ADVERTISEMENT

ಅಧಿಕಾರ ಹೊಸ ಪೀಳಿಗೆಗೆ

ಬಿಜೆಪಿ ಸಂಸದೀಯ ಮಂಡಳಿಗೆ ಚೌಹಾಣ್‌, ನಡ್ಡಾ ಪ್ರವೇಶ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ನವದೆಹಲಿ (ಪಿಟಿಐ): ಬಿಜೆಪಿ ಸಂಸ­ದೀಯ ಮಂಡಳಿಯಿಂದ ಅತ್ಯಂತ ಹಿರಿಯರಾದ ಹಾಗೂ ‘ತ್ರಿಮೂರ್ತಿ­ಗಳು’ ಎಂದೇ ಹೆಸರಾದ ಎ.ಬಿ. ವಾಜ­ಪೇಯಿ, ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಕೈಬಿಡಲಾಗಿದೆ.

ಪಕ್ಷದ ಅತ್ಯುನ್ನತ ನಿರ್ಧಾರ ಸಮಿತಿ­ಯಿಂದ ಈ ಮೂವರನ್ನು ಕೈಬಿಡುವ ಮೂಲಕ ಪಕ್ಷದ ಹಿಡಿತವು ‘ಹೊಸ ಪೀಳಿಗೆ’ಗೆ ಸಂಪೂರ್ಣ ವರ್ಗಾವಣೆ­ಗೊಂಡಂತೆ ಆಗಿದೆ. ಅಲ್ಲದೇ, ಪಕ್ಷಕ್ಕೆ ಸಂಬಂಧಿಸಿದಂತೆ ಎಲ್ಲ ಹಂತಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಛಾಪು ನೆಲೆಗೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಈಗ ಈ ಮೂವರನ್ನು ಸಾಂಕೇತಿಕ ಗೌರವದ ದೃಷ್ಟಿ­ಯಿಂದ ಐವರು ಸದ­ಸ್ಯರ ‘ಮಾರ್ಗದರ್ಶಕ ಮಂಡಲ್‌’ಗೆ ಸೇರಿಸಿಕೊಳ್ಳಲಾಗಿದೆ. ಮೋದಿ, ರಾಜ­ನಾಥ್‌ ಸಿಂಗ್‌ ಈ ಮಂಡಳಿಯ ಇನ್ನಿಬ್ಬರು ಸದಸ್ಯರು.

ಪಕ್ಷದ ಹೊಸ ಅಧ್ಯಕ್ಷ ಅಮಿತ್‌ ಷಾ ಅವರ ನೇತೃತ್ವದಲ್ಲಿ ಪುನರ್‌ರಚಿತವಾಗಿರುವ ಈ ಮಂಡಳಿಗೆ ಮೂರನೇ ಬಾರಿಗೆ ಮಧ್ಯಪ್ರದೇಶ

ಸ್ಥಾಪಕರು ವೃದ್ಧಾಶ್ರಮಕ್ಕೆ...

ಪಕ್ಷದ ಸ್ಥಾಪಕ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಅವ­ರನ್ನು ಸಂಸದೀಯ ಮಂಡಳಿಯಿಂದ ಕೈಬಿಡುವ ಮೂಲಕ ಬಿಜೆಪಿ ಅವರಿಬ್ಬರನ್ನೂ ವೃದ್ಧಾಶ್ರಮಕ್ಕೆ ಕಳುಹಿಸಿದೆ. ಪಕ್ಷದ ‘ಮಾರ್ಗ­ದರ್ಶಕ ಮಂಡಳಿ’ಯು ಕೇವಲ ‘ಮೂಕದರ್ಶಕ ಮಂಡಳಿ’ಯಾಗಿರಲಿದೆ.
– ರಶೀದ್‌ ಅಲ್ವಿ, ಕಾಂಗ್ರೆಸ್‌ ನಾಯಕ

ಸಿಇಸಿ ಸದಸ್ಯರು
ನರೇಂದ್ರ ಮೋದಿ, ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ವೆಂಕಯ್ಯ ನಾಯ್ಡು, ನಿತಿನ್‌ ಗಡ್ಕರಿ, ಅನಂತಕುಮಾರ್‌, ತಾವರ್‌ಚಂದ್‌ ಗೆಹ್ಲೋಟ್‌, ಶಿವರಾಜ್‌ ಸಿಂಗ್‌ ಚೌಹಾಣ್‌, ರಾಮ್‌ಲಾಲ್‌, ಷಹನವಾಜ್‌ ಹುಸೇನ್‌, ವಿಜಯಾ ರಾಹತ್‌ಕರ್‌

