ADVERTISEMENT

ಅಧಿಕಾರಕ್ಕೆ ನಾಯಕರ ಹಪಹಪಿ: ಪ್ರಿಯಾಂಕಾ

​ಪ್ರಜಾವಾಣಿ ವಾರ್ತೆ
Published 2 ಮೇ 2014, 11:16 IST
Last Updated 2 ಮೇ 2014, 11:16 IST

ಅಮೇಠಿ(ಪಿಟಿಐ): ನರೇಂದ್ರ ಮೋದಿ ಅವರ ವಿರುದ್ಧ ವಾಕ್ಸಮರ ಮುಂದುವರಿಸಿರುವ ಪ್ರಿಯಾಂಕಾ ಗಾಂಧಿ, ‘ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಮುಖಂಡರೊಬ್ಬರು ‘ಶಕ್ತಿ ನೀಡಿ’ ಎಂದು ಪದೇ ಪದೇ ಬೇಡಿಕೆ ಮುಂದಿಡುತ್ತಿದ್ದಾರೆ’ ಎಂದು ಶುಕ್ರವಾರ ಮೋದಿ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ತಾಯಿ ಸೋನಿಯಾ ಗಾಂಧಿ ಪರ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ, 'ನಮ್ಮ ಕುಟುಂಬದ ಬಗ್ಗೆ ಆಧಾರ ರಹಿತ ಆರೋಪಗಳಿರುವ ಪುಸ್ತಕಗಳನ್ನು ಚುನಾವಣಾ ಪೂರ್ವದ ದಿನ ಕ್ಷೇತ್ರಗಳಲ್ಲಿ ತಂದು ಸುರಿಯಲಾಗುತ್ತಿದೆ' ಎಂದು ದೂರಿದರು.

ರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜಕೀಯ ಎಂಬುದು ಸೇವೆಗಾಗಿ ಇರುವಂತಹದ್ದು. ಆದರೆ, ರಾಷ್ಟ್ರದ ಕೆಲ ನಾಯಕರು ಈ ಬಗ್ಗೆ ಯೋಚಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
 
ಆದರೆ, ರಾಷ್ಟ್ರೀಯ ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರದ್ದು ಬೇಡಿಕೆಯ ರಾಜಕೀಯ ಅಲ್ಲ. ನಿಷ್ಠೆಯಿಂದ ಕೂಡಿದ ಸೇವೆಯ ಉದ್ದೇಶದ್ದು ಎಂದು ಪ್ರಿಯಾಂಕಾ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.