ADVERTISEMENT

ಅಮಿತಾಬ್‌ ಬಚ್ಚನ್‌ ಭಾರತದ ಶ್ರೇಷ್ಠ ಕಲಾವಿದ: ರಿಷಿ ಕಪೂರ್‌

ಪಿಟಿಐ
Published 18 ಜನವರಿ 2017, 8:02 IST
Last Updated 18 ಜನವರಿ 2017, 8:02 IST
ಅಮಿತಾಬ್‌ ಬಚ್ಚನ್‌ ಭಾರತದ ಶ್ರೇಷ್ಠ ಕಲಾವಿದ: ರಿಷಿ ಕಪೂರ್‌
ಅಮಿತಾಬ್‌ ಬಚ್ಚನ್‌ ಭಾರತದ ಶ್ರೇಷ್ಠ ಕಲಾವಿದ: ರಿಷಿ ಕಪೂರ್‌   

ನವದೆಹಲಿ: ‘ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಬ್‌ ಬಚ್ಚನ್‌ ಅವರನ್ನು ಭಾರತದ ಶ್ರೇಷ್ಠ ಕಲಾವಿದ’ ಎಂದು ನಟ ರಿಷಿ ಕಪೂರ್‌ ಬಣ್ಣಿಸಿದ್ದಾರೆ.

"ಖುಲ್ಲಂ ಖುಲ್ಲಾ ರಿಷಿ ಕಪೂರ್ ಅನ್ಸೆನ್ಸಾರ್ಡ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ ಸುನೀಲ್ ಸೇಥ್ ಅವರೊಂದಿಗೆ ನಡೆದ ಚರ್ಚೆಯಲ್ಲಿ ಅಮಿತಾಬ್‌ ಬಚ್ಚನ್‌ ಮತ್ತು ರಿಷಿ ಕಪೂರ್‌ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

‘1970– 80ರ ದಶಕದಲ್ಲಿ ಅಮಿತಾಬ್‌ ಬಚ್ಚನ್‌ ಅವರು ಅನುಸರಿಸಿದ ಹೊಸ ಪ್ರವೃತ್ತಿಯೇ ಅವರ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು ಎಂದು ರಿಷಿ ಕಪೂರ್‌ ಅಭಿಪ್ರಾಯಪಟ್ಟಿದ್ದಾರೆ.

1970– 80 ದಶಕದ ಸಿನಿಮಾರಂಗದ ಹಿನ್ನೋಟವನ್ನು ನೆನಪಿಸಿಕೊಂಡ ರಿಷಿ ಕಪೂರ್‌, ನಟನೆಗೆ ಸಂಬಂಧಿಸಿದಂತೆ ಸಹ ಕಲಾವಿದರು, ತಾರೆಯರು ಅಮಿತಾಬ್‌ ಬಚ್ಚನ್‌ ಅವರು ನಡೆದ ಹಾದಿಯನ್ನು ಅನುಸರಿಸುತ್ತಿದ್ದರು ಎಂದು ಹೇಳಿದ್ದಾರೆ.

‘ಹೆಚ್ಚು ಉಲ್ಲಸಿತನಾಗಿ, ಅತಿ ಆಸಕ್ತಿಯಿಂದ ನನ್ನ ಕೆಲಸದಲ್ಲಿ ಮಗ್ನನಾಗುತ್ತಿದ್ದೆ. ಅದೇ ಉತ್ಸಾಹವೇ ನನ್ನ ನಟನೆಯ ಯಶಸ್ಸಿಗೆ ಕಾರಣವಾಯಿತು’ ಎಂದು ರಿಷಿ ಕಪೂರ್‌ ತಮ್ಮ ಸಿನಿಮಾ ಬದುಕಿನ ಬಗ್ಗೆ ಮೆಲುಕು ಹಾಕಿದ್ದಾರೆ.

ರಿಷಿ ಕಪೂರ್‌, 74 ವರ್ಷದ ಅಮಿತಾಬ್‌ ಬಚ್ಚನ್‌ ಅವರೊಂದಿಗೆ ‘ಕಭೀ ಕಭೀ’, ‘ಅಮರ್ ಅಕ್ಬರ್ ಅಂತೋನಿ’, ‘ನಸೀಬ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.