ ಈ ಸುಗ್ರೀವಾಜ್ಞೆಗೂ ಅನುಮೋದನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.