ADVERTISEMENT

ಆಧಾರ್‌ ಸಂಖ್ಯೆ, ನೋಂದಣಿ ವಿವರ ಸಂಗ್ರಹಿಸುತ್ತಿದ್ದ 8 ಅನಧಿಕೃತ ವೆಬ್‌ಸೈಟ್‌ಗಳ ವಿರುದ್ಧ ಎಫ್‌ಐಆರ್‌

ಏಜೆನ್ಸೀಸ್
Published 19 ಏಪ್ರಿಲ್ 2017, 13:50 IST
Last Updated 19 ಏಪ್ರಿಲ್ 2017, 13:50 IST
ಆಧಾರ್‌ ಸಂಖ್ಯೆ, ನೋಂದಣಿ ವಿವರ ಸಂಗ್ರಹಿಸುತ್ತಿದ್ದ  8 ಅನಧಿಕೃತ ವೆಬ್‌ಸೈಟ್‌ಗಳ ವಿರುದ್ಧ ಎಫ್‌ಐಆರ್‌
ಆಧಾರ್‌ ಸಂಖ್ಯೆ, ನೋಂದಣಿ ವಿವರ ಸಂಗ್ರಹಿಸುತ್ತಿದ್ದ 8 ಅನಧಿಕೃತ ವೆಬ್‌ಸೈಟ್‌ಗಳ ವಿರುದ್ಧ ಎಫ್‌ಐಆರ್‌   

ನವದೆಹಲಿ: ಆಧಾರ್‌ ಸಂಬಂಧಿತ ಸೇವೆಗಳ ಭರವಸೆ ನೀಡಿ ಕಾನೂನು ಬಾಹಿರವಾಗಿ ಆಧಾರ್‌ ಸಂಖ್ಯೆ, ನೋಂದಣಿ ವಿವರವನ್ನು ಜನರಿಂದ ಪಡೆಯುತ್ತಿದ್ದ ಎಂಟು ಅನಧಿಕೃತ ವೆಬ್‌ಸೈಟ್‌ಗಳ ವಿರುದ್ಧ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ದೂರು ದಾಖಲಿಸಿದೆ.

aadhaarupdate.com, aadhaarindia.com, pvcaadhaar.in, aadhaarprinters.com, geteaadhaar.com, downloadaadhaarcard.in, aadharcopy.in, ಹಾಗೂ duplicateaadharcard.com ವೆಬ್‌ಸೈಟ್‌ಗಳು ಯುಐಡಿಎಐನಿಂದ ಅಧಿಕೃತಗೊಂಡಿವೆ ಎಂದು ನಂಬಿಸಿ ಜನರಿಂದ ಆಧಾರ್‌ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ಪಡೆದುಕೊಂಡಿವೆ.

ಅನಧಿಕೃತ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದರೂ ಕೆಲ ಹೊಸ ವೆಬ್‌ಸೈಟ್‌ಗಳು ಕಾರ್ಯಾರಂಭಿಸಿದ್ದವು, ಹಾಗಾಗಿ ಎಂಟು ವೆಬ್‌ಸೈಟ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಯುಐಡಿಎಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದರು.

ADVERTISEMENT

ಈವರೆಗೆ 113 ಕೋಟಿಗೂ ಹೆಚ್ಚು ಆಧಾರ್‌ ಗುರುತಿನ ಕಾರ್ಡ್‌ ನೀಡಲಾಗಿದ್ದು, ಆಧಾರ್‌ ಸಂಬಂಧಿತ ಯಾವುದೇ ಸೇವೆಗಳಿಗೆ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ uidai.gov.in ಬಳಸುವಂತೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.