ಸಂಸದೀಯ ಮಂಡಳಿ ಸದಸ್ಯರು
ನರೇಂದ್ರ ಮೋದಿ, ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ವೆಂಕಯ್ಯ ನಾಯ್ಡು, ನಿತಿನ್‌ ಗಡ್ಕರಿ, ಅನಂತ್‌ಕುಮಾರ್‌, ತಾವರ್‌ಚಂದ್‌ ಗೆಹ್ಲೋಟ್‌, ಶಿವರಾಜ್‌ ಸಿಂಗ್‌ ಚೌಹಾಣ್‌ , ಜಗತ್‌ ಪ್ರಕಾಶ್‌ ನಡ್ಡಾ ಮತ್ತು ರಾಮಲಾಲ್‌.

ADVERTISEMENT

ಮುಖ್ಯಮಂತ್ರಿ­ಯಾಗಿರುವ ಶಿವರಾಜ್‌ ಸಿಂಗ್‌ ಚೌಹಾಣ್‌,  ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಪಿ.ನಡ್ಡಾ ಅವರು ಹೊಸ­ದಾಗಿ ಪ್ರವೇಶಿಸಿದ್ದಾರೆ. ಚುನಾವಣಾ ಕಣಕ್ಕೆ ಅಭ್ಯರ್ಥಿ­ಗಳನ್ನು ನಿರ್ಧರಿಸುವ ಪಕ್ಷದ ಕೇಂದ್ರ ಚುನಾವಣಾ ಸಮಿತಿಯಲ್ಲೂ ಈ ಇಬ್ಬರು ಅವಕಾಶ ಪಡೆದಿದ್ದಾರೆ.

ಕರ್ನಾಟಕದ ನಾಯಕ ಅನಂತ್‌ಕುಮಾರ್‌ ಅವ­ರನ್ನು ಕೈಬಿಡುವ ಸಾಧ್ಯತೆ ಇದೆ ಎಂಬ ವದಂತಿಗಳು ಕೇಳಿಬಂದಿದ್ದರೂ ಅವರ ಸ್ಥಾನ ಅಬಾಧಿತವಾಗಿದೆ.

ಅಮಿತ್‌ ಷಾ ಅವರು ಬಿಜೆಪಿ ವರಿಷ್ಠರೊಂದಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ ನಂತರ ಈ ಬದಲಾವಣೆಗಳನ್ನು ಮಾಡಿ­ದ್ದಾರೆ. ವಾಜಪೇಯಿ ಅವರು ಅನಾರೋಗ್ಯ­ದಿಂದಾಗಿ ಸುಮಾರು 10 ವರ್ಷಗಳಿಂದ ಸಾರ್ವ­ಜನಿಕ ಜೀವನ­ದಿಂದ ದೂರವಿದ್ದರೂ, ಅವರನ್ನು ಎನ್‌ಡಿಎ ಅಧ್ಯಕ್ಷ­ರನ್ನಾಗಿ ಉಳಿಸಿಕೊಳ್ಳಲಾಗಿತ್ತು. ಪಕ್ಷವನ್ನು ಮೋದಿ ಅವರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮುನ್ನ ಅಡ್ವಾಣಿ ಎನ್‌ಡಿಎ ಕಾರ್ಯಾಧ್ಯಕ್ಷರಾಗಿದ್ದರು.

ಇದೇ ವೇಳೆ ಕೇಂದ್ರ ಚುನಾವಣಾ ಸಮಿತಿಯನ್ನೂ (ಸಿಇಸಿ) ಪುನರ್‌ರಚಿಸಲಾಗಿದ್ದು, ಉತ್ತರ ಪ್ರದೇಶದ ವಿನಯ್‌ ಕಟಿಯಾರ್‌ ಅವರನ್ನು ಕೈಬಿಡಲಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಸರೋಜ್‌ ಪಾಂಡೆ ಅವರ ಜಾಗಕ್ಕೆ ಈಗಿನ ಮಹಿಳಾ ಮೋರ್ಚಾ ಮುಖ್ಯಸ್ಥೆ ವಿಜಯಾ ರಾಹತ್‌ಕರ್‌ ಅವ­ರನ್ನು ನೇಮಿಸಲಾಗಿದೆ. ಕೇಂದ್ರ ಬುಡಕಟ್ಟು ವ್ಯವ­ಹಾರಗಳ ಸಚಿವ ಜುಆಲ್‌ ಓರಾಮ್‌ ಅವರೂ ಈ ಸಮಿತಿಯಲ್ಲಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.